Saturday, December 9, 2023
Homeರಾಜಕೀಯನೂತನ ಸಚಿವ ಸಂಪುಟಕ್ಕೆ 29 ಮಂದಿ ನೇಮಕ: 2-15 ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ

ನೂತನ ಸಚಿವ ಸಂಪುಟಕ್ಕೆ 29 ಮಂದಿ ನೇಮಕ: 2-15 ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೂತನ ಸಂಪುಟಕ್ಕೆ ಸೇರ್ಪಡೆಯಾಗಲಿರುವ 29 ಮಂದಿ ಸಚಿವರ ವಿವರವನ್ನು ನೀಡಿದ್ದಾರೆ. ನೂತನ ಸಚಿವರು ಅಪರಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.

ಇವತ್ತು ಬೆಳಿಗ್ಗೆ ನೂತನ ಸಚಿವರ ಪಟ್ಟಿ ಅಂತಿಮವಾಗಿದ್ದು, ಇಂದು 29 ಮಂದಿ ಸಚಿವರು ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ, ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೈಕಮಾಂಡ್ ತೀರ್ಮಾನಿಸಿದೆ. ರಾಜ್ಯದ ಏಳಿಗೆ, ಪ್ರದೇಶವಾರು, ಜಾತೀಯವಾರು ಸಮಾನತೆಯನ್ನು ನೋಡಿಕೊಂಡು ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದರು.

ನೂತನ ಸಂಪುಟ ಸಚಿವರ ಪಟ್ಟಿ ಈ ಕೆಳಗಿನಂತವೆ

  1. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2. ಆರ್.ಅಶೋಕ್- ಪದ್ಮನಾಭ ನಗರ

3. ಬಿಸಿ ಪಾಟೀಲ್ – ಹಿರೇಕೇರೂರು

4. ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

5. ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

6. ಉಮೇಶ್ ಕತ್ತಿ- ಹುಕ್ಕೇರಿ

7. ಎಸ್.ಟಿ.ಸೋಮಶೇಖರ್- ಯಶವಂತಪುರ

8. ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

9. ಬೈರತಿ‌ ಬಸವರಾಜ – ಕೆ ಆರ್ ಪುರಂ

10. ಮುರುಗೇಶ್ ನಿರಾಣಿ – ಬಿಳಿಗಿ

11. ಶಿವರಾಂ ಹೆಬ್ಬಾರ್- ಯಲ್ಲಾಪುರ

12. ಶಶಿಕಲಾ ಜೊಲ್ಲೆ- ನಿಪ್ಪಾಣಿ

13. ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ

14. ಸುನೀಲ್ ಕುಮಾರ್ – ಕಾರ್ಕಳ

15. ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ

16. ಗೋವಿಂದ ಕಾರಜೋಳ-ಮುಧೋಳ

17. ಮುನಿರತ್ನ- ಆರ್ ಆರ್ ನಗರ

18. ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

19. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

20. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

21. ಹಾಲಪ್ಪ ಆಚಾರ್ – ಯಲ್ಬುರ್ಗ

22. ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

23. ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

24. ಪ್ರಭು ಚೌವ್ಹಾಣ್ – ಔರಾದ್

25. ವಿ ಸೋಮಣ್ಣ – ಗೋವಿಂದ್ ರಾಜನಗರ

26. ಎಸ್ ಅಂಗಾರ-ಸುಳ್ಯ

27. ಆನಂದ್ ಸಿಂಗ್ – ಹೊಸಪೇಟೆ

28. ಸಿ ಸಿ‌ ಪಾಟೀಲ್ – ನರಗುಂದ

29. ಬಿಸಿ ನಾಗೇಶ್ – ತಿಪಟೂರು

ಬೊಮ್ಮಾಯಿ ಸಂಪುಟದಿದ ಕೈಬಿಟ್ಟವರ ಹೆಸರುಗಳು ಈ ಕೆಳಗಿನಂತಿವೆ:

ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿ ಪಿ ಯೋಗೇಶ್ವರ್, ಶಂಕರ್, ಶ್ರೀಮಂತ್

ಅಧಿಕೃತವಾಗಿ ರಾಜಭವನದಿಂದಲೇ ನೂತನ ಸಚಿವರ ಪಟ್ಟಿ ಹೊರಬರಬೇಕು, ಹೀಗಾಗಿ ನಾನು ಈಗಲೇ ಓದಲು ಸಾಧ್ಯವಿಲ್ಲ ಎಂದರು.

ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ರವರಿಗೆ ಸಚಿವ ಸ್ಥಾನವನ್ನು ನೀಡಿಲ್ಲ. ಅಲ್ಲದೆ ಹಿಂದಿನ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಂತಹ ಸುರೇಶ್ ಕುಮಾರ್ ಅವರನ್ನು ಕೂಡ ಕೈಬಿಡಲಾಗಿದೆ. ಅರವಿಂದ ಲಿಂಬಾವಳಿಯವರನ್ನು ಬಿಟ್ಟು ಆರ್ ಅಶೋಕ್‌ರವರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ಹೊಸದಾಗಿ ವಿ ಮುನಿರತ್ನ ಅವರು ಸೇರ್ಪಡೆಯಾಗಿದ್ದಾರೆ ಎಂದು ಬೊಮ್ಮಾಯಿಯವರು ತಿಳಿಸಿದ್ದಾರೆ.

Most Popular

Recent Comments