Friday, June 9, 2023
Homeಸುದ್ದಿಗಳುಕ್ರೀಡೆಟೋಕಿಯೊ ಪ್ಯಾರಲಿಂಪಿಕ್ಸ್: ಮಹಿಳೆಯರ 10 ಮೀ.ಶೂಟಿಂಗ್ ನಲ್ಲಿ ಚಿನ್ನದ ಪದಕವನ್ನು ಗಳಿಸಿದ ಅವನಿ ಲೇಖರ,

ಟೋಕಿಯೊ ಪ್ಯಾರಲಿಂಪಿಕ್ಸ್: ಮಹಿಳೆಯರ 10 ಮೀ.ಶೂಟಿಂಗ್ ನಲ್ಲಿ ಚಿನ್ನದ ಪದಕವನ್ನು ಗಳಿಸಿದ ಅವನಿ ಲೇಖರ,

ಟೋಕಿಯೊ: ಈ ಬಾರಿಯ ಪ್ಯಾರಲಿಂಪಿಕ್ಸ್ ನಲ್ಲಿ ಭಾರತವು ಇತಿಹಾಸವನ್ನು ಸೃಷ್ಟಿಸಿದೆ. ಇಂದು ಬೆಳಗ್ಗೆ ಮುಗಿದ ಮಹಿಳೆಯರ 10ಮೀಟರ್ ಏರ್ ರೈಫಲ್ ಎಸ್ ಎಚ್ 1 ಪಂದ್ಯದಲ್ಲಿ 19 ವರ್ಷದ ಅವನಿ ಲೇಖರ ರವರು ಚಿನ್ನದ ಪದಕವನ್ನು ಗಳಿಸಿದ್ದಾರೆ. ಈ ಮೂಲಕ ಪ್ಯಾರಲಿಂಪಿಕ್ಸ್ ನಲ್ಲಿ ಚಿನ್ನವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ.

ಪ್ಯಾರಲಿಂಪಿಕ್ಸ್ ನಲ್ಲಿ ಇದುವರೆಗೆ ಚಿನ್ನ ಗೆದ್ದ ಭಾರತೀಯ ಆಟಗಾರರಲ್ಲಿ ಅವನಿ ಲೆಖರಿ ನಾಲ್ಕನೆಯವರಾಗಿದ್ದಾರೆ.19 ವರ್ಷದ ಅವನಿ ಒಟ್ಟು 249 .6 ಅಂಕಗಳನ್ನು ಗಳಿಸುವ ಮೂಲಕ ಪ್ಯಾರಲಿಂಪಿಕ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ಈ ಹಿಂದಿನ ಪ್ಯಾರಲಿಂಪಿಕ್ ನಲ್ಲಿ ಭಾರತದ ಕ್ರೀಡಾಪಟುಗಳಾದ ಈಜುಗಾರ ಮುರಳಿಕಾಂತ್ ಪೆಟ್ಕರ್(1972ರಲ್ಲಿ), ಜಾವೆಲಿನ್ ಥ್ರೋವರ್ ದೇವೇಂದ್ರ ಜಾಜರಿಯಾ(2004 ಮತ್ತು 2016ರಲ್ಲಿ) ಮತ್ತು ಹೈಜಂಪ್ ನಲ್ಲಿ 2016 ರಲ್ಲಿ ತಂಗವೇಲು ಮರಿಯಪ್ಪನ್ ಚಿನ್ನದ ಪದಕ ಗಳಿಸಿದ್ದರು.

ಎಸ್ ಎಚ್1 ರೈಫಲ್ ವಿಭಾಗದಲ್ಲಿ ಅವನಿ ಲೇಖರ ಗನ್ ನ್ನು ಕೈಗಳಿಂದ ಬಂದೂಕನ್ನು ಹಿಡಿದುಕೊಳ್ಳಲು ಸಮರ್ಥರಾಗಿದ್ದರು. ಪ್ಯಾರಲಿಂಪಿಕ್ ನಲ್ಲಿ ಕ್ರೀಡಾಪಟುಗಳು ತಮ್ಮ ಕಾಲುಗಳಲ್ಲಿ ದುರ್ಬಲತೆ ಹೊಂದಿರುವವರು ಕುಳಿತುಕೊಂಡು ಸಾಧ್ಯವಾದವರು ನಿಂತುಕೊoಡು ಸ್ಪರ್ಧಿಸುತ್ತಾರೆ.

Most Popular

Recent Comments