Saturday, June 10, 2023
Homeಇತರೆಬಂಟ್ವಾಳ : ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಮತ್ತು ಬರುವ ಚಾಕಲೇಟ್ ನೀಡಿ ಕೃತ್ಯವೆಸಗಿದ...

ಬಂಟ್ವಾಳ : ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಮತ್ತು ಬರುವ ಚಾಕಲೇಟ್ ನೀಡಿ ಕೃತ್ಯವೆಸಗಿದ ಪಾಪಿಗಳು.

ಬಂಟ್ವಾಳ : ನಗರದ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಅಪ್ರಾಪ್ತೆ ಬಾಲಕಿ ಮೇಲೆ ಐವರು ಕಾಮುಕರಿಂದ ಗ್ಯಾಂಗ್ ರೇಪ್ ಕೃತ್ಯ ಶುಕ್ರವಾರದಂದು ನಡೆದಿದೆ.

ಬಂಟ್ವಾಳದ ಎಸ್ ವಿ ಎಸ್ ಶಾಲೆಯ ಆಟೋ ಸ್ಟಾಂಡ್ ನಲ್ಲಿ ನಿಂತಿದ್ದ ಬಾಲಕಿಗೆ ಮತ್ತು ಬರಿಸುವಂತಹ ಚಾಕಲೇಟ್ ನನ್ನು ನೀಡಿ ಅಪಹರಿಸಿ ನಂತರ ಆಕೆಯನ್ನು ಬಂಟ್ವಾಳದ ಅಮ್ಟಾಡಿಯ ರೂಂ ಒಂದಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರವನ್ನು ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಬಾಲಕಿ ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಪೋಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Most Popular

Recent Comments