ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಮರಕ್ಕೆ ಕಾರು ಡಿಕ್ಕಿಯಾಗಿ ದಂಪತಿಗಳಿಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.
ತರೀಕೆರೆ ತಾಲ್ಲೂಕಿನ ಬೆಟ್ಟದತಾವರೆಕೆರೆ ಗ್ರಾಮದ ಸಮೀಪ ಕಾರ್ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮುಂಭಾಗದಲ್ಲಿ ಕುಳಿತಿದ್ದ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಭಾಗದಲ್ಲಿ ಇಬ್ಬರು ಮಕ್ಕಳು ಕುಳಿತ್ತಿದ್ದು ಅವರಿಗೂ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರನ್ನು ಬೆಂಗಳೂರು ಮೂಲದ ಶ್ವೇತಾ ಹಾಗೂ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ನಿಶ್ಚಿತಾರ್ತ ಕಾರ್ಯಕ್ರಮವೊಂದಕ್ಕೆ ಭದ್ರಾವತಿಗೆ ಕುಟುಂಬ ಸಮೇತ ಕಾರಿನಲ್ಲಿ ತೆರಳುತ್ತಿದ್ದರು. ಆದರೆ ಜವರಾಯನ ಅಟ್ಟಹಾಸ ಇಬ್ಬರನ್ನು ಬಲಿ ಪಡೆದು ಮಕ್ಕಳನ್ನು ಅನಾಥ ಮಾಡಿದೆ. ಇನ್ನು ಕಾರು ಗುದ್ದಿದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಇನ್ನು ಮಕ್ಕಳ ಸ್ಥಿತಿಯೂ ಗಂಭೀರವಾಗಿದೆ ಎಂಬ ಮಾಹಿತಿ ದೊರೆತಿದ್ದು. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ತರೀಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಒಂದೇ ದಿನ 23 ನಾಮಪತ್ರ ಸಲ್ಲಿಕೆ
ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ನಿನ್ನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 33 ನಾಮಪತ್ರ ಸಲ್ಲಿಕೆಯಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಜೆಡಿಎಸ್ ಅಭ್ಯರ್ಥಿ ವೈಎಸ್ವಿ ದತ್ತ ವಿರುದ್ಧ 41 ಚೆಕ್ ಬೌನ್ಸ್ ಪ್ರಕರಣ
- ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು
- ಹಿಂದು ಬ್ರಿಗೇಡ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಹಿಳಾ ಅಭ್ಯರ್ಥಿ
123- ಶೃಂಗೇರಿ, ವಿಧಾನಸಭಾ ಕ್ಷೇತ್ರ ದಿಂದ ಪ್ರೋಟಿಸ್ಟ್ ಸರ್ವ ಸಮಾಜ ಪಾರ್ಟಿಯಿಂದ ಎಂ.ಕೆ. ದಯಾನಂದ, ಜನತಾ ದಳ (ಜಾತ್ಯಾತೀತ) ದಿಂದ ಸುಧಾಕರ ಎಸ್. ಶೆಟ್ಟಿ, ಪಕ್ಷೇತರ ಅಭ್ಯರ್ಥಿ ಗಳಾಗಿ ಮಂಜುನಾಥಯಾನೆ ಅಬ್ರಾ ಹಾಮ್, ಕೆ.ಆರ್. ಕುಸುಮ, ಕಮುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಬಂದ ಉಮೇಶ್ ಬಿ.ಎ. ನಾಮಪತ್ರ ಸಲ್ಲಿಸಿದ್ದಾರೆ.
124 – ಮೂಡಿಗೆರೆ, ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ದೀಪಕ್ ದೊಡ್ಡಯ್ಯ, ಕರುನಾಡು ಪಕ್ಷದಿಂದ ಹೆಚ್.ಎಸ್. ಕುಮಾರಸ್ವಾಮಿ, ಎ.ಎ.ಪಿ. ಯಿಂದ ಪ್ರಭು ಸಿ. ಪಕ್ಷೇತರರಾಗಿ ಬಿ.ಬಿ. ನಿಂಗಯ್ಯ, ನಾಮಪತ್ರ ಸಲ್ಲಿಸಿದ್ದಾರೆ.
125 – ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ನೂರುಲ್ಲಾಖಾನ್, ಸೈಯ್ಯದ್ ಜಬಿ, ಶಾಬುದ್ದೀನ್, ಮೋಸೀನಾ, ಸಿ.ಕೆ.ಜಗದೀಶ, ಪುಟ್ಟೇಗೌಡ ಯು.ಪಿ., ರವಿಕುಮಾರ್ ಎನ್.ಸಿ. ಪಕ್ಷೇತರರಾಗಿ ಹಾಗೂ ಜೆಡಿಎಸ್‌ನಿಂದ, ಭಾರತೀಯ ಜನತಾ ಪಕ್ಷದಿಂದ ಸಿ.ಟಿ. ರವಿ, ಜನತಾ ದಳ (ಜಾತ್ಯಾತೀತ) ದಿಂದ ತಿಮ್ಮಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಹಚ್.ಡಿ, ತಮ್ಮಯ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.
126- ತರೀಕೆರೆ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಹೆಚ್.ಪಿ. ಅಶೋಕ, ಗಿರೀಶ್ ನಾಯ್ಕ ಆರ್.ಎಲ್. ಎ.ಆರ್. ಸತೀಶ್, ಎ.ಆರ್. ನಾಗರಾಜಪ್ಪ, ಗೋಪಾಲಕೃಷ್ಣ ಬಿ. ರಫೀಕ್ ಅಹಮ್ಮದ್, ಪರಮೇಶ್ವರಪ್ಪ ಡಿ.ಎಂ., ಸಿ.ಎಂ. ನಂಜಪ್ಪ, ಭಾರತೀಯ ಜನತಾ ಪಕ್ಷದಿಂದ ಡಿ.ಎಸ್. ಸುರೇಶ್, ಎ.ಎ.ಪಿ. ಯಿಂದ ಡಿ.ಸಿ. ಸುರೇಶ್, ನಾಮಪತ್ರ ಸಲ್ಲಿಸಿದ್ದಾರೆ.
127 – ಕಡೂರು ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಕೆ.ಎಸ್. ಆನಂದ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆನಂದ ನಾಯ್ಕ ಎಸ್.ಎಲ್, ನಾಮಪತ್ರ ಸಲ್ಲಿಸಿದ್ದಾರೆ.