Saturday, December 9, 2023
Homeಇತರೆಭಿಕ್ಷುಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಅಬ್ದುಲ್ ಅರೆಸ್ಟ್.

ಭಿಕ್ಷುಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಅಬ್ದುಲ್ ಅರೆಸ್ಟ್.

ಚಿಕ್ಕಬಳ್ಳಾಪುರ: ಅಪರಿಚಿತ ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಗರಸಭೆಯ ಮೀನು- ಮಾಂಸ ಮಾರಾಟ ಮಳಿಗೆಯ ಅಂಗಡಿಯ ಬಳಿ ಈ ಘಟನೆ ನಡೆದಿದ್ದು ಅತ್ಯಾಚಾರವೆಸಗಿದ ಆರೋಪಿ ಅಬ್ದುಲ್ಲಾ ಎಂದು ತಿಳಿದುಬಂದಿದೆ. ಪ್ರಕರಣದ ಆರೋಪಿ ನಗರದಲ್ಲಿ ಲವಂಗ, ಚಕ್ಕೆ, ಇತರ ದಿನಸಿ ಮಸಾಲೆ ಸಾಮಗ್ರಿಗಳನ್ನು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಿದ್ದ.

ದಿನಾಲೂ ಮಾಂಸ ಮಳಿಗೆಯ ಬಳಿ ಆ ಭಿಕ್ಷುಕಿಯ ಮಲಗಿರುತ್ತಿದ್ದಳು, ಎಂದಿನಂತೆ ಗುರುವಾರ ರಾತ್ರಿ ಆ ಸ್ಥಳದಲ್ಲಿಯೇ ಮಲಗಿದ್ದ 40 ವರ್ಷದ ಭಿಕ್ಷುಕಿಯ ಮೇಲೆ ಅಬ್ದುಲ್ಲಾ ಅತ್ಯಚಾರ ನಡೆಸಲು ಮುಂದಾಗಿದ್ದಾನೆ ತಕ್ಷಣ ಎಚ್ಚರಗೊಂಡ ಭಿಕ್ಷುಕಿ ಮಹಿಳೆ ವಿರೋಧ ವ್ಯಕ್ತ ಪಡಿಸಿದಾಗ ಆಕೆಯ ತಲೆ ಮತ್ತು ಮುಖದ ಮೇಲೆ ಜೋರಾಗಿ ಹೊಡೆದಿದ್ದಲ್ಲದೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಘಟನೆಯ ನಂತರ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಭಿಕ್ಷುಕಿ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ.

ಮಾರನೇ ದಿನ ಅಲ್ಲಿದ್ದ ಅಂಗಡಿಯವರು ಬಾಗಿಲು ತೆರೆಯಲು ಬಂದಾಗ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ ಕೂಡಲೇ ನಗರದ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿದ ನಗರದ ಎಸ್ ಪಿ ಮಿಥುನ್ ಕುಮಾರ್ ಕೃತ್ಯ ನಡೆದ ಜಾಗದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಆ ಕೃತ್ಯವನ್ನು ನಡೆಸಿದ ಆರೋಪಿ ತಳ್ಳುಗಾಡಿ ವ್ಯಾಪಾರಿ ಅಬ್ದುಲ್ಲಾ ಎಂದು ತಿಳಿದುಬಂದು ಆತನನ್ನು ಬಂಧಿಸಿದ್ದಾರೆ.

Most Popular

Recent Comments