ಶಿವಮೊಗ್ಗ: ಬಿಜೆಪಿ ಪಕ್ಷವನ್ನು ನಾಶ ಮಾಡಲು ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಕೈಯಲ್ಲೇ ಆಗಲಿಲ್ಲ ಇನ್ನೂ ರಾಹುಲ್ ಗಾಂಧಿ ಕೈಯ್ಯಲ್ಲೂ ಆಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಬಿಜೆಪಿ ಪಕ್ಷ ಬೆಳೆಯುತ್ತ ಹೋಗಿದೆ ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಬಲ ರಾಜಕಾರಣಿಗಳಿಂದಲೂ ಅದನ್ನು ನಾಶ ಮಾಡಲು ಆಗಿಲ್ಲ ಇನ್ನೂ ರಾಹುಲ್ ಗಾಂಧಿ ಯವರ ಬಳಿ ಆಗುವುದೇ? ಎಂದಿದ್ದಾರೆ.
ನರೇಂದ್ರ ಮೋದಿಯವರು ವಿರೋಧ ಪಕ್ಷದ ನಾಯಕ ದೇವೇಗೌಡರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ತೋರಿಸಿದ್ದಾರೆ, ಆದರೆ ಸಿದ್ದರಾಮಯ್ಯ ಮಾತ್ರ ಮೋದಿ ಹಾಗೂ ನಳಿನ್ ಕುಮಾರ್ ಕಟೀಲ್ ಮುಂತಾದವರ ಬಗ್ಗೆ ಮಾತನಾಡುವುದನ್ನು ಬಿಟ್ಟಿಲ್ಲ ಎಂದು ಕಿಡಿಕಾರಿದರು.