Saturday, December 9, 2023
Homeಇತರೆಬಾಂಗ್ಲಾದೇಶದಲ್ಲಿ ಹೆಚ್ಚಿದ ಹಿಂಸಾಚಾರ : 20 ಹಿಂದೂಗಳ ಮನೆಗೆ ಬೆಂಕಿ ಹಚ್ಚಿ ವಿಕೃತ ಮೆರೆದ ದುಷ್ಕರ್ಮಿಗಳು.

ಬಾಂಗ್ಲಾದೇಶದಲ್ಲಿ ಹೆಚ್ಚಿದ ಹಿಂಸಾಚಾರ : 20 ಹಿಂದೂಗಳ ಮನೆಗೆ ಬೆಂಕಿ ಹಚ್ಚಿ ವಿಕೃತ ಮೆರೆದ ದುಷ್ಕರ್ಮಿಗಳು.

ದುರ್ಗಾಪೂಜೆಯ ಬಳಿಕ ದೇವಾಲಯ ಧ್ವಂಸಗೈದ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದು, ಢಾಕಾದಿಂದ 255 ಕಿ.ಮೀ ದೂದಲ್ಲಿರುವ ಊರಿನಲ್ಲಿ ಹಿಂದೂಗಳ ಮನೆಗೆ ಬೆಂಕಿಯನ್ನು ಹಚ್ಚಲಾಗಿದೆ.

ಹಿಂದೂಗಳ ಮೇಲೆ ವ್ಯಾಪಕ ದಾಳಿಯ ಬಳಿಕ ಹಿಂದೂ ಯುವಕನೊಬ್ಬ ಸಾಮಾಜಿಕ ತಾಣದಲ್ಲಿ ಮುಸ್ಲಿಮರ ವಿಚಾರಗಳಿಗೆ ಧಕ್ಕೆ ತರುವಂತೆ ಬರೆದಿದ್ದಾನೆ ಎಂಬ ಸುದ್ದಿಯಲ್ಲಿ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾದೇಶದ ಹಿಂದೂ, ಬೌದ್ಧ ಮತ್ತು ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಚಾಂದ್‌ಪುರ್ ಮತ್ತು ನೋಖಾಲಿಯಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ಕು ಹಿಂದೂ ಭಕ್ತರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ.

ಶನಿವಾರವಷ್ಟೇ ಕಾಳಿ ದೇವಾಲಯ ಹಾಗೂ ಇಸ್ಕಾನ್‌ ದೇಗುಲದ ಮೇಲೆ ದಾಳಿಯನ್ನು ನಡೆಸಿದ್ದ ದುಷ್ಕರ್ಮಿಗಳ ಗುಂಪು, ಮೂವರನ್ನು ಹತ್ಯೆಗೈದಿತ್ತು. ಹಿಂದೂಗಳ ಮೇಲಿನ ದಾಳಿಗೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು , ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹಿಂದೂಗಳ ರಕ್ಷಣೆಗೆ ಬದ್ಧರಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಾಗಿ ತಿಳಿಸಿದ್ದಾರೆ.

Most Popular

Recent Comments