ಕಾರವಾರ: ಹಳೆಯ ಪ್ರಕರಣಕ್ಕೆ ಸಂಬoಧಿಸಿದoತೆ ಎಐಎ (ರಾಷ್ಟ್ರೀಯ ತನಿಖಾ ದಳ) ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ದಾಳಿ ನಡೆಸಿದೆ. ಭಟ್ಕಳದ ಉಮರ್ ಸ್ಟ್ರೀಟ್, ತೆಂಗಿನ ಗುಂಡಿ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಏಕಕಾಲಕ್ಕೆ ದಾಳಿಯನ್ನು ನಡೆಸಿ ಮೂವರನ್ನು ವಶಕ್ಕೆ ಪಡೆದಿದೆ.
ಭಟ್ಕಳದ ಅಮೀನ್ ಜುವೇಬ್ ಹಾಗೂ ಜವಾದ್ ಇಬ್ಬರನ್ನು ತೀವ್ರ ತನಿಖೆಗೆ ಒಳಪಡಿಸಿದ್ದು ಈ ಹಿಂದೆ ದುಬೈ ನಲ್ಲಿ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕನ ಒಬ್ಬ ತಮ್ಮನನ್ನೂ ಎಐಎ ವಶಕ್ಕೆ ಪಡೆದಿದೆ.
ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ ಜಮಾವಣೆ ಮಾಡಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮೊಕ್ಕಾಂ ಹೂಡಿದ್ದಾರೆ. ವಶಕ್ಕೆ ಪಡೆದವರಿಗೆ ಐಸಿಸ್ ನಂಟಿರುವ ಕುರಿತು
ಅಧಿಕಾರಿಗಳಿಂದ ತನಿಖೆ ಮುಂದುವರೆಯುತ್ತಿದೆ.