Attempted Theft: ಶೃಂಗೇರಿ/ಕೊಪ್ಪ (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ಮುಖಂಡ ಹಾಗೂ ಮಿಷನ್ ಮೋದಿ ಡೆಮೋಕ್ರಾಟಿಕ್ ಡೆವಲಪ್ಮೆಂಟ್ ಟ್ರಸ್ಟಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಸಿ ರಾಜೇಂದ್ರ ಅವರ ಕೊಪ್ಪದ ಫಾರ್ಮ್ ಹೌಸ್ ಅಲ್ಲಿ ಕಳ್ಳತನಕ್ಕೆ ಯತ್ನಿಸಿ ಕಿಟಕಿ ಗಾಜುಗಳನ್ನು ಪುಡಿ ಮಾಡಿದ ಸಂಬಂಧ ದೂರು ದಾಖಲಾಗಿದೆ.
ಇದನ್ನೂ ಓದಿ; ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕನ್ನಡದ ನ್ಯೂಸ್ ಚಾನೆಲ್ ನಲ್ಲಿ ಕಾಣಿಸಿಕೊಂಡ ai ಆ್ಯಂಕರ್
ದಿನಾಂಕ 8-6-2023ರ ರಾತ್ರಿ ಫಾರ್ಮ್ ಹೌಸಿನ ಕಿಟಕಿ ಗಾಜುಗಳನ್ನು ಒಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹರಿಹರಪುರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ನೆರೆಯವರಾದ ಜಗದೀಶ್ ಮತ್ತು ಅವನ ಸಹಚರರ ವಿರುದ್ಧ ಪೋಲಿಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ; ಚಿಕ್ಕಮಗಳೂರಿನಲ್ಲಿ ಹ್ಯುಂಡೈ ಎಕ್ಸ್ಟರ್ ಕಾರು ಲಾಂಚ್
ಅಷ್ಟೇ ಅಲ್ಲದೆ ಮರುದಿನ ತೋಟದ ಮ್ಯಾನೇಜರ್ ಸವಿನ್ ಮತ್ತು ಮೂರು ಜನ ದಲಿತ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಮಾರಕಾಸ್ತ್ರದಿಂದ ದಲಿತ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆಗೆ ಜಗದೀಶ್ ಮತ್ತವರ ಟೀಮ್ ಯತ್ನಿಸಿದೆ ಎಂದು ಮತ್ತೊಂದು ದೂರು ನೀಡಲಾಗಿದೆ.
ಇವರ ತಂಡ ಈ ಹಿಂದೆ ಫಾರ್ಮ್ ಹೌಸ್ ನಲ್ಲಿ ಮೋಟಾರ್ ಕಳ್ಳತನ ಮಾಡಿದ್ದು ಈ ಕೃತ್ಯ ಸಹ ಅವರೇ ಮಾಡಿದ್ದಾರೆ ಎಂದು ದೂರುದಾರ ಟಿ ಸಿ ರಾಜೇಂದ್ರ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-13.07.2023
- ಅನ್ನ ಭಾಗ್ಯ ಯೋಜನೆ:ಅಕ್ಕಿ ಜೊತೆ ನಿಮಗೂ ಹಣ ಬಂತಾ?.ಇನ್ನೂ ಬಂದಿಲ್ವಾ, ಮ್ಮ ಮೊಬೈಲ್ ನಲ್ಲೆ ಚೆಕ್ ಮಾಡಿ?
- ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 13-07-2023
ಅನ್ನ ಭಾಗ್ಯ ಯೋಜನೆ: ಅಕ್ಕಿ ಜೊತೆ ನಿಮಗೂ ಹಣ ಬಂತಾ?.ಇನ್ನೂ ಬಂದಿಲ್ವಾ, ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡಿ?
anna bhagya scheme: ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ನೇರ ನಗದು ವರ್ಗಾಯಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದ್ದರು. ಹಣವು ಖಾತೆಗೆ ವರ್ಗಾವಣೆಯಾಗಿದೆಯೇ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಆಹಾರ ಇಲಾಖೆ ವೆಬ್‌ಸೈಟ್ ಲಿಂಕ್ (link) ಕೂಡ ಬಿಡುಗಡೆ ಮಾಡಿದೆ.
ಇದನ್ನೂ ಓದಿ; ಚಿಕ್ಕಮಗಳೂರು: ಅಂಗಡಿಯಲ್ಲಿದ್ದ 40 ಕೆ.ಜಿ. ಟೊಮೆಟೊ ಕಳ್ಳತನ
ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಹಣ ಹಾಕಲಾಗುತ್ತಿದ್ದು, ನಿಮ್ಮ ಖಾತೆಗೆ ಹಣ ಬಂದಿದೆಯೇ? ಎಷ್ಟು ಹಣ ಜಮೆಯಾಗಿದೆ? ಯಾರ ಖಾತೆಗೆ ಜಮೆಯಾಗಿದೆ? ಎಂಬ ಇತ್ಯಾದಿ ಮಾಹಿತಿ ತಿಳಿಸಿಕೊಡುವ ನಿಟ್ಟಿನಲ್ಲಿ ಆಹಾರ ಇಲಾಖೆಯು ವೆಬ್‌ಸೈಟ್ ಲಿಂಕ್ (website link) ಬಿಡುಗಡೆ ಮಾಡಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-12.07.2023
ಅನ್ನಭಾಗ್ಯ ದುಡ್ಡು ಆಕೌಂಟ್ ಸೇರಿದ್ಯಾ ಚೆಕ್ ಮಾಡೋದು ಹೇಗೆ?:
* ಆಹಾರ ಇಲಾಖೆಯ ವೆಬ್ ಸೈಟ್ ಗೆ ಲಾಗಿನ್ (login)ಆಗಿ (ahara.kar.nic.in/home/eservice)
* ಇ- ಸರ್ವಿಸ್ ಪೋರ್ಟಲ್‌ನಲ್ಲಿ( e-service portal) ಡಿಬಿಟಿ ಅನ್ನುವ ಲಿಂಕ್ ಕಾಣಿಸಲಿದೆ ಇದರ ಮೇಲೆ ಕ್ಲಿಕ್ ಮಾಡಿ.
* ಇದರಲ್ಲಿ ಸ್ಟೇಟಸ್ ಆಫ್ ಡಿಬಿಟಿ(dbt) ಅನ್ನುವ ಆಯ್ಕೆ ಗೋಚರಿಸುತ್ತದೆ, ಅದನ್ನು ಆಯ್ಕೆ ಮಾಡಿ.
* ಮುಂದಿನ ಪುಟದಲ್ಲಿ ನಿಗದಿತ ಕಾಲಂನಲ್ಲಿ ರೇಷನ್ ಕಾರ್ಡ್ ನ ನಂಬರ್ ಅಂದ್ರೆ ಆರ್ ಸಿ ನಂಬರ್‌ನ್ನು ಭರ್ತಿಮಾಡಬೇಕು.
* ನಿಮ್ಮ ರೇಷನ್ ಕಾರ್ಡ್ನ(ration card) ಮೇಲ್ಬಾಗದಲ್ಲಿ ಕಾಣುವ ಆರ್ ಸಿ ನಂಬರ್ (rc number) ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಆರಿಸಿ.
* ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್‌ಗೆ ದುಡ್ಡು ಜಮೆ ಆಗಿದ್ಯಾ, ಒಂದೊಮ್ಮೆ ಖಾತೆಗೆ ಹಣ ಕ್ರೆಡಿಟ್(credit) ಆಗದಿದ್ದಲ್ಲಿ ಅದು ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಲಿದೆ.

ಅನ್ನಭಾಗ್ಯ ಹಣ ವರ್ಗಾವಣೆ ಕುರಿತು ಏನೆಲ್ಲಾ ಮಾಹಿತಿ ಲಭ್ಯವಾಗುತ್ತದೆ?:
ಅನ್ನಭಾಗ್ಯ ಹಣ ವರ್ಗಾವಣೆ ಖಚಿತ ಪಡೆಸಿಕೊಳ್ಳಲು ವೆಬ್‌ಸೈಟ್ ಪರಿಶೀಲಿಸಿದಾಗ ಅದರಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಕುಟುಂಬ ಸದಸ್ಯರು, ಪಡಿತರ ಚೀಟಿ ವಿಧಾನ, ಅಕ್ಕಿ ಅರ್ಹತೆ ಪ್ರಮಾಣ (ಇಂತಿಷ್ಟು ಕೆ.ಜಿ) ಹಾಗೂ ಹಣ ವರ್ಗಾವಣೆ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಇದನ್ನೂ ಓದಿ; ಕೊಪ್ಪ: ಆನೆ ಸಂಚಾರ; ಆತಂಕದಲ್ಲಿ ಗ್ರಾಮಸ್ಥರು
ಮೊಬೈಲ್ ಸಂದೇಶ ಕೂಡ ಬರಲಿದೆ:
ಅನ್ನಭಾಗ್ಯ ಯೋಜನೆಯ ಹಣವು ಕುಟುಂಬ ಮುಖ್ಯಸ್ಥರ ಖಾತೆಗೆ ಬರಲಿದೆ. ಒಂದು ಕೆಜಿ ಅಕ್ಕಿಗೆ 36 ರೂಪಾಯಿ ಅಂತೆ ತಲಾ ಐದು ಕೆಜಿ ಅಂತೆ ಕುಟುಂಬ ಸದಸ್ಯರ ಒಟ್ಟಾರೆ ಹಣವು ಖಾತೆಗೆ ಜಮೆಯಾಗಲಿದೆ. ಇನ್ನು ಹಣ ಜಮೆಯಾದ ಕೂಡಲೇ ಬ್ಯಾಂಕ್‌ನಿಂದ ಸಂದೇಶ ಬರಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.