ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ 420 ಹುದ್ದೆಗಳು ಖಾಲಿ ಇದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಹೆಸರು:
ಪುರುಷ ಆರೋಗ್ಯ ಕಾರ್ಯಕರ್ತರು, ಫಿಜಿಷಿಯನ್, ರೇಡಿಯೋಲಾಜಿಸ್ಟ್,
ಒಟಿ ಟೆಕ್ನಿಷಿಯನ್, ಸ್ಟಾಫ್ ನರ್ಸ್, ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್,
ANM, ಲಸಿಕಾ ಮೇಲ್ವಿಚಾರಕರು, ಸೋಷಿಯಲಿಸ್ಟ್, ಮೆಡಿಕಲ್ ಆಫೀಸರ್,
ಆಫ್‌ಥಲ್ಮಿಕ್ ಅಸಿಸ್ಟಂಟ್, ಆಫ್‌ಥಲ್ಮಿಕ್ ಸರ್ಜನ್, ಕಮ್ಯೂನಿಟಿ ನರ್ಸ್,
ಸೋಶಿಯಲ್ ವರ್ಕರ್
ಒಟ್ಟು ಹುದ್ದೆಗಳು: 420
ಉದ್ಯೋಗ ಸ್ಥಳ ಬೆಂಗಳೂರು
ವಿದ್ಯಾರ್ಹತೆ:
ಪುರುಷ ಆರೋಗ್ಯ ಕಾರ್ಯಕರ್ತರು ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಜೊತೆಗೆ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಅರ್ಹತೆಯನ್ನು ಹೊಂದಿರಬೇಕು.
ಫಿಜಿಷಿಯನ್ ಹುದ್ದೆಗೆ ಡಿ.ಎನ್.ಬಿ/ ಎಂ.ಡಿ, ಅಥವಾ ಸಮಾನಾಂತರ ಪದವಿಯನ್ನು ಮೆಡಿಕಲ್ ಕೌನ್ಸಿಲ್ ನಿಂದ ಮಾನ್ಯತೆ ಹೊಂದಿದ ಸಂಸ್ಥೆಯಿoದ ಹೊಂದಿರಬೇಕು.
ರೇಡಿಯೋಲಾಜಿಸ್ಟ್ ಹುದ್ದೆಗೆ ಎಂ.ಡಿ (ರೇಡಿಯೋಲಾಜಿ) ಅರ್ಹತೆ ಹೊಂದಿರಬೇಕು.
ಓ.ಟಿ. ಟೆಕ್ನಿಷಿಯನ್ ಹುದ್ದೆಗೆ ಮಾನ್ಯತೆ ಪಡೆದ ಸಂಸ್ಥೆಯಿoದ ಡಿಪ್ಲೋಮ ಇನ್ ಓಟಿ ಟೆಕ್ನಿಷಿಯನ್ ಅರ್ಹತೆ ಹೊಂದಿರಬೇಕು.
ಸ್ಟಾಫ್ ನರ್ಸ್ ಹುದ್ದೆಗೆ ಬಿ.ಎಸ್ಸಿ/ಜಿ.ಎನ್.ಎಂ/ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆ ಹೊಂದಿರಬೇಕು.
ಫಾರ್ಮಾಸಿಸ್ಟ್ ಹುದ್ದೆಗೆ ಬಿ.ಫಾರ್ಮಾ/ಡಿ.ಫಾರ್ಮಾ ಅರ್ಹತೆಯನ್ನು ಹೊಂದಿರಬೇಕು.
ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಾಲಜಿ ಅರ್ಹತೆಯನ್ನು ಹೊಂದಿರಬೇಕು.
ANM ಹುದ್ದೆಗೆ ANM ವಿದ್ಯಾರ್ಹತೆಯನ್ನು ಹೊಂದಿರಬೇಕು.
ಲಸಿಕಾ ಕಾರ್ಯಕರ್ತರು ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಮ್.ಎಸ್.ಡಬ್ಲ್ಯೂ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು.
ಸ್ಪೆಷಲಿಸ್ಟ್ ಹುದ್ದೆಗೆ ಎಂ.ಡಿ ಪಿಡಿಯಾಟ್ರಿಷನ್/ಡಿ.ಎನ್.ಬಿ/ಡಿ.ಸಿ.ಹೆಚ್ ಅರ್ಹತೆಯನ್ನು ಹೊಂದಿರಬೇಕು.
ಮೆಡಿಕಲ್ ಆಫೀಸರ್ ಹುದ್ದೆಗೆ ಎಂ.ಬಿ.ಬಿ.ಎಸ್ ಅರ್ಹತೆಯನ್ನು ಹೊಂದಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ
ಸಾಮಾನ್ಯ ವರ್ಗಕ್ಕೆ ಗರಿಷ್ಠ 35 ವರ್ಷ
ಪರಿಶಿಷ್ಟಜಾತಿ, ಪರಿಶಿಷ್ಠ ಪಂಗಡ. ಪ್ರವರ್ಗ 1 ಗರಿಷ್ಠ 40 ವರ್ಷ
2ಎ, 2ಬಿ, 3ಎ, 3ಬಿ ಗರಿಷ್ಠ 38 ವರ್ಷ
ವೇತನ: ಮಾಸಿಕ 11.500 ರೂ ನಿಂದ 1, 10,000
ಆಯ್ಕೆ ವಿಧಾನ
ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂದರ್ಶನ ಸ್ಥಳ
ನೌಕರರ ಭವನ, ಬಿಬಿಎಂಪಿ ಪ್ರಧಾನ ಕಚೇರಿ, ಬೆಂಗಳೂರು