ಹಾನಗಲ್: ಹುಣಸಿಕಟ್ಟೆ ಕ್ರಾಸ್ ಬಳಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಹಾನಗಲ್- ಬಂಕಾಪೂರ ರಸ್ತೆಯ ತಾಲ್ಲೂಕಿನ ಹುಣಸಿಕಟ್ಟಿ ಕ್ರಾಸ್ (ಗುಂಡೂರ) ಬಳಿಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.
ತಾಲ್ಲೂಕಿನ ಬೆಳಗಾಲಪೇಟೆ ಗ್ರಾಮದ ಚೇತನ ಈಳಿಗೇರ (32) ಮತ್ತು ಸುರೇಶ ಚಕ್ರಸಾಲಿ (33) ಮೃತಪಟ್ಟ ಬೈಕ್ ಸವಾರರಾಗಿದ್ದಾರೆ. ಇವರು ಹಾನಗಲ್‌ನಿಂದ ಬೆಳಗಾಲಪೇಟೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಹಾನಗಲ್ ಸಾರಿಗೆ ಘಟಕಕ್ಕೆ ಸೇರಿದ ಬಸ್ ಗೋಕಾಕನಿಂದ ಹಾನಗಲ್‌ಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ.