ಮೈಸೂರು: ಬಿಜೆಪಿ ಪಕ್ಷದವರು ನಾಚಿಕೆ ಬಿಟ್ಟವರು, 40% ಲಂಚವನ್ನು ಪಡೆಯುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 40% ಲಂಚವನ್ನು ಬಿಜೆಪಿಯವರು ಪಡೆಯುತ್ತಾರೆ ನಾಚಿಕೆ ಬಿಟ್ಟವರು ಅವರದ್ದು ನಾಚಿಕೆಗೆಟ್ಟ ಸರ್ಕಾರ ಎಂದರು.
ದೇಶದಲ್ಲಿ ಜನರಿಗೆ ಅನೇಕ ರೀತಿಯಲ್ಲಿ ಬಿಜೆಪಿಯವರು ಮೋಸ ಮಾಡಿ ಲಂಚವನ್ನು ಪಡೆಯುತ್ತಿದ್ದಾರೆ, ಕೊರೋನಾ ಸಮಯದಲ್ಲಿ ಪರಿಹಾರ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿ ಜನರನ್ನು ನಂಬಿಸಿದ್ದರು, ಕೊರೋನಾ ಸಾವಿನ ಲೆಕ್ಕ ಕೊಟ್ಟು ಹಣವನ್ನು ದೋಚಿದರು, ವೈದ್ಯರು ಹೆಚ್ಚುವರಿ ಕೆಲಸ ಮಾಡಿದರೆ ಅವರಿಗೆ ಹಣ ಕೊಡ್ತೀವಿ ಅಂದ್ರು ಆದರೆ ಅವರಿಗೆ ಹಣವನ್ನು ನೀಡಿಲ್ಲ.
ಎಲ್ಲಾ ಕಡೆ ಲಂಚವನ್ನು ಸರ್ಕಾರ ಪಡೆಯುತ್ತಿದ್ದರು ಸಹ ಪ್ರಧಾನಿ ನರೇಂದ್ರ ಮೋದಿ ನಾ ಕಾವುಂಗಾ, ನಾ ಕಾನೇ ದೂಂಗಾ ಎನ್ನುತ್ತಿದ್ದಾರೆ, ಜನರಿಗೆ ವ್ಯಾಕ್ಸಿನ್ ಕೊಡಿಸಿ ಕೊರೋನಾ ಕಡೆ ಗಮನಹರಿಸಿ ಎಂದರೆ ಚಪ್ಪಾಳೆ ತಟ್ಟಿ, ದೀಪ ಹಚ್ಚಿ, ಜಾಗಟೆ ಹೊಡಿರಿ ಎನ್ನುತ್ತಿದ್ದಾರೆ ನಾಚಿಕೆಗೆಟ್ಟ ವ್ಯಕ್ತಿಗಳು ಎಂದು ಆಕ್ರೋಶ ವ್ಯಕ್ತ ಪಡಿಸಿದರು.