Friday, June 9, 2023
Homeಇತರೆಕಣ್ಣು, ಹೃದಯ, ಕೈಗಳು, ಶ್ವಾಸಕೋಶ ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದ 14 ವರ್ಷದ ಬಾಲಕ.

ಕಣ್ಣು, ಹೃದಯ, ಕೈಗಳು, ಶ್ವಾಸಕೋಶ ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದ 14 ವರ್ಷದ ಬಾಲಕ.

ಸೂರತ್ : ಮೆದುಳು ನಿಷ್ಕ್ರಿಯಾ ವಾಗಿದ್ದ ಬಾಲಕನೋರ್ವ ತನ್ನ ದೇಹದ ಭಾಗಗಳನ್ನು ದಾನ ಮಾಡಿ 6 ಜನರಿಗೆ ಹೊಸ ಜೀವನವನ್ನು ನೀಡಿದ್ದಾನೆ.

ಬಾಲಕನ ಹೆಸರು ಧರ್ಮಿಕ್ ಕಕಾಡಿಯಾ ಮೂಲತಃ ಸೂರತ್ ನಗರದ ನಿವಾಸಿ ಎಂದು ತಿಳಿದುಬಂದಿದೆ. ಬಾಲಕ ಸತತ 5 ವರ್ಷದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ. ಅಲ್ಲದೇ ಅಕ್ಟೊಬರ್ 27 ರಂದು ಇದ್ದಕ್ಕಿದ್ದಂತೆ ಬಾಲಕನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆತನ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಸೂರತ್ ನ ಕಿರಣ್ ಆಸ್ಪತ್ರೆಗೆ ಕರೆದೋಯ್ದಿದ್ದಾರೆ. ಪರೀಕ್ಷೆಯನ್ನು ನಡೆಸಿದ ವೈದ್ಯರು ಮೆದುಳು ನಿಷ್ಕ್ರಿಯಾ ವಾಗಿದೆ ಎಂದು ಘೋಷಿಸಿದರು.

ಧರ್ಮಿಕ್ ನ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದಿದ್ದ ಜೀವಸಂಸ್ಥೆ ಪೋಷಕರಿಗೆ ಅಂಗಾಗ ದನದ ಮಹತ್ವವನ್ನು ತಿಳಿಸಿ ದಾನ ಮಾಡುವಂತೆ ಪ್ರೋತ್ಸಾಹಿಸಿದರು. ಅದರಂತೆಯೇ ಬಾಲಕನ ಅಂಗಾಗವನ್ನು ಪೋಷಕರು ದಾನ ಮಾಡಿದ್ದಾರೆ. ಧರ್ಮಿಕ್ʼನ ಅಂಗಾಗಗಳಾದ ಕಣ್ಣುಗಳು, ಹೃದಯ, ಯಕೃತ್ತು ಮತ್ತು ಎರಡೂ ಕೈಗಳನ್ನ ಆರು ಜನರಿಗೆ ದಾನ ಮಾಡಲಾಗಿದ್ದು, ಇದು ಅವರಿಗೆ ಹೊಸ ಜೀವನವನ್ನ ನೀಡಿದೆ ಎಂದು ವೈದ್ಯರು ಹೇಳಿದರು.

ಅಂಗಾಂಗ ದಾನದ ನಂತರ ಆ ಬಾಲಕನ ಅಂಗಾಂಗಗಳನ್ನು ಚೆನ್ನೈ, ಅಹಮದಾಬಾದ್ ಮತ್ತು ಮುಂಬೈಗೆ ಸಾಗಿಸಲಾಯಿತು. ಧರ್ಮಿಕ್ʼನ ಎರಡು ಕೈಗಳನ್ನು ಪುಣೆಯ ವ್ಯಕ್ತಿಗೆ ಜೋಡಿಸಲಾಗಿದೆ. ಹೃದಯವನ್ನ ಅಹಮದಾಬಾದ್ ನ ಜುನಾಗಢದ 15 ವರ್ಷದ ಹುಡುಗನಿಗೆ ನೀಡಲಾಗಿದೆ. ಶ್ವಾಸಕೋಶವನ್ನು ಆಂಧ್ರಪ್ರದೇಶದ ವ್ಯಕ್ತಿಗೆ ದಾನ ಮಾಡಲಾಗಿದ್ದು, ಚೆನ್ನೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಧರ್ಮಿಕ್ʼನ ಯಕೃತ್ತನ್ನು ಗುಜರಾತಿನ ಪಟಾನ್ʼನ ವ್ಯಕ್ತಿಗೆ ನೀಡಲಾಗಿದೆ. ಇನ್ನು ಕಿರಣ್ ಆಸ್ಪತ್ರೆಯ ವ್ಯಕ್ತಿಗೆ ಧರ್ಮಿಕ್ʼನ ಕಣ್ಣುಗಳನ್ನು ನೀಡಲಾಗಿದೆ.

Most Popular

Recent Comments