Friday, June 9, 2023
Homeಮಲೆನಾಡುಹಿಂದುತ್ವದ ಬಗ್ಗೆ ಭಾಷಣ ಮಾಡುವ ಬಿಜೆಪಿ ನಾಯಕರು ಯಾಕೆ ದೇವಸ್ಥಾನದ ರಕ್ಷಣೆಗೆ ಮುಂದಾಗಿಲ್ಲ? ; JDS...

ಹಿಂದುತ್ವದ ಬಗ್ಗೆ ಭಾಷಣ ಮಾಡುವ ಬಿಜೆಪಿ ನಾಯಕರು ಯಾಕೆ ದೇವಸ್ಥಾನದ ರಕ್ಷಣೆಗೆ ಮುಂದಾಗಿಲ್ಲ? ; JDS ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಪ್ರಶ್ನೆ

ಹಿಂದುತ್ವದ ಹೆಸರಿನಲ್ಲಿ ಜನರನ್ನು ಸೆಳೆದು ಅಧಿಕಾರ ಮಾಡುವ ಬಿಜೆಪಿ ನಾಯಕರು ಬೆಳಗ್ಗಿನ ಸಮಯದಲ್ಲಿ ಚೋಳರ ಕಾಲದ ಪುರಾತನ ದೇವಾಲಯವನ್ನು ರಸ್ತೆಯ ಅಭಿವೃದ್ದಿ ಹೆಸರಿನಲ್ಲಿ ಒಡೆದು ಹಾಕಿರುವುದು ದುರದೃಷ್ಟಕರ ಸಂಗತಿ. ಬರೀ ಬಾಯಿ ಮಾತಿನ ಹೇಳಿದರಷ್ಟೇ ಸಾಲದು. ರಾಜಕೀಯ ಮಾಡುವ ನಾಯಕರುಗಳು ಈಗ ಎಲ್ಲಿದ್ದಾರೆ ಎಂದು ಮೈಸೂರಿನ ಪ್ರಖ್ಯಾತ ಉದ್ಯಮಿ ಸುಧಾಕರ್ ಎಸ್.ಶೆಟ್ಟಿ ಅವರು ಪ್ರಶ್ನೆ ಮಾಡಿದ್ದಾರೆ.

ಹಲವಾರು ಬಾರಿ ದೇವಸ್ಥಾನ ಕೆಡಗುವ ಸಂದರ್ಭ ಬಂದಾಗ ರಸ್ತೆ ಪಕ್ಕದಲ್ಲಿ ಸರ್ಕಾರದ ಜಾಗದಲ್ಲಿ ದೇವಸ್ಥಾನ ನಿರ್ಮಿಸಿಕೊಟ್ಟು ನಂತರ ದೇವಾಲಯಗಳನ್ನು ತೆರವುಗೊಳಿಸಲಾಗುತ್ತದೆ. ಆದರೆ ಊರಿನ ಮುಖಂಡರು, ಹಿರಿಯರನ್ನು ವಿಶ್ವಾಸಕ್ಕೆ ಪಡೆಯದೆ ಬೆಳಗ್ಗಿನ ಜಾವ 4 ಗಂಟೆಗೆ ದೇವಸ್ಥಾನ ಒಡೆದಿರುವುದು ಸರ್ಕಾರವು ಧರ್ಮಕ್ಕೆ ಮಾಡಿದ ದ್ರೋಹವಾಗಿದೆ ಎಂದು ಅವರು ಹೇಳಿದ್ದಾರೆ.

ಪುರಾತನ ಕಾಲಭೈರವ ಮತ್ತು ಆದಿಶಕ್ತಿ ದೇವಾಲಯ ಸುಮಾರು 600 ರಿಂದ 700 ವರ್ಷ ಪುರಾತನವಾಗಿದ್ದು ಇದನ್ನು ಚೋಳರು ನಿರ್ಮಿಸಿದ್ದರೆಂದು ಆ ಊರಿನ ಹಿರಿಯರು ಹೇಳಿದ್ದಾರೆ. ಬೇರೆ ದೇಶದಲ್ಲಿ 150 ವರ್ಷ ಹಳೆಯದಾದ ಕಟ್ಟಡಗಳನ್ನು ಹೆರಿಟೇಜ್ ಬಿಲ್ಡಿಂಗ್ ಎಂದು ಘೋಷಿಸಲಾಗುತ್ತದೆ. ಆದರೆ ದುರದೃಷ್ಟ ನಮ್ಮ ಕನ್ನಡ ನಾಡಿನಲ್ಲಿ ಇಂತಹ ಪುರಾತನ ದೇವಸ್ಥಾನವನ್ನು ಸರ್ಕಾರ ಏಕಾಏಕಿ ನೆಲಸಮ ಮಾಡಲಾಗಿರುವುದು ಅತ್ಯಂತ ನೋವಿನ ಸಂಗತಿ. ಮೈಸೂರಿನ ಹಲವಾರು ದೇವಾಲಯಗಳು ಪುರಾತನವಾದುದು, ಆದರೆ ಅಂತಹ ದೇವಸ್ಥಾನಗಳನ್ನು ಏಕಾಏಕಿ ಒಡೆದು ಮುಂದಿನ ಪೀಳಿಗೆಗೆ ಯಾವುದೇ ಪುರಾತನವಾದ ಹಾಗೂ ಅತ್ಯಮೂಲ್ಯವಾದ ಮಂದಿರ ಅಥವಾ ಕಟ್ಟಡಗಳನ್ನು ಇರಿಸದೆ ಇರುವುದು ಬಹಳ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ವರದಿ – ಮಂಜುನಾಥ್ ಗೌಡ ಮೈಸೂರು.

Most Popular

Recent Comments