ಜೈಪುರ್: ಬ್ಲೂಟೂತ್ ಹೆಡ್ ಫೋನ್ ಯುವಕನೊಬ್ಬನ ಪ್ರಾಣವನ್ನೇ ತೆಗೆದಿದೆ. ಬ್ಲೂಟೂತ್ ಹೆಡ್ ಫೋನ್ಸ್ ಸಹಾಯದಿಂದ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ದಿಢೀರ್ ಸ್ಫೋಟ ಸಂಭವಿಸಿ 28 ವರ್ಷದ ಯುವಕ ಸಾವನ್ನಪ್ಪಿದ್ದಾನೆ.ಈ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ.
ಜೈಪುರದ ಚೋಮು ಪ್ರದೇಶದ ಉದಯ್ ಪುರಿಯಾ ಗ್ರಾಮದ ರಾಕೇಶ್ ಕುಮಾರ್ ನಗರ್, ತನ್ನ ಬ್ಲೂಟೂತ್ ಹೆಡ್ ಫೋನ್‌ನನ್ನು ಬಳಸಿ ಫೋನಿನಲ್ಲಿ ಮಾತನಾಡುತ್ತಿದ್ದಾಗ, ಈ ಸಮಯದಲ್ಲಿ ಹೆಡ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದರಿoದ ಯುವಕ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆತ ಮೃತಪಟ್ಟಿದ್ದಾನೆ.
ಈ ಸಂಬoಧ ಡಾ. ಎಲ್.ಎನ್.ರುಂಡ್ಲಾರವರು ಪ್ರತಿಕ್ರಿಯಿಸಿ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದ್ದಾರೆ.
ಬ್ಲೂಟೂತ್ ಇಯರ್‌ಫೋನ್‌ಗಳು ಸ್ಫೋಟಗೊಂಡಿರುವುದು ದೇಶದಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಹಾಗೂ ಸ್ಪೋಟ ಸಂಭವಿಸಿದoತಹ ಸಮಯದಲ್ಲಿ ಎರಡು ಕಿವಿಗಳಿಗೂ ಗಾಯಗಳಾಗಿವೆ.