ರೌರ್ಕೆಲಾ : ಮಹಿಳೆಯ ರಕ್ತದ ಗುಂಪಿನ ಬದಲಾಗಿ ಬೇರೆ ಗುಂಪಿನ ರಕ್ತ ನೀಡಿ ಮಹಿಳೆ ಸಾವನ್ನಪ್ಪಿದ ಘಟನೆ ನಗರದ ಆಸ್ಪತ್ರೆಯಲ್ಲಿ ನಡೆದಿದೆ.
ಮೃತ ದುರ್ದೈವಿ ಸರೋಜಿನಿ ಕಾಕು(25) ಕುಟ್ರಾ ಬ್ಲಾಕ್ ನ ಬುಡಕಟಾ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಮಹಿಳೆ ರಕ್ತಹೀನತೆಯಿಂದ ಅನೇಕ ದಿನಗಳಿಂದ ಬಳಲುತ್ತಿದ್ದರು ಆಕೆಯ ಬ್ಲಡ್ ಗ್ರೂಪ್ ” O+” ಆದರೆ ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳು ಆಕೆಗೆ “O+” ರಕ್ತವನ್ನು ನೀಡುವ ಬದಲು “B+” ರಕ್ತವನ್ನು ನೀಡಿದ್ದಾರೆ. ವೈದ್ಯರು ತಪ್ಪು ರಕ್ತವನ್ನು ನೀಡಿದ ಪರಿಣಾಮ ಮಹಿಳೆ ಸಾವನಪ್ಪಿದ್ದಾರೆ.
ಕುಟುಂಬಸ್ಥರು ಸ್ಥಳೀಯ ಕುತ್ರಾ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಮೃತ ದೇಹವನ್ನು ಇರಿಸಿಕೊಂಡು ವಿಶೇಷ ತನಿಖಾ ತಂಡವನ್ನು ರಚಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ.