Thursday, April 25, 2024
Homeಇತರೆಬಾಂಗ್ಲಾದೇಶ : ದುರ್ಗಾ ಪೂಜೆಯ ಸಮಯದಲ್ಲಿ ಕೋಮುಗಲಭೆ, ಮೂರು ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

ಬಾಂಗ್ಲಾದೇಶ : ದುರ್ಗಾ ಪೂಜೆಯ ಸಮಯದಲ್ಲಿ ಕೋಮುಗಲಭೆ, ಮೂರು ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

ಬಾಂಗ್ಲಾದೇಶ : ಚಂದ್ ಪುರದ ಹಾಜಿಗಂಜ್ ಅಪ್ಜಿಲ್ಲಾದಲ್ಲಿ ದುರ್ಗಾ ಪೂಜಾ ಆಚರಣೆಯ ಸಂದರ್ಭ ನಡೆದ ಕೋಮು ಗಲಭೆಯಲ್ಲಿ ಪತ್ರಕರ್ತರು, ಪೊಲೀಸರು ಮತ್ತು ಸಾಮಾನ್ಯ ಜನರು ಸೇರಿದಂತೆ ಮೂವರು ಮೃತಪಟ್ಟು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬಾಂಗ್ಲಾದೇಶದ ಹಿಂದೂ ಸಮುದಾಯದ ಶ್ರೇಷ್ಠ ಧಾರ್ಮಿಕ ಹಬ್ಬವಾದ ದುರ್ಗಾ ಪೂಜೆಯನ್ನು ಹಿಂದೂ ಭಕ್ತರು ಬುಧವಾರ ಆಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಕುಮಿಲ್ಲಾದಲ್ಲಿ, ಪೂಜಾ ಮಂಟಪದಲ್ಲಿ ‘ಪವಿತ್ರ ಕುರಾನ್ ಅನ್ನು ಅಪಮಾನಗೊಳಿಸಲಾಗಿದೆ’ ಎಂಬ ವರದಿಗಳ ಬಗ್ಗೆ ನನುವಾ ದಿಶಿರ್ಪರ್ ಪ್ರದೇಶದಲ್ಲಿ ಧಾರ್ಮಿಕ ತೀವ್ರಗಾಮಿಗಳ ಹಾಗೂ ಹಿಂದೂಗಳ ನಡುವೆ ಘರ್ಷಣೆ ಉಂಟಾದ ಕಾರಣ ಕನಿಷ್ಠ 60 ಜನರು ಗಾಯಗೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ವೈರಲ್ ಮಾಡಿದ ನಂತರ ಧಾರ್ಮಿಕ ತೀವ್ರಗಾಮಿಗಳು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮಂಟಪ ಪ್ರದೇಶಕ್ಕೆ ಧಾವಿಸಲು ಪ್ರಾರಂಭಿಸಿದರು, ಹಿಂದೂ ಭಕ್ತರು ದುರ್ಗಾ ಪೂಜೆಯನ್ನು ಆಚರಿಸುತ್ತಿದ್ದ ವೇಳೆ ಮಂಟಪಕ್ಕೆ ಕಾನೂನು ಜಾರಿ ಸಂಸ್ಥೆಗಳ ಸದಸ್ಯರು ಆಗಮಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಶಮನಗೊಳಿಸಲು, ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸ್ಥಳೀಯ ಹಿಂದೂ ಸಮುದಾಯ ಮತ್ತು ಇತರರೊಂದಿಗೆ ಸಭೆಯನ್ನು ನಡೆಸಿ ಮಾಹಿತಿ ಕಲೆಹಾಕಿದರು ಎಂದು ಸ್ಥಳೀಯ ಸುದ್ದಿ ಮಾಧ್ಯಮ ವರದಿಯನ್ನು ಮಾಡಿದೆ.

ಮುಸ್ಲಿಂ ಧಾರ್ಮಿಕ ಸಂಘಟನೆಗಳ ಬ್ಯಾನರ್ ಗಳ ಅಡಿಯಲ್ಲಿ ಹಲವಾರು ಗುಂಪುಗಳು ನನುವಾ ದಿಗಿರ್ಪರ್ ನಲ್ಲಿ ಸಭೆಯಲ್ಲಿ ಭಾಗಿಯಾಗಿದ್ದವು. ಸಭೆ ನಡೆಯುತ್ತಿರುವ ವೇಳೆ , ಬೆಳಿಗ್ಗೆ 10.30ರ ಸುಮಾರಿಗೆ ಆ ಗುಂಪು ಮಂಟಪದ ಮೇಲೆ ದಾಳಿಯನ್ನು ನಡೆಸಿತು ಎಂದು ಸ್ಥಳೀಯರು ಮತ್ತು ಪೊಲೀಸರು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.

ಬನ್ಷ್ಖಾಲಿಯ ಚಂಬಲ್ ಪ್ರದೇಶ, ಕಾಳಿ ಮಂದಿರ ಪುರಸಭೆ ಮತ್ತು ಕರ್ನಾಫುಲಿ ಉಪಜಿಲಾದಲ್ಲಿ ನಡೆದ ಮೂರು ದಾಳಿ ಘಟನೆಗಳನ್ನು ಪೊಲೀಸ್ ಮತ್ತು ಆಡಳಿತ ಮೂಲಗಳು ದೃಢಪಡಿಸಿದೆ ಕುರಿಗ್ರಾಮದ ಉಲಿಪುರ್ ಯುಪಿಎಜಿಲಾದಲ್ಲಿ ಹಲವಾರು ದೇವಾಲಯಗಳನ್ನು ಧ್ವಂಸಗೊಳಿಸಿ ಬೆಂಕಿಯನ್ನು ಹಚ್ಚಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಹಿಂಸಾಚಾರದ ನಂತರ ಅಧಿಕಾರಿಗಳು ಹಾಜಿಗಂಜ್ ನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಪುನಃಸ್ಥಾಪಿಸಲು ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ (ಬಿಜಿಬಿ) ಎಂಟು ತುಕಡಿಗಳನ್ನು ನಿಯೋಜಿಸಲಾಗಿದೆ.

Most Popular

Recent Comments