Saturday, June 10, 2023
Homeರಾಜಕೀಯಮೃತ ಅಭಿಮಾನಿ ಕುಟುಂಬಕ್ಕೆ ಆರ್ಥಿಕ ನೆರವು : ಬಿ ಎಸ್ ಯಡಿಯೂರಪ್ಪ

ಮೃತ ಅಭಿಮಾನಿ ಕುಟುಂಬಕ್ಕೆ ಆರ್ಥಿಕ ನೆರವು : ಬಿ ಎಸ್ ಯಡಿಯೂರಪ್ಪ

ಚಾಮರಾಜನಗರ: ಬಿ ಎಸ್ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಂತಹ ಸುದ್ದಿ ಕೇಳಿ ಮನನೊಂದು ಆತ್ಮಹತ್ಯೆ ಮಾಡಿಕೊಂಡoತಹ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಬೊಮ್ಮಲಾಪುರದ ಯುವಕ ಅಭಿಮಾನಿ ರವಿಯವರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರವಿಯವರ ತಾಯಿಯನ್ನು ಭೇಟಿ ಮಾಡಿ ಅವರ ಕಾಲಿಗೆರಗಿ ಸಾಂತ್ವನ ಹೇಳಿದಂತಹ ಯಡಿಯೂರಪ್ಪನವರು ಸ್ಥಳದಲ್ಲಿ 5 ಲಕ್ಷ ರೂಪಾಯಿ ಪರಿಹಾರವನ್ನು ಪ್ರಕಟಿಸಿದರು ಹಾಗೆಯೇ ಇನ್ನೂ 5 ಲಕ್ಷ ರೂಪಾಯಿ ನೆರವು ನೀಡುವುದಾಗಿ ಹೇಳಿದರು. ಈ ಸಮಯದಲ್ಲಿ ಮೃತರಾದ ರವಿಯವರ ತಾಯಿ ಯಡಿಯೂರಪ್ಪನವರ ಕಾಲಿಗೆ ನಮಸ್ಕರಿಸಿದರು.

ನಂತರ ಯಡಿಯೂರಪ್ಪನವರು ನನ್ನ ಅಭಿಮಾನಿಯಾಗಿದ್ದ ರವಿಯವರು ನಾನು ರಾಜೀನಾಮೆ ನೀಡಿದ್ದೇನೆಂದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ತಿಳಿದು ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು. ಈಗ ನಾವು ರವಿ ಕುಟುಂಬಕ್ಕೆ ಆಸರೆಯಾಗಬೇಕು ಈಗ ಇಲ್ಲಿ 5 ಲಕ್ಷ ಪರಿಹಾರವನ್ನು ನೀಡಿದ್ದೇನೆ, ನಂತರ ಅವರ ಬ್ಯಾಂಕ್ ಖಾತೆಗೆ 5 ಲಕ್ಷ ರೂಪಾಯಿಗಳನ್ನು ಹಾಕುತ್ತೇನೆ ಎಂದು ಹೇಳಿದರು

Most Popular

Recent Comments