Sunday, December 3, 2023
Homeಮಲೆನಾಡುಅಪ್ರಾಪ್ತರಿಗೆ ಬೈಕ್ ಕೊಡೋ ಮುಂಚೆ ಎಚ್ಚರ.. ಬೈಕ್ ಕೊಟ್ಟ ತಪ್ಪಿಗೆ ಮಾಲೀಕನಿಗೆ ಬಿತ್ತು ದೊಡ್ಡ ಮೊತ್ತದ...

ಅಪ್ರಾಪ್ತರಿಗೆ ಬೈಕ್ ಕೊಡೋ ಮುಂಚೆ ಎಚ್ಚರ.. ಬೈಕ್ ಕೊಟ್ಟ ತಪ್ಪಿಗೆ ಮಾಲೀಕನಿಗೆ ಬಿತ್ತು ದೊಡ್ಡ ಮೊತ್ತದ ದಂಡ

ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತನಿಗೆ ಬೈಕ್ ಕೊಟ್ಟ ತಪ್ಪಿಗೆ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

ಇದನ್ನೂ ಓದಿ; ಚಿಕ್ಕಮಗಳೂರು: ಕಾರ್ಮಿಕ ಮಹಿಳೆಯ ಹತ್ಯೆ ಮಾಡಿ ಸುಟ್ಟುಹಾಕಿದ ಹಂತಕರು, ಸ್ಥಳಕ್ಕೆ sp ಉಮಾ ಪ್ರಶಾಂತ್ ಭೇಟಿ

17 ವರ್ಷದ ಯುವಕ ಹೆಲ್ಮೆಟ್ ಧರಿಸದೆ, ಲೈಸೆನ್ಸ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ವೇಳೆ ತೀರ್ಥಹಳ್ಳಿ ಪೊಲೀಸರು ಸೋಮವಾರ ತಪಾಸಣೆ ಮಾಡುವಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಸಂಚಾರ ನಿಯಮ ಉಲ್ಲಂಘನೆ, ಅಪ್ರಾಪ್ತ ಯುವಕನಿಗೆ ಬೈಕ್ ನೀಡಿದ ತಪ್ಪಿಗೆ ಕಳ್ಳಿ ಗದ್ದೆ ಗ್ರಾಮದ ಮಾಲೀಕ ಪ್ರಮೋದ್ (25) ಎಂಬಾತನ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ; ಕಡೂರು; ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಟ್ರಯಲ್ ರನ್ ಯಶಸ್ವಿ

ತೀರ್ಥಹಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯ ಬೈಕ್ ಮಾಲೀಕ ಪ್ರಮೋದ್‌ಗೆ 20 ಸಾವಿರ ರೂ. ದಂಡ ವಿಧಿಸಿದೆ. ಇನ್ನಾದರೂ ಅಪ್ರಾಪ್ತರಿಗೆ ಬೈಕ್ ಕೊಡೋ ಮುಂಚೆ ಎಚ್ಚರ.


ಇತ್ತೀನ ಜನಪ್ರಿಯ ಸುದ್ದಿಗಳು

ರಾಜ್ಯದ 31 ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿ ನೇಮಕಗೊಳಿಸಿ ಆದೇಶ ಹೊರಡಿಸಿದ ಸರ್ಕಾರ; ಎಲ್ಲಿಗೆ ಯಾರು?

ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ಸರ್ಕಾರವು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ರಾಜೇಂದರ್ ಕುಮಾರ್ ಕಟಾರಿಯಾಯನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ; ಆಗುಂಬೆ: ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಸಹಸವಾರೆಯೂ ಸಾವು

ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು.

ಅದರಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ರಾಜೇಂದರ್ ಕುಮಾರ್ ಕಟಾರಿಯಾಯನ್ನು ನೇಮಿಸಲಾಗಿದೆ. ಕಟಾರಿಯಾ ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಎಂ.ಜಿ.ರಸ್ತೆ ಅಗಲೀಕರಣ, ಕಲ್ಯಾಣ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಶ್ರಮಿಸಿದ್ದರು.

ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ ಈ ಕೆಳಕಂಡಂತೆ ಇದೆ:
1. ಟಿ.ಕೆ. ಅನಿಲ್ ಕುಮಾರ್ – ಬೆಂಗಳೂರು ನಗರ
2. ಸಲ್ಮಾ ಕೆ. ಫಾಹಿಂ – ಬೆಂಗಳೂರು ಗ್ರಾಮಾಂತರ
3. ವಿ. ರಶ್ಮಿ ಮಹೇಶ್ – ರಾಮನಗರ
4. ಅಮಲಾನ್ ಆದಿತ್ಯ ಬಿಸ್ವಾಸ್ – ಚಿತ್ರದುರ್ಗ
5. ಡಾ. ಏಕ್ ರೂಪ್ ಕೌರ್- ಕೋಲಾರ
6. ಅಂಜುಂ ಪರ್ವೇಜ್ – ಬೆಳಗಾವಿ
7. ಡಾ. ಎನ್. ಮಂಜುಳ – ಚಿಕ್ಕಬಳ್ಳಾಪುರ
8. ಎಸ್. ಆರ್. ಉಮಾಶಂಕರ್ – ಶಿವಮೊಗ್ಗ
9. ಗುಂಜನ್ ಕೃಷ್ಣ- ದಾವಣಗೆರೆ
10. ಡಾ.ಎಸ್. ಸೆಲ್ವ ಕುಮಾರ್ – ಮೈಸೂರು
11. ಡಾ.ಪಿ.ಸಿ. ಜಾಫರ್- ಮಂಡ್ಯ
12. ಮಂಜುನಾಥ ಪ್ರಸಾದ್ .ಎನ್ – ಚಾಮರಾಜನಗರ
13. ಡಾ.ಎಂ.ಎನ್. ಅಜಯ್ ನಾಗಭೂಷಣ್ – ಹಾಸನ
14. ಡಾ.ಎನ್.ವಿ. ಪುಸಾದ್ – ಕೊಡಗು
15. ರಾಜೇಂದರ್ ಕುಮಾರ್ ಕಠಾರಿಯಾ – ಚಿಕ್ಕಮಗಳೂರು
16. ಡಾ. ಎಂ.ಟಿ. ರೇಜು – ಉಡುಪಿ
17. ಎಲ್.ಕೆ ಅತೀಕ್ – ದಕ್ಷಿಣ ಕನ್ನಡ
18. ಜಿ.ಸತ್ಯವತಿ – ತುಮಕೂರು
19. ವಿ.ಅನ್ಬುಕುಮಾರ್ – ಧಾರವಾಡ
20. ಸಿ. ಶಿಖಾ – ಗದಗ
21. ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ – ವಿಜಯಪುರ
22. ರಿತೇಶ್? ಕುಮಾರ್ ಸಿಂಗ್ – ಉತ್ತರ ಕನ್ನಡ
23. ಮೊಹಮ್ಮದ್ ಮೊಹಿಸಿನ್ – ಬಾಗಲಕೋಟೆ
24. ಪಂಕಜ್ ಕುಮಾರ್ ಪಾಂಡೆ – ಕಲಬುರಗಿ
25. ಮನೋಜ್ ಜೈನ್ – ಯಾದಗಿರಿ
26. ಡಾ. ಜೆ.ರವಿಶಂಕರ್ – ರಾಯಚೂರು
27. ನವೀನ್ ರಾಜ್ ಸಿಂಗ್ – ಕೊಪ್ಪಳ
28. ಡಾ. ಕೆ.ವಿ. ಲೋಕ್ ಚಂದ್ರ – ಬಳ್ಳಾರಿ
29. ಮುನೀಶ್ ಮೌದ್ಗಿಲ್ – ಬೀದರ್
30. ಡಾ.ವಿಶಾಲ್.ಆರ್ – ಹಾವೇರಿ
31. ಕೆ.ಪಿ.ಮೋಹನ್ ರಾಜ್ – ವಿಜಯನಗರ

Most Popular

Recent Comments