ಬಳ್ಳಾರಿ: ಸ್ನೇಹಿತರ ಜೊತೆಯಲ್ಲಿ ಹಳ್ಳದಲ್ಲಿ ಮೀನು ಹಿಡಿಯಲು ಹೋದ ಯುವಕ ನೀರು ಪಾಲಾದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಾಟೂರು ಗ್ರಾಮದಲ್ಲಿ ನಡೆದಿದೆ.
ಯಂಕೋಬ (28) ಸಾವನ್ನಪ್ಪಿದ ಯುವಕ. ಗ್ರಾಮದ ಪಕ್ಕದಲ್ಲಿ ಹರಿಯುತ್ತಿರುವ ಹಳ್ಳದಲ್ಲಿ ಮೀನು ಹಿಡಿಯಲು ಹೋದಾಗ ಈ ಘಟನೆ ಸಂಭವಿಸಿದೆ.
ಮೊದಲು ತೆಪ್ಪದಲ್ಲಿ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗಿದ್ದಂತಹ ಯಂಕೋಬ ಹಲವಾರು ಮೀನು ಹಿಡಿದು ತಂದಿದ್ದರು. ಹಿಡಿದಂತಹ ಮೀನುಗಳನ್ನು ಉಳಿದ ಸ್ನೇಹಿತರು ಹಳ್ಳದ ಪಕ್ಕದಲ್ಲಿ ತೊಳೆಯುತ್ತಾ ಕುಳಿತುಕೊಂಡಿದ್ದಾಗ ಯಂಕೋಬ ಪುನಃ ತಾನೊಬ್ಬನೇ ಮೀನುಗಳನ್ನು ಹಿಡಿದು ತರಲು ತೆಪ್ಪವನ್ನು ತೆಗೆದುಕೊಂಡು ಹಳ್ಳಕ್ಕೆ ಇಳಿದಿದ್ದ ಸಂದರ್ಭದಲ್ಲಿ ಹಳ್ಳದಲ್ಲಿ ಹರಿಯುತ್ತಿರುವಂತಹ ನೀರಿನ ರಭಸಕ್ಕೆ ತೆಪ್ಪವು ಸಿಲುಕಿ ಯುವಕ ನೀರು ಪಾಲಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಹೊರತೆಗೆದಿದ್ದಾರೆ. ಈ ಸಂಬAಧ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.