Sunday, September 24, 2023
Homeರಾಜಕೀಯಸಂಪುಟ ವಿಸ್ತರಣೆಯಲ್ಲಿ ನೀಡಿರುವ ಖಾತೆಯ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ ಸಚಿವರಿಗೆ ಟಾಂಗ್ ನೀಡಿದ ಶಶಿಕಲಾ...

ಸಂಪುಟ ವಿಸ್ತರಣೆಯಲ್ಲಿ ನೀಡಿರುವ ಖಾತೆಯ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ ಸಚಿವರಿಗೆ ಟಾಂಗ್ ನೀಡಿದ ಶಶಿಕಲಾ ಜೊಲ್ಲೆ

ವಿಜಯಪುರ: ನನಗೆ ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಯಾವ ಖಾತೆ ಕೊಟ್ಟಿದ್ದಾರೋ ಆ ಖಾತೆಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು ನನ್ನ ಉದ್ದೇಶವಾಗಿದೆ ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಇವತ್ತು ಕೊರೋನಾ ಮಹಾಪೂರ ಇದೆ. ಇಂತಹ ಸಂದರ್ಭದಲ್ಲಿ ಅಸಮಾಧಾನ ಪಡುವುದು ಸರಿಯಲ್ಲ. ಕೊಟ್ಟಂತಹ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗೆ ನಾನು ಬದ್ಧಳಾಗಿದ್ದೇನೆ. ಹೊರ ರಾಜ್ಯ ದೇವಸ್ಥಾನಗಳಿಗೆ ತೆರಳುವ ನಮ್ಮ ರಾಜ್ಯದ ಭಕ್ತರಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆಯನ್ನು ನೀಡಿದರು.

ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದಂತಹ ಸಚಿವರಿಗೆ, ಕೆಲಸ ಮಾಡುವವರಿಗೆ ಯಾವ ಖಾತೆ ಇದ್ದರೆ ಏನು, ಕೆಲಸ ಮಾಡುವ ಇಚ್ಛೆ ಇದ್ದು, ಜನರಿಗೆ ಸ್ಪಂದಿಸುವ ಇಚ್ಛೆ ಇದೆ ಅಂದರೆ ಸಾಕು ಎಂದು ಖಾತೆ ಕ್ಯಾತೆ ತೆಗೆದವರಿಗೆ ಟಾಂಗ್ ನೀಡಿದ್ದಾರೆ. ಎಂತಹದೇ ಖಾತೆ ಇದ್ದರೂ ಅದರ ಮುಖಾಂತರ ನಾವು ಕೆಲಸ ಮಾಡಬಹುದು. ಈ ರೀತಿ ಅಸಮಾಧಾನ ಆಗುತ್ತಿರುವುದು ಅವರಿಗೆ ಬಿಟ್ಟ ವಿಷಯ. ಇದು ಬಹಳ ದೊಡ್ಡ ವಿಷಯ ಅಲ್ಲ. ಸ್ವಲ್ಪ ಅಸಮಧಾನ ಇರಬಹುದು. ಅದು ನಿವಾರಣೆ ಆಗುತ್ತೆ. ಅವರವರು ಅವರ ಖಾತೆಯನ್ನು ಮುಂದುವರೆಸುತ್ತಾರೆ ಎಂಬ ವಿಶ್ವಾಸ ಇದೆ. ಇದನ್ನು ನಮ್ಮ ಪಕ್ಷದ ಹಿರಿಯರು ಬಗೆಹರಿಸುತ್ತಾರೆಂಬ ವಿಶ್ವಾಸ ಇದೆ ಎಂದಿದ್ದಾರೆ.

Most Popular

Recent Comments