Sunday, December 3, 2023
Homeಮಲೆನಾಡುಚಿಕ್ಕಮಗಳೂರುCharmadi Ghat: ಚಾರ್ಮಾಡಿ ಘಾಟ್​ನಲ್ಲಿ ದಟ್ಟ ಮಂಜು

Charmadi Ghat: ಚಾರ್ಮಾಡಿ ಘಾಟ್​ನಲ್ಲಿ ದಟ್ಟ ಮಂಜು

Charmadi Ghat: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನೋಡಲು ಪ್ರವಾಸಿಗರು ಕಿಕ್ಕಿರಿದು ಆಗಮಿಸಿದ್ದಾರೆ.

ಇದನ್ನೂ ಓದಿ; ಹಿಂದೂ ದೇಗುಲಗಳೇ ಟಾರ್ಗೆಟ್; 150 ವರ್ಷ ಹಳೆಯ ಹಿಂದೂ ದೇವಾಲಯ ನೆಲಸಮ

ಆದರೆ ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ವಾಹನ ಚಾಲನೆ ಮಾಡಲು ಸವಾರರು ಪರದಾಡಿದ್ದಾರೆ. ಹೌದು ಕಿರಿದಾದ ಸಾವಿರಾರು ಅಡಿ ಪ್ರಪಾತದ ರಸ್ತೆಯಲ್ಲಿ ವಾಹನ ಚಾಲನೆಗೆ ದಟ್ಟನೆಯು ಮಂಜು ಅಡ್ಡಿಯಾಗುತ್ತಿದೆ. ಇನ್ನು ಬೇರೆ ದಾರಿಯಿಲ್ಲದೆ ವಾಹನಗಳ ಹೆಡ್ ಲೈಟ್ ಹಾಕಿಕೊಂಡು ಸವಾರರು ಚಾಲನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಈ ವಾಹನಗಳ ಹೆಡ್‌ಲೈಟ್‌ಗಳು ಎದುರುಗಡೆ ಬರುವ ಸವಾರರ ಕಣ್ಣಿಗೆ ನೇರವಾಗಿ ಬೀಳುತ್ತಿದ್ದು, ಇದರಿಂದ ಕಿರಿಕಿರಿ ಅನುಭವಿಸುವಂತಾಗಿದೆ.

Charmadi Ghat:
Charmadi Ghat:

ಇದನ್ನೂ ಓದಿ; ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 17-07-2023

Charmadi Ghat: ಹಾಗೆಯೇ ಕಳೆದ ಮೂರು ನಾಲ್ಕು ದಿನಗಳಿಂದ ಚಾರ್ಮಾಡಿ ಘಾಟ್‌ನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಂಜು ಹೆಚ್ಚಾಗಿದೆ, ಸಣ್ಣ ಪ್ರಮಾಣದ ಮಳೆ ಹಾಗೂ ಮಂಜಿನ ಆಟಕ್ಕೆ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು 

ರುಕ್ಮಿಣಿ ಸಾವಿನ ನಂತರ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಣ್ಣನ್ ಆಡಿಯೋ ಲಭ್ಯವಾಗಿದೆ ಎಂದು ಆರೋಪಿಸಿರುವ ಪೋಷಕರು ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು: ಕಾಫಿನಾಡ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ; ಆರೇ ತಿಂಗಳಿಗೆ ಬಂದ ಟೂರಿಸ್ಟ್ ಎಷ್ಟು ಗೊತ್ತಾ..?

chikkamagaluru tourist: ಚಿಕ್ಕಮಗಳೂರು (ನ್ಯೂಸ್ ಮಲ್ನಾಡ್ ವರದಿ):  ಕಾಫಿನಾಡು ಕೇವಲ ಜಿಲ್ಲೆಯಲ್ಲ. ಧಾರ್ಮಿಕವಾಗಿ ಬಂದ್ರಂತು ಒಂದೆಡೆ ಅನ್ನ ನೀಡೋ ಅನ್ನದಾತೆ. ಇನ್ನೊಂದೆಡೆ ವಿದ್ಯೆ ನೀಡೋ ವಿದ್ಯಾದೇವತೆ. ಪ್ರವಾಸಿಗರಿಗಂತೂ ನಿಂತಲ್ಲೆ ಮೈಮರೆಸೋ ಹಾಟ್ ಸ್ಪಾಟ್. ಇಲ್ಲಿನ ಸುಂದರ ರಮಣೀಯ ತಾಣಗಳು ವರ್ಷಪೂರ್ತಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಲೇ ಇರುತ್ತೆ. ಪ್ರತಿ ವರ್ಷ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ.

ಇದನ್ನೂ ಓದಿ; ಜಯಪುರ: ಡಿಶ್ ರಿಪೇರಿ ಬಶೀರನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಹೊಡೆದ ಜನ

chikkamagaluru tourist: ದಾಖಲೆಯ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ:

ಹೌದು ಪ್ರತಿ ವರ್ಷ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಆದರೆ ಈ ವರ್ಷ ಅಂತೂ ಆರೇ ತಿಂಗಳಿಗೆ 30 ಲಕ್ಷ ಪ್ರವಾಸಿಗರು ಭೇಟಿ ನೀಡಿರುವುದು ಪ್ರವಾಸೋದ್ಯಮ ಇಲಾಖೆ ಅಂಕಿ ಅಂಶಗಳಿಂದ ಹೊರಬಂದಿದೆ.

ಗ್ಯಾರಂಟಿ ಯೋಜನೆಯದ್ದು ಇದೆ ಪಾಲು:

ಇಲ್ಲಿನ ಪ್ರಕೃತಿ ಸೌಂದರ್ಯವನ್ನ ಅನುಭವಿಸೋಕೆ ವರ್ಷ ಪೂರ್ತಿ ಪ್ರವಾಸಿಗರು ಹರಿದು ಬರ್ತಾರೆ. ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜೂನ್ ಒಂದೇ ತಿಂಗಳಿಗೆ ಜಿಲ್ಲೆಗೆ ಏಳು ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. 2023ರ ಜನವರಿಯಿಂದ ಜೂನ್ 30 ರವರೆಗೆ ಸುಮಾರು 30 ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು ಈ ವರ್ಷದ ಕೊನೆಗೆ ಜಿಲ್ಲೆಗೆ ಭೇಟಿ ನೀಡಿರೋ ಪ್ರವಾಸಿಗರ ಸಂಖ್ಯೆ ಕೋಟಿ ದಾಟೋದ್ರಲ್ಲಿ ಅನುಮಾನವಿಲ್ಲ. ಕಾಫಿನಾಡಿಗೆ ಪ್ರವಾಸಿಗರ ದಂಡು ಹರಿದು ಬರಲು ಒಂದು ಕಾರಣ ಗ್ಯಾರಂಟಿ ಸರ್ಕಾರದ ಶಕ್ತಿಯ ಯೋಜನೆಯ ಪಾಲು ಕೂಡ ಒಂದಷ್ಟು ಇದೆ ಅಂತನೆ ಹೇಳಬಹುದು.

Most Popular

Recent Comments