ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ವಾಹನ ಸವಾರರ ಸ್ವರ್ಗ, ತಿರುವು ರಸ್ತೆಯ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಳೆ ಕಾಲಿಡುತ್ತಿದ್ದಂತೆ ನಿಸರ್ಗ ಸೌಂದರ್ಯ ಅನಾವರಣಗೊಳ್ಳತೊಡಗಿದೆ. ಮಳೆಗಾಲದಲ್ಲಿ ಈ ಘಾಟಿಯ ಸೌಂದರ್ಯ ವರ್ಣಿಸಲು ಅಸಾಧ್ಯ.
ಇದನ್ನೂ ಓದಿ; ಕೊಪ್ಪ: ಮೇಯುವಾಗ ಆಯಾ ತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದ ಹಸು
ಅಲ್ಲಲ್ಲಿ ಚಿಕ್ಕ-ಚಿಕ್ಕ ತೊರೆಗಳು, ಕಲ್ಲುಗಳ ಮೇಲಿಂದ ಧುಮ್ಮಿಕ್ಕುವ ನೀರು, ಒಂದನೇ ತಿರುವಿನಿಂದ ಆರಂಭವಾಗಿ ಮೇಲೆ ಹತ್ತಿದಂತೆ ತೀವ್ರಗೊಳ್ಳುವ ಮಂಜು, ಸುರಿಯುವ ಮಳೆ, ಕಡಿದಾದ ತಿರುವುಗಳು, ರಸ್ತೆ ಬದಿಯ ಆಳವಾದ ಕಮರಿಗಳು, ಸುತ್ತಲ ಪ್ರಕೃತಿ ಸೌಂದರ್ಯ, ಹಾದಿಯಲ್ಲಿ ಸಿಗುವ ಪಕ್ಷಿ, ಪ್ರಾಣಿಗಳು ಇವನ್ನೆಲ್ಲ ನೋಡುತ್ತಾ ಸಾಗುವಾಗ ದಾರಿ ಕ್ರಮಿಸಿದ್ದೆ ತಿಳಿಯುವುದಿಲ್ಲ
ಇದನ್ನೂ ಓದಿ; ಜಯಪುರ: ಸಹಕಾರ ಸಂಘದ ಕರ್ತವ್ಯ ನಿರತ ಕಾವಲುಗಾರನ ಮೇಲೆ ಹಲ್ಲೆ; ಆರೋಪಿಗಳಿಬ್ಬರ ಬಂಧನ
ಮೋಜು-ಮಸ್ತಿಗೆ ಬೀಳಬೇಕಿದೆ ಕಡಿವಾಣ:
ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿ ಸೌಂದರ್ಯ ವೀಕ್ಷಣೆಗೆ ಅವಕಾಶ ಇಲ್ಲದಿದ್ದರೂ, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ವೀಕ್ಷಣೆಗೆ ತೊಡಗುತ್ತಿದ್ದಾರೆ. ಅಗಲ ಕಿರಿದಾದಾಗ ಘಾಟಿ ಪರಿಸರದಲ್ಲಿ ಸಾಲು ಸಾಲು ವಾಹನಗಳು ನಿಲುಗಡೆಗೊಳ್ಳುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸುಗಮ ಸಂಚಾರಕ್ಕೆ ಭಾರಿ ಅಡ್ಡಿ ಉಂಟಾಗುತ್ತಿದೆ. ಘಾಟಿ ಪ್ರದೇಶದಲ್ಲಿ ಪ್ರಸ್ತುತ ಸದಾ ಮಂಜಿನ ವಾತಾವರಣವಿರುವುದರಿಂದ ರಸ್ತೆ ಬದಿ ನಿಲ್ಲುವ ವಾಹನಗಳು ತಕ್ಷಣ ಗಣನೆಗೆ ಬರಲು ಸಾಧ್ಯವಾಗುವುದಿಲ್ಲ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- debit card ಇಲ್ಲದೆಯೇ atmನಿಂದ ಹಣವನ್ನು ಸುಲಭವಾಗಿ ಪಡೆಯಬಹುದು
- ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಸೋರುತಿರುವ ಶಾಲೆ ಮಳಿಗೆ
- amarnath yatra: ಅಮರನಾಥ ಯಾತ್ರೆಗೆ ತೆರಳಿದ್ದ ಕಾಫಿನಾಡಿಗರು ಸೇಫ್
ಜಲಪಾತ, ತೊರೆಗಳ ಪ್ರದೇಶದಲ್ಲಿ ಅಪಾಯಕಾರಿ ಸ್ಥಳಗಳನ್ನು ಏರಿ ಇಳಿಯುವುದು, ಕಲ್ಲುಬಂಡೆಗಳನ್ನು ಹತ್ತುವುದು, ಕೂಡ ಕಂಡುಬರುತ್ತಿದೆ. ತಡೆಗೋಡೆ, ರಸ್ತೆ ಮಧ್ಯೆ ನಿಂತು ಸೆಲ್ಫಿ ಕ್ಲಿಕ್ಕಿಸುವ ಪ್ರವಾಸಿಗರು ಇತರ ವಾಹನ ಸವಾರರಿಗೆ ಸವಾಲಾಗಿದೆ. ರಸ್ತೆ ಮಧ್ಯದಲ್ಲಿ ನಿಂತು ನೃತ್ಯ ಮಾಡುವವರು ಇತರ ಪ್ರವಾಸಿಗರಿಗೆ ಮುಜುಗರ ತರುತ್ತಿದ್ದಾರೆ. ಘಾಟಿ ಪ್ರದೇಶದಲ್ಲಿ ನಡೆಯುತ್ತಿರುವ ಈ ಅನಗತ್ಯ ಚಟುವಟಿಕೆಗಳಿಗೆ ತಕ್ಷಣ ಕಡಿವಾಣ ಬೀಳಬೇಕಾದ ಅಗತ್ಯವಿದೆ.
ಇಲಾಖೆಯ ನಿರ್ಲಕ್ಷ:
ಚಿಕ್ಕಮಗಳೂರು ವಿಭಾಗದಲ್ಲಿ ಹೆಚ್ಚಿನ ಜಲಪಾತ, ತೊರೆ,ಹಳ್ಳಗಳಿದ್ದು ಈ ಪ್ರದೇಶದಲ್ಲಿ ವಾಹನ ಸವಾರರಿಗೆ ಪ್ರವಾಸಿಗರಿಂದ ಭಾರಿ ಸಮಸ್ಯೆ ಇದ್ದರೂ ಇಲ್ಲಿ ಯಾವುದೇ ಗಸ್ತು, ಅಗತ್ಯ ಸೂಚನಾ ಫಲಕಗಳು ಇಲ್ಲದಿರುವುದು ವಿಪರ್ಯಾಸವಾಗಿದೆ. ಇತ್ತೀಚೆಗೆ ಬಣಕಲ್ ನ ಸಂಘವೊಂದು ಘಾಟಿ ಪ್ರದೇಶದಲ್ಲಿ ಪ್ರವಾಸಿಗರ ಮೋಜು-ಮಸ್ತಿ ವಿರೋಧಿಸಿ ಅಭಿಯಾನ ನಡೆಸಿದರು ಅದು ಯಾವುದೇ ಪ್ರಯೋಜನ ನೀಡಿಲ್ಲ. ಇನ್ನದರೂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಾ ಎಂದು ಕಾದು ನೋಡಬೇಕಿದೆ.