ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜೂಜಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ; ಪೆಟ್ರೋಲ್ ತುಂಬಿಸುವಾಗಲೇ ಬ್ಯಾಟರಿ ಸ್ಪೋಟ
ಇದನ್ನೂ ಓದಿ; ಬೈಕ್ ಅಪಘಾತದಲ್ಲಿ ಯೋಧನ ಸಾವು; ಪೊಲೀಸರ ಬಳಿ ಹೆತ್ತವರು ಕೇಳಿದ್ದು ಏನು?
ಸಿಂಗಟಗೆರೆ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದ ಐವರನ್ನು ಬಂಧಿಸಿ, ಪಣಕ್ಕಿಟ್ಟಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಸಿ.ಎನ್.ನಾಗರಾಜ್ (40), ಕಲ್ಲೇಶಪ್ಪ (33), ಎಸ್.ಕೆ.ಕಲ್ಲೇಶಪ್ಪ (33), ಅಶೋಕ (38) ಕಲ್ಲೇಶಪ್ಪ (50) ಬಂಧಿತರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸೈಟ್ ವಿಚಾರಕ್ಕೆ ಗಲಾಟೆ; ಮಹಿಳೆಗೆ ಚಾಕುವಿನಿಂದ ಹಲ್ಲೆ
- ಉಡುಪಿಯಿಂದ ಮಹಿಳೆ ನಾಪತ್ತೆ: ದೂರು ದಾಖಲು
- ಸೇತುವೆ ಬಳಿ ಎರಡು ಗೋವುಗಳ ತಲೆ, ಕಾಲು ಪತ್ತೆ
ಆರೋಪಿಗಳಿಂದ 12,200 ರೂ. ಜಪ್ತಿ ಮಾಡಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾನು ಕಾಂಗ್ರೆಸ್ ಶಾಸಕನಾಗಿರಬಹುದು ಆದರೆ ನಾನೊಬ್ಬ ಸಂಘದ ಸ್ವಯಂಸೇವಕ ಎನ್ನಲು ಹೆಮ್ಮೆಯಿದೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಾನೊಬ್ಬ ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಚಿಕ್ಕಮಗಳೂರು ಶಾಸಕ ಎಚ್. ಡಿ ತಮ್ಮಯ್ಯ ಹೇಳಿದ್ದಾರೆ.
ಇದನ್ನೂ ಓದಿ; ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ರೈಡ್
ನಗರದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಸಮಿತಿಯಲ್ಲಿ ಕೋದಂಡ ಸ್ವಾಮಿ ದೇವಸ್ಥಾನದ ಸಮಿತಿಯಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡುವಾಗ ದಾನಿಗಳ ಬಳಿ ಸಂಗ್ರಹಕ್ಕೆ ಹೋಗುತ್ತಿದ್ದ ಸಮಯದಲ್ಲಿ ಅವರು ನೀಡುತ್ತಿದ್ದ 500 ರೂ. ದೊಡ್ಡ ಹಣವಾಗುತ್ತಿತ್ತು. ಇದನ್ನು ಚಂದ ವಸೂಲಿ ಎಂದು ಹೇಳುವುದಿಲ್ಲ ಸಂಘದಲ್ಲಿ ಸಂಗ್ರಹ ಎಂದು ಹೇಳಿಕೊಂಡಿದ್ದಾರೆ. ನಾನು ಬಿಜೆಪಿಯಲ್ಲಿ 15 ರಿಂದ 16 ವರ್ಷ ಕೆಲಸ ಮಾಡಿದ್ದೇನೆ. ಈಗಲೂ ನಾನೊಬ್ಬ ಸಂಘದ (rss) ಸ್ವಯಂ ಸೇವಕ. ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿದ್ದರೂ ಸಂಘದಲ್ಲಿನ ಶಿಸ್ತಿನಿಂದ ನಾನೊಬ್ಬ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.
ನಾನು ಜಾತ್ಯಾತೀತ ವ್ಯಕ್ತಿ, ಜಾತ್ಯಾತೀತ ಶಾಸಕ ಪ್ರಮಾಣ ವಚನ ಸ್ವೀಕರಿಸುವಾಗ ಅದೇ ನಿಟ್ಟಿನಲ್ಲಿ ಸ್ವೀಕರಿಸಿದ್ದೇನೆ. ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿಯೇ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ.