ಬೆಂಗಳೂರು: ಡಿಕೆ ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರ ಮೌನ ಅಪಾಯಕಾರಿ, ಮುನಿಸಿಕೊಂಡಾಗಲೆಲ್ಲಾ ಅವರು ಪ್ರಕೃತಿ ಚಿಕಿತ್ಸೆಗೆ ತೆರಳುತ್ತಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಡಿಕೆಶಿ ನೀಡಿದ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಆಯ್ಕೆಯ ಪಟ್ಟಿಯನ್ನು ನೋಡಿ ಸಿದ್ದರಾಮಯ್ಯ ಮೌನ ತಾಳಿರುವುದು ಏಕೆ? ಪದಾಧಿಕಾರಿಗಳ ಪಟ್ಟಿಯ ಬಿಡುಗಡೆ ಮಾಡುವ ವಿಚಾರದಲ್ಲಿಯೂ ಡಿಕೆಶಿ ಹಾಗೂ ಸಿದ್ದರಾಮಯ್ಯ ನವರ ಮದ್ಯೆ ಯುದ್ಧವೇ ನಡೆಯುತ್ತಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೇರೆಯದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯನವರ ಮೌನ ಬೇರೆಯದನ್ನೇ ಸೂಚಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ನವರು ಮುನಿಸಿಕೊಂಡಾಗಲೆಲ್ಲ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಾರೆ ಅಲ್ಲಿದ್ದುಕೊಂಡೇ ರಾಜಕೀಯ ದಾಳವನ್ನು ಆಡಿಸುತ್ತಾರೆ. ಡಿಕೆಶಿಯವರೇ ಸಿದ್ದರಾಮಯ್ಯ ನವರ ಮೌನ ಬಹಳ ಅಪಾಯಕಾರಿ ಎಂದು ಟೀಕಿಸಿದ್ದಾರೆ.