ಬೆಂಗಳೂರು: ನೂತನ ಕೆಂಗೇರಿವರೆಗಿನ ನಿರ್ಮಿಸಲಾಗಿರುವಂತಹ ಮೆಟ್ರೋ ಮಾರ್ಗದ ಉದ್ಘಾಟನೆಯ ಸಮಾರಂಭದಲ್ಲಿ ಕನ್ನಡ ನಿರ್ಲಕ್ಷ್ಯದ ಧೋರಣೆಯ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ.
ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ಹಂತ -2 ರ ಅಡಿಯಲ್ಲಿ 7.5 ಕಿ.ಮೀ ಉದ್ದದ ನಮ್ಮ ಮೆಟ್ರೋ ಪಶ್ಚಿಮ ವಿಸ್ತರಣಾ ಮಾರ್ಗವನ್ನು (ನೇರಳೆ ಮಾರ್ಗ) ಕೇಂದ್ರ ಸಚಿವರಾಗಿರುವಂತಹ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರ ದಂಡೇ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆದರೆ, ಈ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಒಂದೇ ಒಂದು ಅಕ್ಷರಕ್ಕೂ ಜಾಗವನ್ನು ನೀಡದಿರುವ ಮೂಲಕ ನಾಡವಿರೋಧಿ ಬಿಜೆಪಿ ಸರ್ಕಾರ ನಮ್ಮ ಕನ್ನಡ ಭಾಷೆಗೆ ದ್ರೋಹವನ್ನು ಬಗೆಯುವ ಕೆಲಸವನ್ನು ಮುಂದುವರೆಸಿದೆ ಎಂದು ಕೆಪಿಸಿಸಿ ಟ್ವೀಟರ್ ಖಾತೆಯಲ್ಲಿ ಆರೋಪಿಸಲಾಗಿದೆ.
ರಾಜ್ಯ ಬಿಜೆಪಿ ಸರ್ಕಾರ ಕನ್ನಡವನ್ನು ಕೊಲ್ಲುವ ನಾಗಪುರದ ಆದೇಶವನ್ನ ಪಾಲಿಸುತ್ತಿದೆ ಬಿಜೆಪಿ ಆಡಳಿತದಲ್ಲಿ ನಮ್ಮ ರಾಜ್ಯದಲ್ಲಿ ಕನ್ನಡಿಗನೂ ಅನಾಥ, ಕನ್ನಡವೂ ಅನಾಥವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿಯ ವಿರುದ್ದ ಕಿಡಿಕಾರಿದೆ.