Friday, June 9, 2023
Homeರಾಜ್ಯಬೆಂಗಳೂರು : ಕಾರು ಡಿಕ್ಕಿ ಹೊಡೆದ ಪರಿಣಾಮ ಪಲ್ಟಿ ಹೊಡೆದ ಆಟೋ -ಮೂವರ ದುರ್ಮರಣ

ಬೆಂಗಳೂರು : ಕಾರು ಡಿಕ್ಕಿ ಹೊಡೆದ ಪರಿಣಾಮ ಪಲ್ಟಿ ಹೊಡೆದ ಆಟೋ -ಮೂವರ ದುರ್ಮರಣ

ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಆಟೋ ಹಾಗೂ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿ ಆಟೋ ಪಲ್ಟಿ ಹೊಡೆದ ಪರಿಣಾಮವಾಗಿ ಆಟೋದಲ್ಲಿದ್ದಂತಹ ನಾಲ್ವರಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ ಮತ್ತೋರ್ವ ಗಾಯಗೊಂಡಿರುವ ಘಟನೆ ಬೆಂಗಳೂರು-ಬೂದಿಗೆರೆ ರಸ್ತೆಯ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಕಿರಣ್, ಅನ್ವರ್ ಹುಸೇನ್, ಮತ್ತು ರಾಹುಲ್ ಮೃತ ದುರ್ದೈವಿಗಳು, ಕಿರಣ್ ಆಟೋ ಚಾಲಕನಾಗಿದ್ದು ಇನ್ನಿಬ್ಬರು ಪ್ರಯಾಣಿಕರಾಗಿದ್ದಾರೆ. ಅತಿ ವೇಗವಾಗಿ ಆಟೋ ಚಲಾಯಿಸುತ್ತಿದ್ದ ಕಿರಣ್ ತಪ್ಪಿನಿಂದ ಆಟೋ ಪಲ್ಟಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎದುರಿನಿಂದ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದಿದೆ, ಈ ವೇಳೆ ಚಾಲಕ ಕಿರಣ್ ಮತ್ತು ಪ್ರಯಾಣಿಕರಾಗ ಹುಸೇನ್ ಮತ್ತು ರಾಹುಲ್ ಸಾವನ್ನಪ್ಪಿದ್ದು ಮತ್ತೊಬ್ಬ ಪ್ರಯಾಣಿಕ ವಾಸಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರು ಚಾಲಕ ಸ್ಥಳದಲ್ಲೇ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ, ಆರೋಪಿಗಾಗಿ ಶೋಧ ನಡೆಸುತ್ತಿರುವುದಾಗಿ ತಿಳಿಸಿರುವುದಾಗಿ ಚಿಕ್ಕಜಾಲದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Most Popular

Recent Comments