ಔರಾದ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಔರಾದ್ ತಾಲ್ಲೂಕಿನ ಆಲೂರ (ಬಿ) ಗ್ರಾಮದ ಯೋಧ ಬಸವರಾಜ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜುಲೈ 6ರಂದು ಸಂಜೆ 5.40ಕ್ಕೆ ತಮ್ಮ ಸರ್ವೀಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಪಂಜಾಬ್‌ನ ಫಜಿಲ್ಕಾ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಗಣಪತಿ ಕೊನೆಯುಸಿರೆಳೆದಿದ್ದರು ಎಂದು ಬಿಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಸುರಿಂದರ್‌ಕುಮಾರ ಅವರು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.
ಯೋಧನ ಶವ ವಿಮಾನದ ಮೂಲಕ ಬೆಳಿಗ್ಗೆ ದೆಹಲಿಯಿಂದ ಹೈದರಾಬಾದ್‌ಗೆ ಬರಲಿದೆ. ಅಲ್ಲಿಂದ ಸೇನಾ ವಾಹನದಲ್ಲಿ ಆಲೂರ್ (ಬಿ) ಗ್ರಾಮಕ್ಕೆ ಬರಲಿದೆ ಎಂದು ಸಂತಪುರ ಪಿಎಸ್‍ಐ ಸಿದ್ದಲಿಂಗ ತಿಳಿಸಿದ್ದಾರೆ.