Sunday, June 4, 2023
Homeಇತರೆ19 ವರ್ಷದ ಯುವಕನ ಪತ್ತೆಗಾಗಿ ಇಡೀ ಚೆಕ್ ಡ್ಯಾಮ್ ನೀರನ್ನೇ ಖಾಲಿ ಮಾಡಿಸುತ್ತಿರುವ ಸಿಬ್ಬಂದಿಗಳು.

19 ವರ್ಷದ ಯುವಕನ ಪತ್ತೆಗಾಗಿ ಇಡೀ ಚೆಕ್ ಡ್ಯಾಮ್ ನೀರನ್ನೇ ಖಾಲಿ ಮಾಡಿಸುತ್ತಿರುವ ಸಿಬ್ಬಂದಿಗಳು.

ಚಿತ್ರದುರ್ಗ: 19 ವರ್ಷದ ಯುವಕನ ಪತ್ತೆಗಾಗಿ ಇಡೀ ಚೆಕ್ ಡ್ಯಾಮ್ ನ ನೀರನ್ನು ಖಾಲಿ ಮಾಡುತ್ತಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬೂತಯ್ಯನಹಟ್ಟಿಯ ಚೆಕ್ ಡ್ಯಾಮ್ ನಲ್ಲಿ ನಡೆದಿದೆ.

ಚಿತ್ರದುರ್ಗದ ಬೆಳಗಟ್ಟ ಹರೀಶ್ ಕುಮಾರ್ (19)ಎಂಬ ಯುವಕ ಇಲ್ಲಿನ ಚೆಕ್ ಡ್ಯಾಮ್ ಗೆ ಈಜಲು ಬಂದಿದ್ದು, ನೀರುಪಾಲಾಗಿದ್ದಾನೆ,

ಮೃತಪಟ್ಟ ಯುವಕನ ಶವದ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು ಆದರೂ ಯುವಕನ ಸು ಗ್ರಾಮದಳಿವು ಸಿಗದ ಕಾರಣ ಇಡೀ ಚೆಕ್ ಡ್ಯಾಮ್ ಗೆ ಪೈಪ್ ಗಳನ್ನು ಹಾಕಿ ಅದರಿಂದ ನೀರನ್ನು ಖಾಲಿ ಮಾಡಲಾಗುತ್ತಿದೆ.

ಚೆಕ್ ಡ್ಯಾಮ್ ನ ನೀರನ್ನು ಪೈಪ್ ನಿಂದ ಇನ್ನೂ ಖಾಲಿ ಮಾಡಲಾಗುತ್ತಿದ್ದು ಈ ದೃಶ್ಯವನ್ನು ನೋಡಲು ಜನರು ಆತಂಕದಿಂದಲೇ ಸ್ಥಳಕ್ಕೆ ಜಮಾಯಿಸಿದ್ದಾರೆ.

Most Popular

Recent Comments