ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ಬೈಪಾಸ್ ರಸ್ತೆಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಸಿ.ಟಿ ರವಿ ಪರವಾಗಿ ಪತ್ನಿ ಪಲ್ಲವಿ ರವಿಯವರು ಮತಯಾಚಿಸಿದರು.
ದಿಡೀರ್ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಸಿಟಿ ರವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ಸ್ಟೋನ್ ಎಂದು ದೃಢಪಟ್ಟಿದೆ. ಶಾಸಕ ಸಿ.ಟಿ ರವಿಯವರು ಆಸ್ಪತ್ರಗೆ ದಾಖಲಾದ ಹಿನ್ನೆಲೆ ಸಮಾವೇಶಕ್ಕೆ ಗೈರಾಗಿದ್ದರು. ಉತ್ತಮವಾಗಿ ಕೆಲಸ ಮಾಡಿರುವ ನಿಮ್ಮ ಮಗನಿಗೆ ಮತ ಹಾಕಿ. ನನ್ನ ಗಂಡನ ಬಗ್ಗೆ ಲಿಂಗಾಯತ ವಿರೋಧಿ ಎಂದು ಅಪಪ್ರಚಾರ ಮಾಡುತ್ತಾರೆ. ಲಿಂಗಾಯತ ಸಮುದಾಯ ಸಿ.ಟಿ ರವಿ ಕೈ ಹಿಡಿಯಬೇಕು ಎಂದು ಪಲ್ಲವಿ ರವಿ ಕಣ್ಣೀರು ಹಾಕಿದರು. ಅಲ್ಲದೇ ನಾನು ಸಮಾರಂಭಗಳಿಗೆ ಹೋದಾಗ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನಾನು ಮನೆಗೆ ಬಂದು ಸಿಟಿ ರವಿ ಹೇಳಿದರೇ ನೀನೆ ಜಾಸ್ತಿ ತಲೆ ತಿಂತೀಯಾ ಅಂತ ನಮ್ಮೆಜಮಾನ್ರು ಅಂತಿದ್ದರು ಎಂದು ಪತ್ನಿ ಪಲ್ಲವಿ ರವಿ ಹೇಳಿದರು.
ಇದನ್ನೂ ಓದಿ; ಎನ್ ಆರ್ ಪುರದಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಹೆಚ್ಚಿದ ಭಯ
ನಿನ್ನೆ ಕಿಡ್ನಿ ಸ್ಟೋನ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- 5 ನಿಮಿಷದಲ್ಲಿ ಕೈ ಸೇರುತ್ತೆ ಡಿಜಿಟಲ್ ವೋಟರ್ ಐಡಿ
- ಹೊಳೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತ್ಯು.!
- ಶಾಸಕ ಸಿ.ಟಿ ರವಿ ವಿರುದ್ಧ ನಕಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತ ಪೋಲಿಸ್
ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿ ಸಂಹಿತೆ ಉಲ್ಲಂಘನೆ; ದೂರು
ಕಾಂಗ್ರೆಸ್ ಅಭ್ಯರ್ಥಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಮುಖಂಡರು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಅದ್ದಡ ಸತೀಶ್ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಹಂಚುತ್ತಿರುವ ಕರಪತ್ರದಲ್ಲಿ ಮತದಾರರ ಹೆಸರು, ಎಪಿಕ್ ಸಂಖ್ಯೆ ನಮೂದಿಸಿ ಕಾಂಗ್ರೆಸ್ ಪಕ್ಷದ ಭರವಸೆಗಳನ್ನು ಮುದ್ರಿಸಿ ಹಂಚುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಮಂಡಲ ಅಧ್ಯಕ್ಷ ಅವರ ನೇತೃತ್ವದಲ್ಲಿ ಚುಣಾವಣಾಧಿಕಾರಿ ದೂರು ನೀಡಿದ್ದಾರೆ.
ಪಕ್ಷದ ಕರಪತ್ರದಲ್ಲಿ ಮತದಾರರ ಹೆಸರು ಮತ್ತು ಏಪಿಕ್ ಸಂಖ್ಯೆಯನ್ನು ಮುದ್ರಿಸಿ ವಿತರಣೆ ಮಾಡುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾಂಗ್ರೆಸ್ ಈ ಮಾದರಿಯ ಸಾವಿರಾರು ಕರಪತ್ರವನ್ನು ಮುದ್ರಿಸಿದ್ದಾರೆ. ಕರಪತ್ರದಲ್ಲಿ ಅಭ್ಯರ್ಥಿಯ ಪೋಟೋವನ್ನು ಸಹ ಹಾಕಲಾಗಿದೆ. ಚುನಾವಣಾ ಆಯೋಗ ಕೂಡಲೇ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಪ್ರಕರಣವನ್ನು ದಾಖಲಿಸಬೇಕೆಂದು ಅದ್ದಡ ಸತೀಶ್ ಪ್ರತಿಕ್ರಿಯಿಸಿದರು.