ಮೋದಿಯವರ ಎದುರೇ ಗೃಹ ಸಚಿವ ಅಮಿತ್ ಶಾರನ್ನು ಹೊಗಳಿದ ಅರುಣ್ ಮಿಶ್ರಾರನ್ನು ವಕೀಲ ಪ್ರಶಾಂತ್ ಭೂಷಣ್ ಟೀಕಿಸಿ ಇದು ನಾಚಿಕಗೇಡಿನ ವರ್ತನೆ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟೀಯ ಮಾನವ ಹಕ್ಕುಗಳ ಆಯೋಗದ 28 ನೇ ಸಂಸ್ಥಾಪನಾ ದಿನದಲ್ಲಿ ರಾಷ್ಟೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಅರುಣ್ ಮಿಶ್ರ ರವರು ಗೃಹ ಸಚಿವ ಅಮಿತ್ ಶಾ ರವರನ್ನು ಮೋದಿಯ ಎದುರಿಗೆ ಹೊಗಳಿ ವಕೀಲ ಪ್ರಶಾಂತ ಭೂಷಣ್ ಟೀಕಿಸಿದ್ದಾರೆ.
ಭಾರತ ಒಂದು ಪ್ರಬಲ ಪ್ರಜಾಪ್ರಭುತ್ವ ಶಕ್ತಿಯುಳ್ಳ ರಾಷ್ಟ್ರವಾಗಿದೆ. ಇದಕ್ಕೆ ಕಾರಣ ಇಲ್ಲಿನ ನಾಯಕತ್ವ ಮತ್ತು ನಾಗರಿಕರು ಎಂಬುದರಲ್ಲಿ ಸಂಶಯವಿಲ್ಲ ಆದರೆ ಇಂದು ಕೆಲವು ಅಂತಾರಾಷ್ಟ್ರೀಯ ಶಕ್ತಿಗಳ ಪ್ರಭಾವಕ್ಕೆ ಒಳಗಾದವರು ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪ ಮಾಡುವ ಹೊಸ ಪ್ರವೃತ್ತಿ ಶುರುವಾಗಿದೆ.
ಇವತ್ತು ಜಮ್ಮು-ಕಾಶ್ಮೀರದಲ್ಲಿ ಒಂದು ಹೊಸ ಯುಗ ಪ್ರಾರಂಭವಾಗಿದೆ ಅಂದರೆ ಅದಕ್ಕೆ ಮೂಲ ಕಾರಣ ಅಮಿತ್ ಶಾ. ಅವರನ್ನು ಇಂದಿನ ಕಾರ್ಯಕ್ರಮಕ್ಕೆ ಸ್ವಾಗತಿಸಲು ತುಂಬಾ ಸಂತೋಷವಾಗುತ್ತದೆ. ಅಮಿತ್ ಶಾ ಅವರ ಸತತ ಪ್ರಯತ್ನದಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಇಂದು ಶಾಂತಿ ಸ್ಥಾಪನೆಯಾಗುತ್ತಿದೆ. ಕಾನೂನು-ಸುವ್ಯವಸ್ಥೆ ಸದೃಢಗೊಂಡಿದೆ ಎಂದು ಹೇಳಿದರು.
ಗೃಹ ಸಚಿವ ಅಮಿತ್ ಶಾರನ್ನು ಹೊಗಳಿದ ಅರುಣ್ ಮಿಶ್ರಾರನ್ನು ವಕೀಲ ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ. ಅರುಣ್ ಮಿಶ್ರಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದುಕೊಂಡೇ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಹೊಗಳಿದ್ದರು. ಆಗಲೇ ಅವರು ತಮ್ಮ ಗೌರವವನ್ನು ಕಳೆದುಕೊಂಡಿದ್ದರು. ಈಗ ಮಾನವಹಕ್ಕುಗಳ ರಾಷ್ಟ್ರೀಯ ಆಯೋಗದ ಮುಖ್ಯಸ್ಥರಾಗಿದ್ದುಕೊಂಡು ಅಮಿತ್ ಶಾರನ್ನು ಹೊಗಳುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ವರ್ತನೆ. ಇಂಥವರು ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಾರೆ ಎಂದು ಹೇಗೆ ನಂಬಿಕೊಳ್ಳೋಣ? ಎಂದು ಪ್ರಶಾಂತ್ ಭೂಷಣ್ ಪ್ರಶ್ನಿಸಿದ್ದಾರೆ.