ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಖಾತೆ ಬದಲಾವಣೆಗಾಗಿ ಸಾರ್ವಜನಿಕರೊಬ್ಬರಿಂದ ಲಂಚ ಪಡೆಯುತ್ತಿದ್ದ ಪುರಸಭೆಯ ಕಂದಾಯ ವಿಭಾಗದ ಸೇವಾ ನಿರ್ವಾಹಕಿ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ; ಆಸ್ಪತ್ರೆ ಎದುರು ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ಚಿಕಿತ್ಸೆ ನೀಡಿದ ವೈದ್ಯ
ಈ ಮೊದಲು ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಕಂದಾಯ ವಿಭಾಗದ ಸೇವಾ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ಚಂದ್ರಕಲಾ, ವ್ಯಕ್ತಿಯೊಬ್ಬರಿಂದ 15,000 ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಇಂದಿನ ಅಡಿಕೆ ಮಾರುಕಟ್ಟೆ ಹೇಗಿದೆ | ಬೆಟ್ಟೆ, ಗೊರಬಲು, ಸರಕು, ಈಡಿ | 27-06-2023
- ಎನ್.ಆರ್.ಪುರ/ಕೊಪ್ಪ; ರಸ್ತೆಗೆ ಅಡ್ಡ ಬಂದ ಜಿಂಕೆಯನ್ನು ತಪ್ಪಿಸಲು ಹೋಗಿ ಗುಂಡಿಗೆ ಬಿದ್ದ ಕಾರು
- ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿ
ಪುರಸಭೆ ವ್ಯಾಪ್ತಿಯ ಹೊಸಪೇಟೆ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದ ಬೆಂಗಳೂರು ನಿವಾಸಿ ಭಾಸ್ಕರ ಶೆಟ್ಟಿ, ಖಾತೆ ಬದಲಾವಣೆಗೆ ಜೂನ್ 17ರಂದು ಅರ್ಜಿ ಸಲ್ಲಿಸಿದ್ದರು. ಅವರ ಸೋದರ ಕೆಲಸ ಮಾಡಿಕೊಡುವಂತೆ ಜೂನ್ 21ರಂದು ಕಚೇರಿಗೆ ಬಂದಾಗ 15,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ; ಚಿಕ್ಕಮಗಳೂರು: ಪರಿಸರವಾದಿ ಪ್ರದೀಪ್ ಗೌಡ ಮನೆಯಲ್ಲಿ ಕಳ್ಳತನ
ಈ ಕುರಿತು ಮಂಜುನಾಥ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಮಂಗಳವಾರ ಲಂಚ ಪಡೆಯುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಚಂದ್ರಕಲಾ ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಈಶ್ವರ ನಾಯ್ಕ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಲೋಕಾಯುಕ್ತ ಪಿಎಸ್‌ಐ ರಾಧಾಕೃಷ್ಣ, ಸಿಬ್ಬಂದಿ ಪ್ರಶಾಂತ್, ಪ್ರಸನ್ನ ಇದ್ದರು.
ಚಿಕ್ಕಮಗಳೂರು: ಪರಿಸರವಾದಿ ಪ್ರದೀಪ್ ಗೌಡ ಮನೆಯಲ್ಲಿ ಕಳ್ಳತನ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿಯನ್ನು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಕೋಟೆಯ ಚೆನ್ನಪುರ ರಸ್ತೆಯಲ್ಲಿರುವ ಪರಿಸರವಾದಿ ಪ್ರದೀಪ್ ಗೌಡ ಅವರ ಮನೆಯಲ್ಲಿ ನಡೆದಿದೆ.
ಇದನ್ನೂ ಓದಿ; ನರಸಿಂಹರಾಜಪುರ: ಶಾಲೆಯ ಸಮಸ್ಯೆ ಹೇಳಿಕೊಳ್ಳಲು ಪಾನಮತ್ತರಾಗಿ ಬಂದಿದ್ದ ಪ್ರಾಂಶುಪಾಲ; ಶಾಸಕ ಟಿ.ಡಿ ರಾಜೇಗೌಡ ತರಾಟೆ
ಮನೆಯಲ್ಲಿ ಯಾರು ಇಲ್ಲದ ವೇಳೆ ಕಿರಾತಕರು ಕಳ್ಳತನ ಮಾಡಿದ್ದು, 50 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ, ಒಂದು ಲ್ಯಾಪ್ ಟಾಪ್ ಸೇರಿದಂತೆ 1 ಲಕ್ಷದ 20 ಸಾವಿರ ಹಣವನ್ನು ಕಳ್ಳರು ದೋಚಿದ್ದಾರೆ.
ಇನ್ನು ಈ ಬಗ್ಗೆ ಚಿಕ್ಕಮಗಳೂರು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.