Sunday, December 3, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ಬಿಜೆಪಿ ಮುಖಂಡನ ಹತ್ಯೆ ಪ್ರಕರಣ; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಕುಟುಂಬ

ಚಿಕ್ಕಮಗಳೂರು: ಬಿಜೆಪಿ ಮುಖಂಡನ ಹತ್ಯೆ ಪ್ರಕರಣ; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಕುಟುಂಬ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) 5 ವರ್ಷದ ಹಿಂದೆ ಬಿಜೆಪಿ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿರುವ ಆರೋಪಿಗಳು ಪತ್ತೆಯಾಗದೆ ಹಿನ್ನಲೆಯಲ್ಲಿ ಬಿಜೆಪಿ ಮುಖಂಡನ ಕುಟುಂಬ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ; ಬಾಳೆಹೊನ್ನೂರು: ಫೇಸ್ಬುಕ್ ನಲ್ಲಿ ಸಿಎಂ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಆರೋಪ; ಕೇಸ್ ದಾಖಲು

ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಿ.ಟಿ ರವಿ ಆಪ್ತನಾಗಿದ್ದ ಅನ್ವರ್ ನನ್ನು ನಗರದ ಗೌರಿ ಕಾಲುವೆ ಬಳಿ ಚಾಕುವಿನಿಂದ 13 ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ನಂತರ ಬಿಜೆಪಿ ಸರ್ಕಾರ ಇದ್ದಾಗಲೂ ಸರಿಯಾದ ತನಿಖೆ ನಡೆಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ತೀರ್ಥಹಳ್ಳಿ: ವಿಧ್ಯಾರ್ಥಿನಿಯ ಅಶ್ಲೀಲ ವೀಡಿಯೋ ವೈರಲ್ ಪ್ರಕರಣ; ಪ್ರತಿಭಟನೆ

ಅನ್ವರ್ ಹತ್ಯೆ ಪ್ರಕರಣವನ್ನ ಹಿಂದಿನ ಬಿಜೆಪಿ ಸರ್ಕಾರ ಸಿಐಡಿಗೆ ಒಪ್ಪಿಸಿದ್ದರು. 5 ವರ್ಷವಾದರೂ ಹಂತಕರನ್ನು ಬಂಧಿಸಿಲ್ಲ. ಹಾಗಾಗಿ ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆಯಲಾಗಿದೆ.


ಇತ್ತೀನ ಜನಪ್ರಿಯ ಸುದ್ದಿಗಳು 


ಮಡಿಕೇರಿಗೆ ನೀವೇನಾದ್ರೂ ಟ್ರಿಪ್ ಪ್ಲಾನ್ ಮಾಡಿದ್ರೆ ಈ ಗ್ಲಾಸ್ ಬ್ರಿಡ್ಜ್ ನೋಡೋದಂತು ಮಿಸ್ ಮಾಡ್ಕೋಬೇಡಿ

ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯ, ಮುತ್ತಿಕ್ಕುವ ಇಬ್ಬನಿ, ಚುಮು ಚುಮು ಚಳಿ, ಸ್ವರ್ಗವೇ ಧರೆಗಿಳಿದು ಬಂದಂತಹ ಹಚ್ಚ ಹಸಿರ ಹೊದ್ದ ಗಿರಿ ವೃಂದಗಳ ನಡುವೆ ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದ ಕೊಡಗಿಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು. ಯಾಕೆ ಅಂತೀರಾ?

ಇದನ್ನೂ ಓದಿ; ತರೀಕೆರೆ: ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು

ನೀವೇನಾದರೂ ಪ್ರವಾಸ ಮಾಡುವ ಯೋಜನೆ ಹಾಕಿದ್ದರೆ, ಮಂಜಿನ ನಗರಿ ಎಂದೇ ಪ್ರಸಿದ್ದಿ ಪಡೆದಿರುವ ಕೊಡಗಿನ ಮಡಿಕೇರಿಗೆ ಭೇಟಿ ನೀಡಬೇಕು. ಸುಂದರ ಪರಿಸರದ ಮಧ್ಯೆಯಿರುವ ಮಡಿಕೇರಿಯು ಪ್ರವಾಸಿಗರನ್ನು ಕೈಬೀಸಿ ಕರೆಯಲು ಇತ್ತೀಚೆಗೆ ನಾನಾ ಸೌಕರ್ಯಗಳನ್ನು ಮಾಡಿಕೊಟ್ಟಿದೆ. ಚುಮು ಚುಮು ಚಳಿಯ ನಡುವೆ ವರ್ಷಧಾರೆಯ ಜೊತೆಗೆ ತುಂಬಿ ಹರಿಯುವ ಜಲಧಾರೆಗಳು, ಕಣ್ಣಿಗೆ ಮುದ ಕೊಡುವ ರಮಣೀಯ ಸುಂದರ ದೃಶ್ಯಗಳು ನೋಡಿದವರ ಮೈ ಮನ ಪುಳಕಗೊಳ್ಳುವಂತೆ ಮಾಡುವುದು ಸುಳ್ಳಲ್ಲ.

ಇದನ್ನೂ ಓದಿ; ಚಿಕ್ಕಮಗಳೂರು: ಯೋಜನೆಗಳನ್ನು ಘೋಷಿಸುವಾಗ ತಲೆಯಲ್ಲಿ ಮೆದುಳು ಇರಲಿಲ್ಲಾ, ಆವಾಗ ಸಗಣಿ ತುಂಬಿತ್ತಾ?-ಶೋಭಾ ಕರಂದ್ಲಾಜೆ ಆಕ್ರೋಶ

ಮಡಿಕೇರಿ ಪಟ್ಟಣದ ಒಳಗೆ ಕಾಲಿಟ್ಟಾಗ ರಾಜಾಸೀಟ್, ಧುಮ್ಮಿಕ್ಕುವ ಜಲಪಾತ ಅಬ್ಬಿಪಾಲ್ಸ್, ತಳಿಯಂಡ ಮೊಳ್ ಬೆಟ್ಟ, ಗಾಳಿಬೀಡು, ತಾಯಿ ಕಾವೇರಿಯ ಜನ್ಮ ಸ್ಥಳ ತಲ ಕಾವೇರಿ ಹೀಗೆ ಹೇಳುತ್ತಾ ಹೋದರೆ ಮುಗಿಯದ ಪಟ್ಟಿಗಳ ರಾಶಿ. ಇದೀಗ, ಪ್ರವಾಸಿಗರಿಗೆ ಭೇಟಿ ನೀಡಲು ಮತ್ತೊಂದು ತಾಣ ರೆಡಿಯಾಗಿದ್ದು, ಪ್ರವಾಸಿಗರ ಮೈ ಜುಂ ಎನಿಸುವ ಅನುಭವ ನೀಡುವ ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್ಲಿಂಗ್ ದೃಶ್ಯ ವೈಭವ ನೀಡಲು ಗ್ಲಾಸ್ ಬ್ರಿಡ್ಜ್ ತಲೆ ಎತ್ತಿದೆ. ಅಷ್ಟಕ್ಕೂ ಈ ಜಾಗ ಎಲ್ಲಿದೆ ಅಂತೀರಾ?

ಇದನ್ನೂ ಓದಿ; ಚಿಕ್ಕಮಗಳೂರು: ಕಾರ್ಮಿಕ ಮಹಿಳೆಯ ಹತ್ಯೆ ಮಾಡಿ ಸುಟ್ಟುಹಾಕಿದ ಹಂತಕರು, ಸ್ಥಳಕ್ಕೆ sp ಉಮಾ ಪ್ರಶಾಂತ್ ಭೇಟಿ

ತಲುಪುವುದು ಹೇಗೆ?:
ಮಡಿಕೇರಿ ನಗರದಿಂದ ಭಾಗಮಂಡಲಕ್ಕೆ ಹೋಗುವ ದಾರಿಯಲ್ಲಿ 10 ಕಿಲೋ ಮೀಟರ್ ಕ್ರಮಿಸಿದರೆ ಉಡೋತ್ ಮೊಟ್ಟೆ ಎಂಬ ಸ್ಥಳ ಸಿಗಲಿದ್ದು, ಈ ಗ್ರಾಮದಲ್ಲಿ ಲೋಕಾರ್ಪಣೆಗೊಂಡ ಸುಂದರ ಗ್ಲಾಸ್ ಬ್ರಿಡ್ಜ್ ತಲೆ ಎತ್ತಿದೆ. ಈ ಪರಿಸರ ಪಟ್ಟಣದಿಂದ ಕೊಂಚ ಒಳಗೆ ಇರುವ ಹಿನ್ನೆಲೆ ಹಳ್ಳಿಯ ಸುಂದರ ದೃಶ್ಯ ವೈಭವ ಸವಿಯಬಹುದು. ಇದು ಕರ್ನಾಟಕದ ಮೊದಲ ಉದ್ದದ ಗ್ಲಾಸ್ ಸೇತುವೆಯಾಗಿದ್ದು, ವಿರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಜೊತೆಗೆ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣರವರು ಉದ್ಘಾಟನೆ ಮಾಡಿದ್ದರು.

ಇದನ್ನೂ ಓದಿ; ಕಡೂರು; ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಟ್ರಯಲ್ ರನ್ ಯಶಸ್ವಿ

ಇಲ್ಲಿ ಕೇವಲ ಗ್ಲಾಸ್ ಬ್ರಿಡ್ಜ್ ಜೊತೆಗೆ ಪ್ಲಾಂಟೇಷನ್ ಟೂರ್ ಕೂಡ ಮಾಡಬಹುದು. ಕಾಫಿ ತೋಟದೊಳಗೆ ಒಂದು ರೌಡ್ ಸುತ್ತಿ ಕೊಡಗಿನ ಕಾಫಿ ಬೆಳೆಯ ವೈವಿಧ್ಯತೆ ಬಗ್ಗೆ ತಿಳಿಯುವ ಕುತೂಹಲವಿರುವ ಪ್ರವಾಸಿಗರು ಒಮ್ಮೆ ಈ ಸ್ಥಳಕ್ಕೆ ಆಗಮಿಸಿದರೆ ಫುಲ್ ಖುಷ್ ಆಗೋದರಲ್ಲಿ ಡೌಟೆ ಇಲ್ಲ.

ದಕ್ಷಿಣ ಭಾರತದಲ್ಲಿ ದೊಡ್ಡದಾದ ಗ್ಲಾಸ್ ಬ್ರಿಡ್ಜ್ ಎಂಬ ಹೆಗ್ಗಳಿಕೆ ಹೊಂದಿರುವ ಈ ಸೇತುವೆಯನ್ನು ಗ್ಲಾಸ್ ಬಿಡ್ಜ್ ಮಾಲಿಕ ವಸಂತ್ ಅವರು ಒಟ್ಟು 40 ಲಕ್ಷ ರೂ ವೆಚ್ಚ ಮಾಡಿ ನಿರ್ಮಾಣ ಮಾಡಿದ್ದಾರೆ. ಮಡಿಕೇರಿ ಹೊರವಲಯದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷ ನಲ್ಲಿ ಸುಮಾರು 32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದ್ದು, ಸೇತುವೆ ಸುಮಾರು 5 ಟನ್ ಬಾರ ಹೊರುವ ಸಾಮರ್ಥ್ಯ ಹೊಂದಿದೆ. ಕಳೆದ ಐದು ತಿಂಗಳ ಯೋಜನೆಯ ಅನುಸಾರ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್ ಅನ್ನು ನಿರ್ಮಿಸಲಾಗಿದೆ.

ಇದರ ಮೇಲೆ ಹೆಜ್ಜೆ ಇಟ್ಟರೆ ಗಗನಕ್ಕೆ ಕಾಲಿಟ್ಟ ಅನುಭವದ ಜೊತೆಗೆ ಮೈ ಮನ ರೋಮಾಂಚನದ ಭಾಸವಾಗುವುದು. ಅಷ್ಟೇ ಅಲ್ಲದೆ, ಸೇತುವೆ ವ್ಯೂ ಪಾಯಿಂಟ್ ಗೆ ತಲುಪಿದ ಮೇಲೆ ಕೆಳಗೆ ಬಗ್ಗಿ ನೋಡಿದರೆ ಆಳ ಪ್ರಪಾತದ ಮೇಲೆ ನಿಂತಂತೆ ಎದೆ ಝಲ್ಲೆನಿಸುವ ಅನುಭವ ದೊರೆಯುತ್ತದೆ. ಎತ್ತ ಕಣ್ಣು ಹಾಯಿಸಿದರೂ ಕಣ್ಮನ ಸೆಳೆಯುವ ಪ್ರಕೃತಿಯ ವಿಹಂಗಮ ನೋಟ.

ಹಾಗಾದರೆ ಇಲ್ಲಿಗೆ ಎಂಟ್ರಿ ಫೀಸ್ ಎಷ್ಟು ಅಂತಿರಾ?:
ಇಲ್ಲಿಗೆ ಭೇಟಿ ನೀಡುವ ಒಬ್ಬ ಪ್ರವಾಸಿಗನಿಗೆ 200 ರೂಪಾಯಿ ಶುಲ್ಕವಿದ್ದು, ಒಮ್ಮೆಗೆ ಕೇವಲ ಆರು ಮಂದಿಯನ್ನ ಮಾತ್ರ ಸೇತುವೆ ಮೇಲೆ ತೆರಳಲು ಅನುವು ಮಾಡಿಕೊಡಲಾಗಿದೆ.

ಇಲ್ಲಿಗೆ ಯಾರೇ ಭೇಟಿ ನೀಡಿದರೂ ಫುಲ್ ಫಿದಾ ಆಗುವುದುಂತು ಫಿಕ್ಸ್! ಹಾಗಿದ್ದರೆ, ನೀವೂ ಕೂಡ ಈ ಸ್ಥಳಕ್ಕೆ ಮಿಸ್ ಮಾಡದೆ ಒಮ್ಮೆ ಭೇಟಿ ಕೊಡಿ.

Most Popular

Recent Comments