Sunday, June 4, 2023
Homeಇತರೆಅಪ್ರಾಪ್ತರನ್ನು ಬಳಸಿಕೊಂಡು ಬೈಕ್ ಕಳ್ಳತನ, ಐನಾತಿ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

ಅಪ್ರಾಪ್ತರನ್ನು ಬಳಸಿಕೊಂಡು ಬೈಕ್ ಕಳ್ಳತನ, ಐನಾತಿ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

ಬೆಂಗಳೂರು : ಅಪ್ರಾಪ್ತರನ್ನು ಬಳಸಿಕೊಂಡು ದ್ವಿಚಕ್ರ ವಾಹನ ಕದಿಯುತಿದ್ದ ಪೋಲಿಸ್ ಕಾನ್ಸ್ ಟೇಬಲ್ ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ ವಿದ್ಯಾರಣ್ಯಪುರದ ಪೊಲೀಸ್ ಕಾನ್ಸ್ ಟೇಬಲ್ ಹೊನ್ನಪ್ಪ, ಆತನ ಜೊತೆಗೆ ಇದ್ದ ಇಬ್ಬರು ಅಪ್ರಾಪ್ತ ಬಾಲಕರು ರವಿ ಮತ್ತು ರಮೇಶ್ ಮತ್ತು ಅವರ ತಂಡ ಎಂದು ತಿಳಿದುಬಂದಿದೆ.

ಹೊನ್ನಪ್ಪ ತನ್ನ ಮನೆಯಲ್ಲಿಯೇ ಆ ಹುಡುಗರನ್ನು ಉಳಿಸಿಕೊಂಡು ಬೈಕ್ ಗಳ ಕಳ್ಳತನವನ್ನು ಮಾಡಿಸುತ್ತಿದ್ದ. ಈ ತಂಡ ನಗರದ ಸುತ್ತ ಮುತ್ತ ಇದ್ದ ಬೈಕ್ ಗಳನ್ನು ಕದಿಯುವ ಕೆಲಸವನ್ನು ಮಾಡುತ್ತಿತ್ತು.

ಪೊಲೀಸ್ ಕಾನ್ಸ್ ಟೇಬಲ್ ಬೈಕ್ ಗಳನ್ನು ಕಳ್ಳತನ ಮಾಡಿಸಿ ಕದ್ದ ವಾಹನಗಳಿಗೆ ಆಲ್ಟ್ರೇಷನ್ ಮಾಡಿಸಿ, ಆ ಬೈಕ್ ಗಳ ದಾಖಲೆಗಳನ್ನು ಸ್ವತಃ ಅವರೇ ತಯಾರು ಮಾಡುತ್ತಿದ್ದರು. ದಾಖಲೆಗಳನ್ನು ತಯಾರು ಮಾಡಲು ಮನೆಯಲ್ಲಿಯೇ ಲ್ಯಾಪ್ ಟಾಪ್ ಮತ್ತು ಪ್ರಿಂಟರ್ ನನ್ನು ಇಟ್ಟುಕೊಂಡು ದಾಖಲೆ ತಯಾರಿಸಿ ಅನಂತರ ಅದನ್ನು ಗ್ರಾಹಕರಿಗೆ ಮಾರುತ್ತಿದ್ದರು.

ಕಳ್ಳತನ ಮಾಡಿಸಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಐನಾತಿ ಕಾನ್ಸ್ ಟೇಬಲ್ ನನ್ನು ಮತ್ತು ಆತನ ಸಹಾ ಕಳ್ಳರನ್ನು ಮಾಗಡಿಯ ಪೊಲೀಸರು ಯಶಸ್ವಿ ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 77 ಲಕ್ಷ ಮೌಲ್ಯದ ಸುಮಾರು 52 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭಿಸಿದೆ.

Most Popular

Recent Comments