ಮೈಸೂರು: ಸಂಗೀತ ನಿರ್ದೇಶಕ ಹಂಸಲೇಖರವರನ್ನು ಶೀಘ್ರವೇ ಬಂಧಿಸುವಂತೆ ಹಂಸಲೇಖನವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಟಿ. ಕೆ ಲೇಔಟ್ ನ ಕೃಷ್ಣಧಾಮದ ಮುಂಭಾಗ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಮತ್ತು ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ಹಾಗೂ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಂಘದ ಕಾರ್ಯಕರ್ತರು ಹಂಸಲೇಖ ನೀಡಿರುವ ಹೇಳಿಕೆಯನ್ನು ಖಂಡಿಸಿ ಅವರ ವಿರುದ್ಧ ಘೋಷಣೆ ಕೂಗಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಹಂಸಲೇಖ ಅವಾಚ್ಯ ಪದಗಳನ್ನು ಉಪಯೋಗಿಸಿ ಪೇಜಾವರ ಶ್ರೀಗಳನ್ನು ನಿಂದಿಸಿದ್ದಾರೆ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿಯ ಪೂಜಾ ಕೈಂಕರ್ಯದ ಕುರಿತು ಹಿಂದೂಗಳ ಭಾವನೆಗೆ ದಕ್ಕೆ ಬರುವ ಹಾಗೆ ಮಾತನಾಡಿದ್ದಾರೆ ಅವರು ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳಬೇಕು. ಅವರು ಕ್ಷಮೆ ಕೇಳದಿದ್ದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುತ್ತೇವೆ ಆದ್ದರಿಂದ ಅವರನ್ನು ಬಂಧಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಇಳೈ ಆಳ್ವಾರ್ ಸ್ವಾಮೀಜಿ , ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷ ರಾದ ಗೋಪಾಲ್ ರಾವ್ , ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಳದ ಗೌರವಾಧ್ಯಕ್ಷರಾದ ಎಂ ಕೆ ಪುರಾಣಿಕ್ , ಉಪಾಧ್ಯಕ್ಷರು ನಾಗೇಶ್ ,ಕಾರ್ಯದರ್ಶಿ ಸುಪ್ರಭಾ ,ವಿಪ್ರ ಜಾಗೃತಿ ವೇದಿಕೆಯ ರಮೇಶ್ ,ಮುಳ್ಳೂರು ಸುರೇಶ್ ,ಅರ್ಚಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ,ರಾಕೇಶ್ ಭಟ್ ,ವಿಕಾಸ್ ಶಾಸ್ತ್ರಿ, ವಿಜಯ್ ಕುಮಾರ್ ,ಪ್ರಶಾಂತ್ ,ಸುಚೀಂದ್ರ ,ಚಕ್ರಪಾಣಿ ,ನಟ ಬಾಲಕೃಷ್ಣ ,ನಾಗಶ್ರೀ ,ವಿಘ್ನೇಶ್ವರ್ ಭಟ್ ,ಸುದರ್ಶನ್ ,ಮಂಜುನಾಥ್ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.