ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಾನು ಲೋಕಾಸಭಾ ಚುನಾವಣೆಗೆ ಜೆಡಿಎಸ್ ನಿಂದ ಆಕಾಂಕ್ಷಿಯಾಗಿದ್ದೇನೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.
ಇದನ್ನೂ ಓದಿ; ನರಸಿಂಹರಾಜಪುರ: ಶಾಲೆಯ ಸಮಸ್ಯೆ ಹೇಳಿಕೊಳ್ಳಲು ಪಾನಮತ್ತರಾಗಿ ಬಂದಿದ್ದ ಪ್ರಾಂಶುಪಾಲ; ಶಾಸಕ ಟಿ.ಡಿ ರಾಜೇಗೌಡ ತರಾಟೆ
ನಗರದಲ್ಲಿ ಭಾನುವಾರ ಮಾದ್ಯಮದೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ನಿಷ್ಠಾವಂತ ಕಟ್ಟಾಳು, ನನಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಕೇಳುತ್ತೇನೆ, ಚಿಕ್ಕಮಗಳೂರು ಹಾಗೂ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡಿದ್ದೇನೆ. ಪಕ್ಷದ ವರಿಷ್ಠರು ಟಿಕೆಟ್ ನೀಡಿದೆ ಆದಲ್ಲಿ ಲೋಕಾಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಹಾಗೂ ಪಕ್ಷದ ನಿರ್ಧಾರಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಹೇಳಿದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕೊಪ್ಪ/ಶೃಂಗೇರಿ: ಟೇಕ್ವಾಂಡೋ ಕರಾಟೆ ತರಬೇತಿ ಪ್ರಾರಂಭ
- ಬಜರಂಗದಳ ಕಾರ್ಯಕರ್ತರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ, ಇಬ್ಬರ ಬಂಧನ
- ಮೂಡಿಗೆರೆ; ವೀಕ್ಷಣೆ ಹುಚ್ಚಾಟಕ್ಕಲ್ಲ, “ಸೆಲ್ಫಿ ನಿಲ್ಲಿಸಿ ಪರಿಸರ ವೀಕ್ಷಿಸಿ”
ಇದನ್ನೂ ಓದಿ; ಖಾಸಗಿ ಬಸ್ ಹಾಗೂ ಲಾರಿ ನಡುವೆ ಅಪಘಾತ; ಬಸ್ ಪಲ್ಟಿ, ಪ್ರಾಣಾಪಾಯದಿಂದ ಪಾರು
ಮೂಡಿಗೆರೆ; ವೀಕ್ಷಣೆ ಹುಚ್ಚಾಟಕ್ಕಲ್ಲ, “ಸೆಲ್ಫಿ ನಿಲ್ಲಿಸಿ ಪರಿಸರ ವೀಕ್ಷಿಸಿ”
ಮೂಡಿಗೆರೆ; (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಳೆ ಕಾಲಿಡುತ್ತಿದ್ದಂತೆ ನಿಸರ್ಗ ಸೌಂದರ್ಯ ಅನಾವರಣಗೊಳ್ಳುತ್ತದೆ. ಮಳೆಗಾಲದಲ್ಲಿ ಈ ಘಾಟಿಯ ಸೌಂದರ್ಯ ವರ್ಣಿಸಲು ಅಸಾಧ್ಯ. ಅಲ್ಲಲ್ಲಿ ಚಿಕ್ಕ-ಚಿಕ್ಕ ತೊರೆಗಳು, ಕಲ್ಲುಗಳ ಮೇಲಿಂದ ಧುಮ್ಮಿಕ್ಕುವ ನೀರು, ಒಂದನೇ ತಿರುವಿನಿಂದ ಆರಂಭವಾಗಿ ಮೇಲೆ ಹತ್ತಿದಂತೆ ತೀವ್ರಗೊಳ್ಳುವ ಮಂಜು, ಸುರಿಯುವ ಮಳೆ, ಕಡಿದಾದ ತಿರುವುಗಳು, ರಸ್ತೆ ಬದಿಯ ಆಳವಾದ ಕಮರಿಗಳು, ಸುತ್ತಲ ಪ್ರಕೃತಿ ಸೌಂದರ್ಯ, ಹಾದಿಯಲ್ಲಿ ಸಿಗುವ ಪಕ್ಷಿ, ಪ್ರಾಣಿಗಳು ಇವನ್ನೆಲ್ಲ ನೋಡುತ್ತಾ ಸಾಗುವಾಗ ದಾರಿ ಕ್ರಮಿಸಿದ್ದೆ? ತಿಳಿಯುವುದಿಲ್ಲ.
ಇದನ್ನೂ ಓದಿ; ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ; ಐವರು mbbs ವಿದ್ಯಾರ್ಥಿಗಳು ಅರೆಸ್ಟ್
ಇನ್ನೇನೂ ಮಳೆಗಾಲ ಕಾಲಿಡುವ ಲಕ್ಷಣಗಳು ಕಂಡುಬಂದಿದ್ದು, ಈ ಸಮಯದಲ್ಲಿ ಘಾಟಿ ಪರಿಸರ ವೀಕ್ಷಣೆ ನೆಪದಲ್ಲಿ ಅನೇಕ ಮಂದಿ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವುದರ ಜೊತೆಗೆ ಸುಗಮ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಾರೆ. ಈ ನಿಟ್ಟಿನಲ್ಲಿ ಫ್ರೆಂಡ್ಸ್ ಕ್ಲಬ್ ಬಣಕಲ್ ಇವರ ವತಿಯಿಂದ ‘ಘಾಟಿ ಪರಿಸರದಲ್ಲಿ ವೀಕ್ಷಣೆ ಹುಚ್ಚಾಟಕ್ಕಲ್ಲ, ಸೆಲ್ಫಿ ನಿಲ್ಲಿಸಿ ಪರಿಸರ ವೀಕ್ಷಿಸಿ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಇದನ್ನೂ ಓದಿ; ಕಡೂರು: ಬರ್ತ್ ಡೇ ಪಾರ್ಟಿಯಲ್ಲಿ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್
ಘಾಟಿಯ ಪರಿಸರದ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿ, ನೋ ಪಾರ್ಕಿಂಗ್, ಅಪಾಯಕಾರಿ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಜಾರುವ ಬಂಡೆಗಳನ್ನು ಏರಿ ಸೆಲ್ಫಿ ತೆಗೆದುಕೊಳ್ಳುವ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಯಿತು. ಘಾಟಿ ಪರಿಸರದಲ್ಲಿ ವಾರಾಂತ್ಯದಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವಂತೆ ಆಗ್ರಹಿಸಿದ್ದು, ಒಂದು ವೇಳೆ ಘಾಟಿ ಪರಿಸರದಲ್ಲಿ ಪ್ರವಾಸಿಗರಿಂದ ಇಂತಹ ಸಮಸ್ಯೆಗಳು ಹೆಚ್ಚಾದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಒದಗಿ ಬರುವ ಕುರಿತು ಎಚ್ಚರಿಸಲಾಯಿತು. ಹಾಗೂ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿಗಳು, ತಿನ್ನಲು ಕಟ್ಟಿಕೊಂಡು ಬಂದಂತಹ ಆಹಾರ ಪದಾರ್ಥಗಳು ಅಲ್ಲಲ್ಲಿ ಬಿಸಾಕಬಾರದು ಎಂಬ ಜಾಗೃತಿ ಮೂಡಿಸಲಾಯಿತು.
ಇನ್ನು ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಷ ಪ್ರವೀಣ್ ಗೌಡ, ಮಧುಕುಮಾರ್, ರಶೀದ್ ಬಣಕಲ್, ಸೂರಿ, ಕಿರಣ್ ಗೌಡ, ಅರುಣ್ ಪೂಜಾರಿ, ಗಗನ್, ಅರುಣ್ ವೆಲೇರಿಯನ್, ಪ್ರಸಾದ್ ಆಚಾರ್ಯ ಹಾಗೂ ಇತರರು ಇದ್ದರು.