Thursday, June 8, 2023
Homeರಾಜ್ಯನೆರೆ ರಾಜ್ಯಗಳಿಂದ ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ : ಬಿಬಿಎಂಪಿ

ನೆರೆ ರಾಜ್ಯಗಳಿಂದ ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ : ಬಿಬಿಎಂಪಿ

ಬೆಂಗಳೂರು: ಎರಡೂ ಡೋಸ್ ಲಸಿಕೆ ಪಡೆದ ಹೊರತಾಗಿಯೂ, ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಎಂದು ಬಿಬಿಎಂಪಿ ಹೇಳಿದೆ.

ನೆರೆ ರಾಜ್ಯಗಳಲ್ಲಿ ಅತೀಯಾಗಿ ಕೊರೋನಾ ಹರಡುತ್ತಿರುವುದರಿಂದ ಹಾಗೂ ಅಲ್ಲಿಂದ ಕರ್ನಾಟಕಕ್ಕೆ ಆಗಮಿಸುವಂತಹ ಜನರಿಗೆ ಎರಡೂ ಡೋಸ್ ಲಸಿಕೆಯನ್ನು ಪಡೆದ ನಂತರವೂ, ಕೇರಳ ಮತ್ತು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರಿಗೆ 72 ಗಂಟೆಗಳ ಒಳಗಿನ ಕೋವಿಡ್ ಆರ್ ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತೋರಿಸಬೇಕು ಎಂದು ಬಿಬಿಎಂಪಿ ಆಯುಕ್ತ ಗೌರವ್
ಗುಪ್ತಾರವರು ತಿಳಿಸಿದ್ದಾರೆ.

ಹಾಗೂ ಈ ವಿಷಯದ ಕುರಿತಂತೆ ಗುಪ್ತಾ ರವರು ಸರಣಿ ಟ್ವೀಟ್ ಮಾಡಿದ್ದಾರೆ “ನೀವು ಕೇರಳ-ಮಹಾರಾಷ್ಟ್ರದಿಂದ ಪ್ರಯಾಣಿಸುತ್ತಿದ್ದರೆ ನಿಮ್ಮಲ್ಲಿ 72 ಗಂಟೆಗಳ ಒಳಗೆ ನಡೆಸಿದ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ವರದಿ ಇಲ್ಲದಿದ್ದರೆ, ಆರ್‌ಟಿ-ಪಿಸಿಆರ್ ಸ್ವ್ಯಾಬ್ ಸಂಗ್ರಹ ಮತ್ತು ಫಲಿತಾಂಶ ಬರುವವರೆಗೆ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ”ಎಂದು ತಿಳಿಸಿದ್ದಾರೆ.

Most Popular

Recent Comments