ಯಾದಗಿರಿ: ಭಿಕ್ಷುಕಿಯೊಬ್ಬಳಿಗೆ ಕಂಠ ಪೂರ್ತಿ ಮದ್ಯವನ್ನು ಕುಡಿಸಿ ಆಕೆಯನ್ನು ಅತ್ಯಾಚಾರ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಹಳೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸಂಕನೂರು ಗ್ರಾಮದ ಹನುಮಂತ (40) ಎಂದು ತಿಳಿದುಬಂದಿದೆ.
ನವೆಂಬರ್ 23 ರಂದು ಹಳೆ ಬಸ್ ನಿಲ್ದಾಣದಲ್ಲಿ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿಯ ಸಮಯದಲ್ಲಿ ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯವನ್ನು ಕುಡಿಸಿ ನಂತರ ತಾನು ಸಹ ಕುಡಿದು ಆಕೆಯ ಮೇಲೆ ಎರಗಿದ್ದಾನೆ. ಭಿಕ್ಷುಕಿ ವಿರೋಧ ತೋರಿಸಿದಾಗ ಆಕೆಯ ಮೇಲೆ ಎರಗಿ ಹಲ್ಲೆಯನ್ನು ನಡೆಸಿ ಅತ್ಯಾಚಾರ ಎಸಗಿದ್ದಾನೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಕೆಲ ಸ್ಥಳೀಯರು ಇವರ ವರ್ತನೆಯನ್ನು ನೋಡಿ ವಿಚಾರಿಸಿದಾಗ ಭಿಕ್ಷುಕಿಯನ್ನು ತನ್ನ ಹೆಂಡತಿ ಎಂದು ಸುಳ್ಳು ಹೇಳಿ ನಾಟಕ ಮಾಡಿದ್ದಾನೆ ಆದರೂ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿದ್ದಾರೆ.
ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾಮುಕನನ್ನು ಬಂಧಿಸಲಾಗಿದೆ