Saturday, June 10, 2023
Homeಇತರೆಸಿದ್ದರಾಮಯ್ಯ ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ : ಬಿಜೆಪಿ ವ್ಯಂಗ್ಯ

ಸಿದ್ದರಾಮಯ್ಯ ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ : ಬಿಜೆಪಿ ವ್ಯಂಗ್ಯ

ಬೆಂಗಳೂರು: ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ ಸಿದ್ದರಾಮಯ್ಯ ಎಂದು ಮಂಗಳವಾರ ಬಿಜೆಪಿ ವ್ಯಂಗ್ಯಮಾಡಿದೆ.

ದೇಶದಾದ್ಯಂತ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಪ್ರಶ್ನಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದರು.

ಇದಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ತಿರುಗೇಟನ್ನು ನೀಡಿರುವ ಬಿಜೆಪಿ, ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರು ಕತ್ತಲೆಯಲ್ಲಿ ನಿಂತಿರುವ ಫೋಟೋವನ್ನು ಹಂಚಿಕೊಂಡು, ಇವರು ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ ಎಂದು ಕಿಡಿಕಾರಿದೆ.

ಮಾರ್ಚ್‌ 18, 2016ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುತ್ತಿದ್ದ ವೇಳೆ ವಿಧಾನಸೌಧದ ಸದನದಲ್ಲಿ ವಿದ್ಯುತ್‌ ‘ಕೈ’ಕೊಟ್ಟು, ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ ಬಜೆಟ್‌ ಪ್ರತಿ ಓದಿದ ಪ್ರಸಂಗ ನಡೆದಿತ್ತು. ಆ ಸನ್ನಿವೇಶವನ್ನು ಬಿಜೆಪಿ ಮತ್ತೊಮ್ಮೆ ನೆನಪಿಸಿದೆ.

Most Popular

Recent Comments