Wednesday, November 29, 2023
Homeಸುದ್ದಿಗಳುಕ್ರೀಡೆಟೋಕಿಯೋ ಒಲಂಪಿಕ್ಸ್ : ಸೆಮಿಫೈನಲ್ ಪ್ರವೇಶಿಸಿದ ಕುಸ್ತಿಪಟು ಬಜರಂಗ್ ಪುನಿಯಾ

ಟೋಕಿಯೋ ಒಲಂಪಿಕ್ಸ್ : ಸೆಮಿಫೈನಲ್ ಪ್ರವೇಶಿಸಿದ ಕುಸ್ತಿಪಟು ಬಜರಂಗ್ ಪುನಿಯಾ

ಟೊಕಿಯೊ: ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಟೊಕಿಯೊ ಒಲಂಪಿಕ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ, ಈ ಮೂಲಕ ಪದಕದ ಭರವಸೆಯನ್ನು ಮೂಡಿಸಿದ್ದಾರೆ.

ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಬಜರಂಗ್ ಪೂನಿಯಾ ಇರಾನ್‌ನ ಮೊರ್ತೆಜಾ ಗಿಯಾಸಿ ವಿರುದ್ದ ಗೆಲುವನ್ನು ದಾಖಲಿಸಿದ್ದಾರೆ.

ಇಂದು ನಡೆದ ಪಂದ್ಯದಲ್ಲಿ ಮೊದಲ ಸುತ್ತಿನಿಂದಲೂ ಎದುರಾಳಿಯ ಮೇಲೆ ಆಕ್ರಮಣಕಾರಿ ಆಟವನ್ನಾಡಿದ ಬಜರಂಗ್ ಪುನಿಯಾ, ಮೊದಲ ರೌಂಡ್‌ನಲ್ಲಿ 1-0 ಮುನ್ನಡೆ ಸಾಧಿಸಿದರು. ನಂತರ ಎರಡನೇ ರೌಂಡ್‌ನಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ ಬಜರಂಗ್, ಅಂತಿಮವಾಗಿ 2-1 ಅಂತರದಿoದ ಗೆಲುವನ್ನು ಸಾಧಿಸಿ ಸೆಮಿಫೈನಲ್ ಗೆ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಅಜೆರ್ಬೈಜಾನ್‌ನ ಹಾಜಿ ಅಲಿಯೇವ್ ವಿರುದ್ಧ ಸೆಣೆಸಾಡಲಿದ್ದಾರೆ.

Most Popular

Recent Comments