Sunday, October 1, 2023
Homeಮಲೆನಾಡುಚಿಕ್ಕಮಗಳೂರುಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಇಂದು ಮಾಧ್ಯಾಹ್ನದ ಸುಮಾರಿಗೆ ನಡೆದಿದೆ.

ತಾಲೂಕಿನ ಬೇಗಾರು ಸಮೀಪದ ತಾರೊಳ್ಳಿಕೊಡಿಗೆ ಎಂಬಲ್ಲಿ ಈ ಘಟನೆ ನಡೆದಿದಿದ್ದು, ಶಿವಪ್ಪ ಎಂವವರು ತೋಟದಲ್ಲಿ ಕೆಲಸ ಮಾಡುತ್ತೀರುವ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ಶಿವಪ್ಪ ಅವರ ಕಣ್ಣಿಗೆ ಹಾಗೂ ಮುಖಕ್ಕೆ ತೀವ್ರ ಪೆಟ್ಟಾಗಿದ್ದು ಅವರನ್ನು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ ಕರೆದೊಯ್ಯಲಾಗಿದೆ. ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಈ ಹಿಂದೆಯೂ ತಾರೊಳ್ಳಿಕುಡಿಗೆಯಲ್ಲಿ ಕರಡಿ ದಾಳಿ ಆಗಿತ್ತು ಕಳೆದ ಒಂದು ವರ್ಷದ ಹಿಂದೆ ಇದೇ ತಾರೊಳ್ಳಿಕುಡಿಗೆಯಲ್ಲಿ ಕೆಲಸಕ್ಕೆಂದು ತೆರಳಿದ ಇಬ್ಬರ ಮೇಲೆ ಕರಡಿ ದಾಳಿ ಮಾಡಿತ್ತು. ಆ ಸಮಯದಲ್ಲೂ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಇಲ್ಲೇ ಮತ್ತೊಮ್ಮೆ ಕರಡಿ ದಾಳಿ ಆಗಿದೆ. ಈ ಪ್ರದೇಶದಲ್ಲಿ ಹೆಚ್ಚು ಕರಡಿಗಳಿವೆ. ದಿನನಿತ್ಯ ಕೃಷಿ ಚಟುವಟಿಕೆಗೆ ತೆರಳುವ ರೈತರು ಭಯದಿಂದ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ತರೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಗೆ ಬಂಡಾಯದ ಬಿಸಿ; ಟಿಕೆಟ್ ವಂಚಿತ ಇಬ್ಬರು ಪಕ್ಷೇತರ ಸ್ಪರ್ಧೆಗೆ ತೀರ್ಮಾನ, ಪಕ್ಷಕ್ಕೂ ರಾಜೀನಾಮೆ

ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ಪ್ರಾರಂಭವಾಗಿದ್ದು, ಎಲ್ಲಾ ಪಕ್ಷಗಳಲ್ಲೂ ಬಂಡಯಾದ ಬಿಸಿ ಮುಟ್ಟಿದೆ. ಇದೀಗ ತರೀಕೆರೆ ಕೈ ಅಭ್ಯರ್ಥಿ ವಿರುದ್ಧ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಈ ಬಾರಿ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿ ಜಿ ಹೆಚ್ ಶ್ರೀನಿವಾಸ್ ಗೆ ನೀಡಿತ್ತು. ಈ ಹಿನ್ನಲೆಯಲ್ಲಿ ಗೋಪಿಕೃಷ್ಣ ಸೇರಿದಂತೆ 10 ಮಂದಿ ಟಿಕೆಟ್ ಆಕಾಂಕ್ಷಿಗಳಿಗೆ ನಿರಾಸೆಯಾದ ಕಾರಣ ಬೆಂಬಲಿಗರ ಜೊತೆ ಸೇರಿ ಸಬೆ ನಡೆಸಿದ್ದಾರೆ. ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ 10 ಮಂದಿ ಅಕಾಂಕ್ಷಿಗಳೊಂದಿಗೆ ಎಸ್ ಎಮ್ ನಾಗರಾಜ್, ಟಿ ಹರಚ್ ಶಿವಶಂಕರಪ್ಪ ನೇತೃತ್ವದಲ್ಲಿ ಸಬೆ ನಡೆಸಿದರು. ಇನ್ನು ಈ ಬಾರಿ ಗೋಪಿಕೃಷ್ಣ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾದ್ಯತೆ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಲವಾರು ಜನ ಮುಖಂಡರು ಸಾವಿರಾರು ಜನ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದು ಗೋಪಿಕೃಷ್ಣಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ದೋರಾನಾಳು ಪರಮೇಶ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವ ಸಾದ್ಯತೆ;

ಲಿಂಗಾಯಿತ ನಾಯಕ ದೋರನಾಳು ಪರಮೇಶ್ ಕೂಡ ತರೀಕೆರೆ ಕಾಂಗ್ರೆಸ್ ಟಿಕೆಟ್ ನ ಪ್ರಭಲ ಆಕಾಂಕ್ಷಿಯಾಗಿದ್ದರು. ದೋರನಾಳು ಪರಮೇಶ್ ಗೆ ಟಿಕೆಟ್ ನೀಡುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಸುಟ್ಟು ಕೈ ಹೈಕಮಾಂಡ್ ಗೆ ಆಗ್ರಹಿಸಿದ್ದರು. ಆದರೆ ಅಂತಿಮವಾಗಿ ಕಾಂಗ್ರೆಸ್ ಶ್ರೀನಿವಾಸ್ ಗೆ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದ ಕೆರಳಿದ ದೋರನಾಳು ಪರಮೇಶ್ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಒಂದುವೇಳೆ ಇಬ್ಬರು ಬಂಡಾಯ ನಿಂತಲ್ಲಿ ಮಡಿವಾಳ ಸಮುದಾಯದ ಗೋಪಿಕೃಷ್ಣ, ಲಿಂಗಾಯಿತ ಸಮುದಾಯದ ಪರಮೇಶ್ ಬಂಡಾಯ ಕಾಂಗ್ರೆಸ್ ನ ಮತಗಳಿಗೆ ಪ್ರಭಾವ ಬೀರುವ ಸಾಧ್ಯತೆಗಳಿವೆ.

Most Popular

Recent Comments