Thursday, April 25, 2024
Homeಕೃಷಿಎಲೆಚುಕ್ಕಿ ರೋಗದ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಲು ತಜ್ಞರ ಸಮಿತಿಯನ್ನು ರಚಿಸಿದ ಕೇಂದ್ರ

ಎಲೆಚುಕ್ಕಿ ರೋಗದ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಲು ತಜ್ಞರ ಸಮಿತಿಯನ್ನು ರಚಿಸಿದ ಕೇಂದ್ರ

ಕೃಷಿಕರ ತೋಟವನ್ನು ಬಾಧಿಸುತ್ತಿರುವ ಮಾರಕ ಖಾಯಿಲೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗದ ಸಂಶೋಧನೆ ಹಾಗೂ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಸಮಿತಿಯನ್ನು ನೇಮಿಸಿದೆ.

ಪ್ರಮುಖವಾಗಿ ರೋಗದ ಹಾವಳಿಗೆ ಕಾರಣ, ಕ್ರಿಮಿನಾಶಕದಿಂದಲೂ ನಿಯಂತ್ರಣಕ್ಕೆ ಬಾರದಿರುವುದು ಸೇರಿ ಎಲ್ಲಾ ಆಯಾಮಗಳಲ್ಲಿ ಈ ಕುರಿತು ಅಧ್ಯಯನ ನಡೆಸಿ, ಪರಿಹಾರ ಮಾರ್ಗದ ಕಾರ್ಯತಂತ್ರ ರೂಪಿಸಿಕೊಡುವುದು ಈ ಸಮಿತಿಯ ಜವಾಬ್ದಾರಿಯಾಗಿದೆ.

ಕಾಸರಗೋಡಿನ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಅನಿತಾ ಕರುಣ್ ಸೇರಿ ಒಟ್ಟು ಎಂಟು ತಜ್ಞರು ಹಾಗೂ ಒಬ್ಬ ಸದಸ್ಯ ಕಾರ್ಯದರ್ಶಿ ತಂಡದಲ್ಲಿದ್ದು ಈ ಕುರಿತು ಅಧ್ಯಯನ ನಡೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸಮಿತಿಯು ವ್ಯಾಪಕವಾಗಿ ಹರಡುತ್ತಿರುವ ಈ ರೋಗದ ನಿಯಂತ್ರಣದ ಕುರಿತು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರದ ಕೃಷಿ ಸಚಿವರಾಗಿದ್ದ ನರೇಂದ್ರ ಸಿಂಗ್ ತೋಮರ್ ರನ್ನು ಭೇಟಿ ಮಾಡಿ ಈ ಕುರಿತು ತಿಳಿಸಿತ್ತು.

ವೈರಲ್ ಆದ ಕಾರ್ಟೂನ್: 

ಈ ನಡುವೆ ಕಾರ್ಟೂನ್ ಒಂದು ಎಲ್ಲೆಡೆ ವೈರಲ್ ಆಗುತ್ತಿದ್ದು,ಕನ್ನಡ ಚಿತ್ರರಂಗದ ಮೂಲಕ ದೇಶದ ಜನರನ್ನು ಹೊಕ್ಕಿರುವ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ಕಾಂತಾರದಂತೆ, ಮಲೆನಾಡಿಗರನ್ನು ಎಲೆಚುಕ್ಕಿ ರೋಗವು ಕಾಡುತ್ತಿದೆ ಎಂಬುದು ಚಿತ್ರದ ಮೂಲಕ ವ್ಯಕ್ತವಾಗುತ್ತದೆ. ಕಾರ್ಟೂನ್ ನಲ್ಲಿ ಬರುವ ಇಬ್ಬರ ಸಂಭಾಷಣೆಯಂತಿರುವ ಚಿತ್ರದಲ್ಲಿ, ಸದ್ಯಕ್ಕೆ ಮಲೆನಾಡಿನಲ್ಲಿ ಕೇಳಿ ಬರುತ್ತಿರುವುದು ಎರಡೇಮಾತು, ಒಂದು ನಿಮ್ಮಲ್ಲಿ ಎಲೆಚುಕ್ಕಿ ರೋಗ ಇದ್ಯಾ ? ಇನ್ನೊಂದು ನೀವು ಕಾಂತಾರ ಸಿನೆಮಾ ನೋಡುದ್ರಾ ಎಂಬ ಎರಡು ಮಾತುಗಳು ಕೇಳಿ ಬರ್ತಿವೆ ಎಂಬುದಾಗಿ ರೋಗದ ಕುರಿತು ಉಲ್ಲೇಖಿಸಲಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಐದಾರು ಜಿಲ್ಲೆಗಳ 20 ಸಾವಿರ ಹೆಕ್ಟೇರ್ ಪ್ರದೇಶದ ಅಡಿಕೆ ತೋಟಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಕೃಷಿಯನ್ನೇ ಜೀವನಾಧಾರವಾಗಿರಿಸಿಕೊಂಡಿರುವ ಅನೇಕ ಕುಟುಂಬಗಳ ಕೃಷಿಕರು ಎದುರಿಸುತ್ತಿರುವ ಸಮಸ್ಯೆಯ ತೀವ್ರತೆಯನ್ನು ಕೇಂದ್ರದ ಕೃಷಿ ಮಂತ್ರಿಗಳಿಗೆ ತಿಳಿಸಲಾಗಿತ್ತು.

ಶಿವಮೊಗ್ಗ: ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು :

ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗದ ವೆಂಕಟೇಶ ನಗರದ ಎ.ಎನ್.ಕೆ ರಸ್ತೆಯ ಮೊದಲನೇ ತಿರುವಿನಲ್ಲಿ ನಡೆದಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ವಿಜಯ್​​ (37) ಎಂದು ಗುರುತಿಸಲಾಗಿದೆ. ವಿಜಯ್ ಶಿವಮೊಗ್ಗದ ಭಾರತ ನ್ಯೋರೂ ಕ್ಲಿನಿಕ್​ನಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ನಿನ್ನೆ ರಾತ್ರಿ ತಮ್ಮ ತಂದೆ ಹಾಗೂ ಕುಟುಂಬದವರ ಜೊತೆ ಚಲನಚಿತ್ರ ವೀಕ್ಷಣೆ ಮಾಡಿ ಮನೆಗೆ ಬಂದಿದ್ದಾರೆ. ಮನೆಗೆ ಬಂದ ವಿಜಯ್​ಗೆ ಪೋನ್ ಬಂದಿದೆ. ತಕ್ಷಣ ವಿಜಯ್ ಮನೆಯಿಂದ ಹೊರಗೆ ಹೋಗಿದ್ದಾರೆ. ಪೋನ್ ಮಾಡಿದವರು ಎ.ಎನ್.ಕೆ ರಸ್ತೆಗೆ ಕರೆಯಿಸಿಕೊಂಡು ಕೊಲೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ವಿಜಯ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದು, ಗಾಂಧಿನಗರದಲ್ಲಿ ವಾಸ ಮಾಡುತ್ತಿದ್ದರು. ಕೊಲೆಗೆ ಕುಟುಂಬ ಕಲಹವೇ ಕಾರಣ ಎನ್ನಲಾಗುತ್ತಿದ್ದು, ಘಟನಾ ಸಂಬಂಧ ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಕೊಲೆಯ ದೃಶ್ಯ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರು ವಿಜಯ್​​ ಅವರನ್ನು ಓಡಿಸಿಕೊಂಡು ಬಂದು ಚಾಕುವಿನಿಂದ ಚುಚ್ಚಿ‌ ಕೊಲೆ ಮಾಡಿದ್ದಾರೆ. ಜಯನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

 

Most Popular

Recent Comments