Wednesday, November 29, 2023
Homeಇತರೆಕುಮಾರಸ್ವಾಮಿಯ ರಹಸ್ಯ ನನ್ನ ಬಳಿಯಿದೆ ಎಂದಿದ್ದ ಯತ್ನಾಳ್: ಹೆಚ್ ಡಿ ಕೆ ತಿರುಗೇಟು

ಕುಮಾರಸ್ವಾಮಿಯ ರಹಸ್ಯ ನನ್ನ ಬಳಿಯಿದೆ ಎಂದಿದ್ದ ಯತ್ನಾಳ್: ಹೆಚ್ ಡಿ ಕೆ ತಿರುಗೇಟು

ವಿಜಯಪುರ: ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ ಎಂದು ಹೇಳಿಕೆಯನ್ನು ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಹಿರಂಗ ಸವಾಲು ಹಾಕಿರುವ ಹೆಚ್.ಡಿ.ಕುಮಾರಸ್ವಾಮಿ ಅದೇನು ರಹಸ್ಯ ಎಂಬುದನ್ನು ಹೊರತರಲಿ ಎಂದು ಗುಡುಗಿದ್ದಾರೆ.

ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಯತ್ನಾಳ್, ಕುಮಾರಸ್ವಾಮಿ ಪುಣ್ಯಾತ್ಮ ಏನ್ ಮಾತಾಡ್ತಾರೋ ಯಾರ್ಯಾರನ್ನು ಬೈತಾರೋ ಗೊತ್ತಿಲ್ಲ. ಅವರ ಸಂಪೂರ್ಣ ರಹಸ್ಯ ನನ್ನ ಬಳಿ ಇದೆ. ಅದನ್ನು ನಾನು ಬಾಯ್ಬಿಟ್ಟರೆ ಅದು ಬೇರೆಯದೇ ಆಗುತ್ತೆ ಎಂದು ಹೇಳಿದ್ದರು.

ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಇವರಿಗೆ ನನ್ನ ಬಗ್ಗೆ ಏನೇನ್ ಗೊತ್ತಿದೆ ಅದೆಲ್ಲವನ್ನು ಬಹಿರಂಗ ಮಾಡಲಿ. ಅವರು ಸ್ವಲ್ಪ ವರ್ಷ ನಮ್ಮಜೊತೆಗಿದ್ದರು. 2-3 ವರ್ಷ ನಮ್ಮ ಪಕ್ಷ ಜೆಡಿಎಸ್ ನಲ್ಲಿದ್ದರು. ಅದಕ್ಕಾಗಿ ನನ್ನ ಬಗ್ಗೆ ಇವರಿಗೆ ಗೊತ್ತಿದ್ದರೆ ಆ ಚರಿತ್ರೆಯನ್ನು ಅವರು ಹೊರತರಲಿ ಎಂದು ಸವಾಲು ಹಾಕಿದರು.

Most Popular

Recent Comments