Wednesday, April 24, 2024
Homeಇತರೆ6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಿದ ಅಪ್ರಾಪ್ತ ಬಾಲಕ.

6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಿದ ಅಪ್ರಾಪ್ತ ಬಾಲಕ.

ಹಣ್ಣಿನ ಆಮಿಷವೊಡ್ಡಿ 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉಕ್ರೇನ್ ನಲ್ಲಿ ನಡೆದಿದೆ.

ಈಶಾನ್ಯ ಉಕ್ರೇನ್ ನ ಸ್ಟಾರಿ ಸಾಲ್ಟೊವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮಿರೋಸ್ಲಾವಾ ಟ್ರೇಟ್ಯಾಕ್ ಮೃತ ಬಾಲಕಿ ಹಾಗೂ ಹತ್ಯೆ ಮಾಡಿದವನು ನೆರೆ ಮನೆಯ 13 ವರ್ಷದ ಬಾಲಕ ಎಂದು ತಿಳಿದುಬಂದಿದೆ

ಸೇಬು ಹಣ್ಣಿನ ಆಸೆಯನ್ನು ತೋರಿಸಿದಾಗ ಆ ಬಾಲಕಿ ಅವನಜೊತೆ ಹೋಗಿದ್ದಾಳೆ ಆ ಸಂದರ್ಭದಲ್ಲಿ ಬಾಲಕ ಆಕೆಯ ಮೇಲೆ ಅತ್ಯಾಚಾರ ನಡೆಸಿ ತಲೆಯಮೇಲೆ ಕಲ್ಲನ್ನು ಎತ್ತಿಹಾಕಿ ಕೃತ್ಯವನ್ನು ಎಸಗಿದ್ದಾನೆ. ಬಾಲಕಿಯ ಮೃತದೇಹ ನಗ್ನ ಸ್ಥಿತಿಯಲ್ಲಿದ್ದು ಬಾಲಕಿಯ ಮನೆ ಸಮೀಪವಿರುವ ಸೇಬಿನ ತೋಟದಲ್ಲಿ ಪತ್ತೆಯಾಗಿದೆ. ಆ ಬಾಲಕನ ಜೊತೆ ಬಾಲಕಿ ಕೊನೆಯದಾಗಿ ಕಾಣಿಸಿಕೊಂಡಿದ್ದರ ಆಧಾರದ ಮೇಲೆ ಬಾಲಕನನ್ನು ಪೊಲೀಸರು ತನಿಖೆ ಮಾಡಿದಾಗ ಸತ್ಯ ಹೊರಬಂದಿದೆ.

ಆರೋಪಿ ಬಾಲಕ 13 ವರ್ಷದವನಾಗಿರುವುದರಿಂದ ಕಾನೂನಿನ ಪ್ರಕಾರ ಆತನನ್ನು ಮಕ್ಕಳ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.

Most Popular

Recent Comments