Wednesday, November 29, 2023
Homeರಾಜಕೀಯಸಿ.ಟಿ. ರವಿ ಕೊಲೆಗಡುಕ : ಏಕವಚದಲ್ಲಿ ಸಿ ಟಿ ರವಿಯ ವಿರುದ್ಧ ವಾಗ್ದಾಳಿ ನಡೆಸಿದ ಕೆ...

ಸಿ.ಟಿ. ರವಿ ಕೊಲೆಗಡುಕ : ಏಕವಚದಲ್ಲಿ ಸಿ ಟಿ ರವಿಯ ವಿರುದ್ಧ ವಾಗ್ದಾಳಿ ನಡೆಸಿದ ಕೆ ಪಿ ಸಿ ಸಿ ವಕ್ತಾರ ಎಂ ಲಕ್ಷ್ಮಣ್

ಮೈಸೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವಿ ಕೊಲೆಗಡುಕ  ಎಂದು ಸಿ.ಟಿ. ರವಿಯ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ರವಿ, 2019ರಲ್ಲಿ ಕುಣಿಗಲ್ ಬಳಿ ಕುಡಿದು ಕಾರು ಚಲಾಯಿಸಿದ್ದ. ಇಬ್ಬರನ್ನು ಕೊಂದು ಬಳಿಕ ಮದ್ರಾಸ್‌ನಲ್ಲಿ ತಲೆ ಮರೆಸಿಕೊಂಡಿದ್ದ. ಇಂತಹ ಸಿ.ಟಿ. ರವಿ ಕಾಂಗ್ರೆಸ್ ಸಿ.ಟಿ. ರವಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕಾಗುತ್ತದೆ ನಾಯಕರ ಬಗ್ಗೆ ಮಾತಾಡ್ತಾನೆ ಎಂದು ಲಕ್ಷ್ಮಣ್ ಹರಿಹಾಯ್ದಿದ್ದಾರೆ.

ಮೊದಲು ಭಾರತೀಯರು, ಆನಂತರ ಕನ್ನಡಿಗರು ಎಂಬ ಹೇಳಿಕೆಗೆ ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮೋಸವನ್ನು ಮಾಡುತ್ತಿದೆ. ಬಿಜೆಪಿ ನಾಯಕ ಸಿ.ಟಿ. ರವಿಗೆ ನಾಚಿಕೆಯಾಗಬೇಕು. ಮೇಕೆದಾಟು ವಿಚಾರದಲ್ಲಿ ಬಿಜೆಪಿಯವರದ್ದು ದ್ವಂದ್ವ ನಿಲುವು. ಮೇಕೆದಾಟು ಯೋಜನೆಯ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ತಮಿಳುನಾಡಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ ಮಾಡಿದ್ದಾರೆ.

ಹಾಗೂ ಈಶ್ವರಪ್ಪ ಸರ್ಕಾರದ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಕಾಂಗ್ರೆಸ್ ಬಗ್ಗೆ ಸಚಿವ ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿಚಾರವಾಗಿಯೂ ಲಕ್ಷ್ಮಣ್ ಮಾತನಾಡಿದ್ದಾರೆ. ಈಶ್ವರಪ್ಪ ಬಿಜೆಪಿ ಮೇಲಿರುವ ಕೋಪವನ್ನು ಕಾಂಗ್ರೆಸ್ ಮೇಲೆ ತೋರಿಸುತ್ತಿದ್ದಾರೆ. ಇವರಿಗೇನಾದ್ರೂ ಸಂಸ್ಕೃತಿ, ತಿಳುವಳಿಕೆ, ಮಾನ ಮರ್ಯಾದೆ ಇದೆಯಾ ಎಂಬುದನ್ನು ಮೊದಲು ತಿಳಿಸಿ. ನಿಮ್ಮ ಮಗ ಕಾಂತೇಶ್ ರವರು ಬೆಂಗಳೂರಿನ ಪೀಣ್ಯದಲ್ಲಿ ಸೈಟ್ ನನ್ನು ಖರೀದಿಸಿದ್ದಾರೆ. 4 ಇಂಡಸ್ಟ್ರಿಯಲ್ ಸೈಟು ಖರೀದಿಸಿದ್ದಾರೆ, ನೀವು ಏನು ಮಾಡ್ತಿದ್ದೀರಿ? ಒಬ್ಬರಿಗೆ ನಾಲ್ಕು ಸೈಟ್ ಹೇಗೆ ನೀಡ್ತಾರೆ? ಇದರ ಒಟ್ಟು ಬೆಲೆ ಎಷ್ಟು? ಇಡಿ, ಐಟಿ ಯಾಕೆ ಇವರ ಬಗ್ಗೆ ತನಿಖೆ ಮಾಡುತ್ತಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರಾ ರೈಡ್ ಮಾಡೋದಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ನನ್ನ ಬಳಿ ಸಂಪೂರ್ಣ ದಾಖಲಾತಿ ಇದೆ. ಈಶ್ವರಪ್ಪ ಸರ್ಕಾರದ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಿಮ್ಮ ಮಗ ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಇಡಿ ಹಾಗೂ ಐಟಿಗೆ ದೂರು ನೀಡುತ್ತಿದ್ದೇವೆ. ಯಾವ ರೀತಿ ತನಿಖೆ ಮಾಡುತ್ತಾರೋ ನೋಡುತ್ತೇವೆ. ಈಶ್ವರಪ್ಪ ಮೊದಲು ಹುಚ್ಚರ ರೀತಿ ಮಾತನಾಡುವುದನ್ನು ಬಿಡಲಿ ಎಂದು ಲಕ್ಷ್ಮಣ್‌ರವರು ಹೇಳಿದ್ದಾರೆ.

Most Popular

Recent Comments