ಬೆಂಗಳೂರು: ಬಿಟ್ ಕಾಯಿನ್ ಹಗರಣದ ಮುಖ್ಯ ರೂವಾರಿ ಶ್ರೀಕೃಷ್ಣ / ಶ್ರೀಕಿ ಗೆ ಸೂಕ್ತ ಪೊಲೀಸ್ ಭಧ್ರತೆಯನ್ನು ನೀಡಬೇಕೆಂದು ಸಿಎಂ ಬೊಮ್ಮಾಯಿಗೆ ಒತ್ತಾಯಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಸರಣಿ ಟ್ವಿಟ್ ಮಾಡಿದ ಸಿದ್ದರಾಮಯ್ಯ ಬಿಟ್ ಕಾಯಿನ್ ಪ್ರಕರಣದಲ್ಲಿ ನಾಟಕ ರೀತಿಯಲ್ಲಿ ಶ್ರೀಕೃಷ್ಣನನ್ನು ಬಂಧಿಸಿ, ಅದೇ ರೀತಿ ಜಾಮೀನು ನೀಡಿ ಬಿಡುಗಡೆಯಾಗಿರುವ ಘಟನೆಯಲ್ಲಿ ಪೋಲೀಸರ ನಡವಳಿಕೆಯ ಮೇಲೆ ಸಂಶಯ ಮೂಡಿದೆ.
ಅಲ್ಲದೇ ಈ ಬಿಟ್ ಕಾಯಿನ್ ಹಗರಣದಲ್ಲಿ ಸರ್ಕಾರದ ಅನೇಕ ಪ್ರಭಾವಶಾಲಿ ವ್ಯಕ್ತಿಗಳು ಶಾಮಿಲಾಗಿರುವುದು ತಿಳಿದುಬಂದಿದೆ, ಆದ್ದರಿಂದ ತಾವು ಮಾಡಿದ ಹಗರಣವನ್ನು ಎಲ್ಲಿ ಬಾಯಿಬಿಡುವನೋ ಎಂದು ಆತನ ಜೀವಕ್ಕೆ ಆಪತ್ತು ತರುತ್ತಾರೆ.
ಬಿಟ್ ಕಾಯಿನ್ ಹಗರಣದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಖಾತೆಗಳ ಪಾಸ್ ವರ್ಡ್ ಗಳು ಸಹ ಸೇರಿ ಅನೇಕ ಮಾಹಿತಿಗಳು ಶ್ರೀಕಿಯ ನೆನಪಲ್ಲಿ ಮಾತ್ರ ಇದೆ ಯಾವುದೇ ರೀತಿಯ ಲಿಖಿತ ಮಾದರಿಯ ಮಾಹಿತಿಯ ದಾಖಲೆ ಇಲ್ಲ ಆದ್ದರಿಂದ ಆತನ ಜೀವಕ್ಕೆ ಸಂಚನ್ನು ತರಲು ಕೆಲವರು ನಿರ್ಧರಿಸುತ್ತಾರೆ ಆದ್ದರಿಂದ ಆತನಿಗೆ ಪೊಲೀಸ್ ಭದ್ರತೆಯ ಅವಶ್ಯಕತೆ ಇರುತ್ತದೆ ಬಿಟ್ ಕಾಯಿನ್ ರೂವಾರಿ ಶ್ರೀಕಿಗೆ ಪೊಲೀಸ್ ಭದ್ರತೆಯನ್ನು ನೀಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿಯನ್ನು ಒತ್ತಾಯಿಸಿದರು.