ಮಡಿಕೇರಿ: ಮಾದಕ ವಸ್ತುಗಳಾದ ಚರಸ್ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕಾರ್ಮಾಡು ಚೆಕ್‌ಪೋಸ್ಟ್ ನಲ್ಲಿ ನಡೆದಿದೆ. ತಮಪ್ಪ ಸರ್ಕಾರ್, ಬೀಬವ್, ದೇವಾಂಸ್ ಶರ್ಮಾ ಹಾಗೂ ಆದಿತ್ಯ ಕುಮಾರ್ ಬಂಧಿತ ಆರೋಪಿಗಳು.
ಇದನ್ನೂ ಓದಿ; ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಮನೆ ಕಳ್ಳತನದ ಆರೋಪಿ ಬಂಧನ
ಇದನ್ನೂ ಓದಿ; ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ
ಚುನಾವಣ ಕರ್ತವ್ಯದಲ್ಲಿದ್ದ ಅಬಕಾರಿ ಇಲಾಖೆ ಸಿಬ್ಬಂದಿ ಕಾರೊಂದನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತುಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಗಾಂಜಾ ಸೇವನೆ ಮಾಡಿರುವುದು ಕಂಡು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ 10 ಗ್ರಾಂ ಚರಸ್, 35 ಗ್ರಾಂ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ದತ್ತಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ದೀಪಕ್ ದೊಡ್ಡಯ್ಯ
- ಹೊಳೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತ್ಯು.!
- ಶಾಸಕ ಸಿ.ಟಿ ರವಿ ವಿರುದ್ಧ ನಕಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತ ಪೋಲಿಸ್ ವಶಕ್ಕೆ
ವಿರಾಜಪೇಟೆ ಉಪ ವಿಭಾಗ ಕಚೇರಿಯ ಅಬಕಾರಿ ಉಪ ಅಧೀಕ್ಷಕ ಎಂ.ಎನ್. ನಟರಾಜು, ಸಿಬಂದಿ ಎನ್. ಜಿ. ಮದನ್ ಕುಮಾರ್, ಸಂತೋಷ್, ಚಾಲಕ ದರ್ಶನ್ ಪೊಲೀಸ್ ಸಿಬ್ಬಂದಿ ಸಂತೋಷ್ ಕುಮಾರ್, ಅರಣ್ಯ ಇಲಾಖಾ ಸಿಬ್ಬಂದಿ ಉದಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಬಾಳೆಬರೆ ಘಾಟಿ; ವಾಹನ ಸಂಚಾರ ಆರಂಭ
ಶಿವಮೊಗ್ಗ: ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ ಬಾಳೆಬರೆ (ಹುಲಿಕಲ್) ಘಾಟಿಯ ಕಾಂಕ್ರಿಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ರಾತ್ರಿಯಿಂದ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ.
ಇದನ್ನೂ ಓದಿ; ಶಾಸಕ ಸಿ. ಟಿ ರವಿ ಆಸ್ಪತ್ರೆಗೆ ದಾಖಲು.. ಪತ್ನಿ ಪಲ್ಲವಿ ಸಿಟಿ ರವಿ ಕಣ್ಣೀರು!
ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ, ಚರಂಡಿ ಮತ್ತಿತರ ಕಾಮಗಾರಿಗಳಾಗಿ ಫೆ.5ರಿಂದ ಎ. 5ರ ವರೆಗೆ ಈ ಘಾಟಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆ ಬಳಿಕ ಎ. 5ರಂದು ಕಾಮಗಾರಿ ಪೂರ್ಣಗೊಳ್ಳದ ಕಾರಣ ಮತ್ತೆ 10 ದಿನಗಳ ವರೆಗೆ ಸಂಚಾರ ನಿಷೇಧಿಸಲಾಗಿತ್ತು. ಈಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
3.5 ಕಿ.ಮೀ. ಕಾಮಗಾರಿ:
ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಬಾಳೆಬರೆ ಘಾಟಿಯ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 3 ಕೋಟಿ.ರೂ. ವೆಚ್ಚದಲ್ಲಿ ಅಂದಾಜು 1 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ 10 ಕೋಟಿ.ರೂ. ವೆಚ್ಚದಲ್ಲಿ 2.5 ಕಿ.ಮೀ. ಸೇರಿದಂತೆ ಒಟ್ಟು 3.5 ಕಿ.ಮೀ. ದೂರದವರೆಗೆ ರಸ್ತೆ ಅಗಲ, ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ.
3.5 ಕಿ.ಮೀ. ಅಭಿವೃದ್ಧಿ ಬಾಕಿ:
ಬಾಳೆಬರೆ ಘಾಟಿಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆ ಸೇರಿ ಹುಲಿಕಲ್ ಚೆಕ್ ಪೋಸ್ಟ್‌ನಿಂದ ಹೊಸಂಗಡಿಯ ಘಾಟಿಯ ಬುಡದ ವರೆಗೆ 14.5 ಕಿ.ಮೀ. ದೂರವಿದೆ. ಶಿವಮೊಗ್ಗ ಜಿಲ್ಲೆಯ 8 ಕಿ.ಮೀ. ಪೈಕಿ ಈ ಹಿಂದೆ ಸ್ವಲ್ಪ ಕಾಂಕ್ರಿಟೀಕರಣ ಆಗಿದ್ದು, ಈಗ ಬಾಕಿಯಿದ್ದ 2.5 ಕಿ.ಮೀ.ನೊಂದಿಗೆ ಕಾಂಕ್ರಿಟೀಕರಣಗೊಂಡಿದೆ. ಉಡುಪಿ ಜಿಲ್ಲೆಯ 6.5 ಕಿ.ಮೀ. ಘಾಟಿಯ ಪೈಕಿ ಈ ಹಿಂದೆ 2 ಕಿ.ಮೀ., ಈಗ 1 ಕಿ.ಮೀ. ಸೇರಿದಂತೆ ಒಟ್ಟು 3 ಕಿ.ಮೀ. ಕಾಂಕ್ರಿಟೀಕರಣಗೊಂಡಂತಾಗಿದೆ. ಇನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ 3.5 ಕಿ.ಮೀ. ಘಾಟಿ ರಸ್ತೆ ಕಾಂಕ್ರಿಟೀಕರಣ ಬಾಕಿ ಇದೆ.
ಇದನ್ನೂ ಓದಿ; ಒಳಮೀಸಲಾತಿ ಕಿಚ್ಚು: ತರ್ಲಘಟ್ಟ ತಾಂಡಾದಲ್ಲಿ ವಿಜಯೇಂದ್ರಗೆ ಪ್ರತಿಭಟನೆಯ ಸ್ವಾಗತ