Sunday, September 24, 2023
Homeಇತರೆತುಮಕೂರು : ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ, ಕಾರನ್ನು ಅಡ್ಡಗಟ್ಟಿ ರಾಡ್ ನಿಂದ ಥಳಿಸಿದ ದುಷ್ಕರ್ಮಿಗಳು.

ತುಮಕೂರು : ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ, ಕಾರನ್ನು ಅಡ್ಡಗಟ್ಟಿ ರಾಡ್ ನಿಂದ ಥಳಿಸಿದ ದುಷ್ಕರ್ಮಿಗಳು.

ತುಮಕೂರು: ಭಜರಂಗದಳದ ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರ ಗುಂಪೊಂದು ದಾಳಿ ನಡೆಸಿ ಹಲ್ಲೆ ನಡೆಸಿದ ಘಟನೆ ನಗರದ ಗುಬ್ಬಿ ಗೇಟ್ ಬಳಿ ನಡೆದಿದೆ.

ಭಜರಂಗದಳದ ತುಮಕೂರು ಜಿಲ್ಲಾ ಸಂಚಾಲಕ ಮಂಜುಭಾರ್ಗವ ಮತ್ತೊಬ್ಬ ಕಾರ್ಯಕರ್ತ ಕಿರಣ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದ್ದು ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಂಜುಭಾರ್ಗವ್ ಮತ್ತು ಕಿರಣ್ ಇಬ್ಬರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಅವರನ್ನು ಅಡ್ಡಗಟ್ಟಿ ತಡೆದ ಧುಷ್ಕರ್ಮಿಗಳು ಅವರ ಮೇಲೆ ರಾಡ್ ನಿಂದ ಹಲ್ಲೆಯನ್ನು ನಡೆಸಿದ್ದಾರೆ. ಹಲ್ಲೆ ಮಾಡಿದ ದುಷ್ಕರ್ಮಿಗಳು ಅನ್ಯಕೋಮಿನವರಾಗಿದ್ದು ಕೋಮುಗಲಭೆ ನಡೆಯಬೇಕೆಂಬ ಉದ್ದೇಶದಿಂದ ಹಲ್ಲೆಯನ್ನು ನಡೆಸಿರುವುದಾಗಿ ತಿಳಿದುಬಂದಿದೆ.

ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Most Popular

Recent Comments