Monday, December 11, 2023
Homeಮಲೆನಾಡುಕಾತಾಳೆ ಗೆಡ್ಡೆಗೆ ಬಣ್ಣ ಹಚ್ಚಿ ಭೂಚಕ್ರ ಗೆಡ್ಡೆ ಎಂದು ತಿನ್ನಿಸುತ್ತಿದ್ದಾರೆ ಹುಷಾರ್!

ಕಾತಾಳೆ ಗೆಡ್ಡೆಗೆ ಬಣ್ಣ ಹಚ್ಚಿ ಭೂಚಕ್ರ ಗೆಡ್ಡೆ ಎಂದು ತಿನ್ನಿಸುತ್ತಿದ್ದಾರೆ ಹುಷಾರ್!

ಕೆಲವು ನಗರದಲ್ಲಿ ಭೂಚಕ್ರ ಗೆಡ್ಡೆ ಎಂದು ದ್ವಿಚಕ್ರ ವಾಹನದ ಮೇಲೆ ಮಾರುತಿದ್ದರು. ಅದಕ್ಕೆ ಉಪ್ಪು, ಖಾರ, ಸಕ್ಕರೆ ಸೇರಿಸಿ ಕೊಡುತ್ತಿದ್ದರು, ಇದನ್ನು ಜನರು ವಿಸ್ಮಯದಿಂದ ತೆಗೆದುಕೊಂಡು ತಿಂದು ಆಸ್ವಾದಿಸುತ್ತಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಂದ ವಿಡಿಯೋ ನೋಡಿ, ಸ್ಥಳೀಯವಾಗಿ ಬೆಳೆಯುವ ಕತ್ತಾಳೆ ಗಿಡವನ್ನು ಕಿತ್ತು ಅದನ್ನು ಕದ್ದು ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಹಿಡಿದು ಥಳಿಸಿರುವ ಘಟನೆ ನಡೆದಿತ್ತು.

ಇದನ್ನೂ ಓದಿ; ಚಿಕ್ಕಮಗಳೂರು: ಕಾರ್ಮಿಕ ಮಹಿಳೆಯ ಹತ್ಯೆ ಮಾಡಿ ಸುಟ್ಟುಹಾಕಿದ ಹಂತಕರು, ಸ್ಥಳಕ್ಕೆ sp ಉಮಾ ಪ್ರಶಾಂತ್ ಭೇಟಿ

ಹೌದು ತಿಪಟೂರು ಎಂಬ ತಾಲೂಕಿನಲ್ಲಿ ಭೂಚಕ್ರ ಗೆಡ್ಡೆ ಎಂದು ಕತ್ತಾಳೆ ಗಿಡವನ್ನು ಕಿತ್ತು ಅದನ್ನು ಕದ್ದು ದ್ವಿಚಕ್ರ ವಾಹನದ ಮೇಲೆ ಮಾರುತಿದ್ದ ವ್ಯಕ್ತಿಗಳನ್ನು ಹಿಡಿದು ಥಳಿಸಿರುವ ಘಟನೆ ನಡೆದಿತ್ತು. ಈ ಕಾತ್ತಾಳೆ ಗೆಡ್ಡೆಗೆ ಬಣ್ಣ ಹಚ್ಚಿ ಭೂಚಕ್ರ ಗೆಡ್ಡೆ ಎಂದು ತಿನ್ನಿಸುತ್ತಿದ್ದಾರೆ ಹುಷಾರ್, ಹಾಗಾದರೆ ಯಾವುದು ಸತ್ಯ ಯಾವುದು ಸುಳ್ಳು? ಭೂಚಕ್ರ ಗೆಡ್ಡೆ ಹೇಗಿರುತ್ತೆ ಇದರಿಂದ ಏನು ಉಪಯೋಗವಿದೆ, ಇದು ಎಲ್ಲಿ ಸಿಗುತ್ತೆ ಈ ಎಲ್ಲಾ ಮಾಹಿತಿ ಇಲ್ಲಿದೆ.

ಇದನ್ನೂ ಓದಿ; ಕಡೂರು; ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಟ್ರಯಲ್ ರನ್ ಯಶಸ್ವಿ

ಭೂಚಕ್ರ ಗಡ್ಡೆ ನಿಮಗೆ ಗೊತ್ತೆ ಎಂದು ಕೇಳಿದರೆ ಈ ಹೆಸರು ಕೇಳೆ ಇಲ್ಲ ಎನ್ನುವವರು ಜಾಸ್ತಿ. ಇದು ಅತ್ಯಂತ ವಿರಳವಾಗಿ ಸಿಗುವ ಗೆಡ್ಡೆ. ಬೆಟ್ಟಗುಡ್ಡಗಳ ನಡುವೆ ಸಿಗುವ ಈ ಗೆಡ್ಡೆಗೆ ಭಾರಿ ಡಿಮ್ಯಾಂಡ್ ಇದೆ. ಬೃಹತ್ ಗಾತ್ರ, ಈ ಗಡ್ಡೆ ಭೂಮಿಯೊಳಗೆ 10-15 ಮೀಟರ್ ಆಳದಲ್ಲಿ ಸಿಗುತ್ತದೆ.

ಭೂಮಿಯೊಳಗೆ 10-15 ಮೀಟರ್ ಆಳದವರೆಗೂ ವ್ಯಾಪಿಸೋ ಈ ಗೆಡ್ಡೆ ಆಯುರ್ವೇದದಲ್ಲಿ ಪ್ರಾಮುಖ್ಯತೆ ಹೊಂದಿದ್ದು ಔಷಧೀಯ ಗುಣಗಳನ್ನು ಓಳಗೊಂಡಿದೆ. ಇಂತಹ ಭೂಚಕ್ರ ಗೆಡ್ಡೆಯ ಮಾರಾಟ ಹಲವು ನಗರದ ಬೀದಿ ಬೀದಿಗಳಲ್ಲಿ ಬಲು ಜೋರಾಗಿ ಸಾಗಿದೆ. ಜನ ಸಹ ಆಶ್ಚರ್ಯಚಕಿತರಾಗಿ ಏನಪ್ಪ ಇದು ಅಂತ ಕೂತೂಹಲದಿಂದ ನೋಡುತ್ತಿದ್ದಾರೆ.

ಭೂಚಕ್ರ ಗೆಡ್ಡೆಯ ಹಿನ್ನೆಲೆ;
ಭೂಚಕ್ರ ಗೆಡ್ಡೆ ಗಿಡದ ವೈಜ್ಞಾನಿಕ ಹೆಸರು ಕ್ಯಾಪರಿಸ್ ಒಬ್ಲಾಂಗಿಪೋಲಿಯಾ ಅಂತ. ಭಾರತದ ಮೂಲದ ಈ ಗಿಡವನ್ನು ಸಂಸ್ಕೃತದಲ್ಲಿ ಮಧುಸ್ರವ, ಮಧುವಲ್ಲಿ, ಮುರಹರಿ, ಕನ್ನಡದಲ್ಲಿ ಭೂಚಕ್ರ ಗೆಡ್ಡೆ, ನೀಲ ಸಕ್ಕರೆ ಗೆಡ್ಡೆ, ಇರುಳ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಂಗ್ಲಿಷ್‌ನಲ್ಲಿ ಡೆಸರ್ಟ್ ಕ್ಯಾಪರ್ ಡೆಸರ್ಟ್ ಮೆರುವಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ.


ಇತ್ತೀನ ಜನಪ್ರಿಯ ಸುದ್ದಿಗಳು


ಔಷದಿಯ ಗುಣಗಳು:
ಮಾರಾಟಗಾರ ಹೇಳುವ ಪ್ರಕಾರ ಬಹುಪಯೋಗ ಬಾಯಾರಿಕೆ ನೀಗಿಸುವುದು, ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡಕ್ಕೆ ಇದು ರಾಮಬಾಣ ಎನ್ನಲಾಗುತ್ತದೆ, ಹೀಗಾಗಿ ಜನರು ಅದನ್ನು ಖರೀದಿಸಿ ತಿನ್ನುತ್ತಿದ್ದಾರೆ.

ದೇಶ-ವಿದೇಶಗಳಲ್ಲಿ ಬಳಕೆ:
ಮೂಲ ಭಾರತವಾದರೂ ಪಾಕಿಸ್ತಾನ, ಸೌದಿಅರೇಬಿಯಾ, ಆಫ್ರಿಕಾ ದೇಶಗಳಲ್ಲಿ ಈ ಗಿಡ ಕಂಡು ಬರುತ್ತದೆ. ಕುರುಚಲು ಕಾಡುಗಳ ಮಧ್ಯೆ ಕರ್ನಾಟಕದ ಪಶ್ಚಿಮ ಘಟ್ಟಗಳು ಸೇರಿದಂತೆ ಕೇರಳ ಹಾಗೂ ಮಹಾರಾಷ್ಟ್ರದ ಬೆಟ್ಟಗುಡ್ಡಗಳ ಕುರುಚಲು ಕಾಡುಗಳಲ್ಲಿ ಬೆಳೆಯುತ್ತದೆ. ಇಂತಹ ಭೂಚಕ್ರ ಗೆಡ್ಡೆ ಸಿಗುವುದು ಅಪರೂಪ.

ಕಾಫಿನಾಡಿನಲ್ಲೂ ಸಿಗುತ್ತೆ ಈ ಭೂ ಚಕ್ರ ಗೆಡ್ಡೆ:
ಕಾಫಿನಾಡು ಚಿಕ್ಕಮಗಳೂರಿನ ದತ್ತಪೀಠ ಗಿರಿ ಶ್ರೇಣಿಯಲ್ಲಿ ಹಾಗೂ ಮುಳಯ್ಯನಗಿರಿ ಯಲ್ಲೂ ಸಿಗುತ್ತೇ ಈ ಭೂ ಚಕ್ರ ಗೆಡ್ಡೆ ಇದು 20 ವರ್ಷಕ್ಕೆ ಒಮ್ಮೆ ಬೆಳೆಯುವ ಈ ಭೂಚಕ್ರ ಗೆಡ್ಡೆ ಎಂದೆ ಮಲೆನಾಡಿನಲ್ಲಿ ಹೇಳಲಾಗುತ್ತದೆ.

ಇದು ಗ್ರಾಮಗಳಲ್ಲಿ 10 ರೂ.ಗೆ 4 ಪೀಸ್ ನೀಡಿದರೇ, ನಗರದಲ್ಲಿ 30 ರೂ.ಗೆ ಒಂದು ಪೀಸ್ ಮಾರಾಟ ಮಾಡಲಾಗುತ್ತಿದೆ.

Most Popular

Recent Comments