Wednesday, November 29, 2023
Homeಇತರೆಕಂಗನಾ ನೀಡಿದ್ದ "ಸ್ವಾತಂತ್ರ ಭಿಕ್ಷೆ" ಹೇಳಿಕೆಯನ್ನು ಮುಸ್ಲಿಂ ವ್ಯಕ್ತಿ ಹೇಳಿದ್ದರೇ ಆತನನ್ನು ಗುಂಡಿಕ್ಕಿ ಸಾಯಿಸುತ್ತಿದ್ದರು: ಅಸಾದುದ್ದೀನ್...

ಕಂಗನಾ ನೀಡಿದ್ದ “ಸ್ವಾತಂತ್ರ ಭಿಕ್ಷೆ” ಹೇಳಿಕೆಯನ್ನು ಮುಸ್ಲಿಂ ವ್ಯಕ್ತಿ ಹೇಳಿದ್ದರೇ ಆತನನ್ನು ಗುಂಡಿಕ್ಕಿ ಸಾಯಿಸುತ್ತಿದ್ದರು: ಅಸಾದುದ್ದೀನ್ ಓವೈಸಿ ಕಿಡಿ

ನವದೆಹಲಿ: ಭಾರತದ ಸ್ವಾತಂತ್ರವನ್ನು ಭಿಕ್ಷೆ ಎಂದು ಕರೆದಿರುವ ಕಂಗನಾ ಅವರ ವಿರುದ್ಧ ಸರ್ಕಾರ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಕಿಡಿಕಾರಿದರು.

ಆಲಿಘರ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಾಲಿವುಡ್ ನಟಿ ಹೇಳಿರುವ ವಿವಾದಾತ್ಮಕ ಹೇಳಿಕೆಗೆ ಕಿಡಿಕಾರಿದ್ದಾರೆ.

ಭಾರತಕ್ಕೆ 2014 ರಲ್ಲಿ ನಿಜವಾದ ಸ್ವಾತಂತ್ರ ಸಿಕ್ಕಿದ್ದು. 1974 ಆಗಸ್ಟ್ 15 ರಲ್ಲಿ ಸಿಕ್ಕಿದ್ದು ಕೇವಲ ಭಿಕ್ಷೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು ಅದಕ್ಕೆ ತಿರುಗೇಟನ್ನು ನೀಡಿದ ಓವೈಸಿ ಈ ಮಾತನ್ನು ಮುಸ್ಲಿಂ ವ್ಯಕ್ತಿ ಹೇಳಿದ್ದರೇ ಅವರಿಗೆ ದೇಶದ್ರೋಹಿ ಎಂದು ಕಪಾಳ ಮೋಕ್ಷ ಮಾಡಿ ಅವರಿಗೆ ಗುಂಡನ್ನೇ ಹಾರಿಸಲಾಗುತ್ತಿತ್ತು ಇಲ್ಲವೇ ಜೈಲಿಗೆ ಕಳುಹಿಸಲಾಗುತ್ತಿತ್ತು ಎಂದು ಓವೈಸಿ ಸುದ್ದಿ ವಾಹಿನಿಗೆ ಮಾಹಿತಿಯನ್ನು ನೀಡಿದರು.

ಇಂತಹ ಹೇಳಿಕೆಯನ್ನು ನೀಡಿರುವ ಕಂಗನಾ ರಣಾವತ್ ಗೆ ಸರ್ಕಾರ ನೀಡಿರುವ ಎಲ್ಲಾ ಗೌರವಾತ್ಮಕ ಪ್ರಶಸ್ತಿಗಳನ್ನು ಹಿಂಪಡೆದುಕೊಳ್ಳಬೇಕು ಏನು ಆಕ್ರೋಶಗೊಂಡರು.

Most Popular

Recent Comments